ಬೆಂಗಳೂರು : ಅನೇಕ ಜನರಿಗೆ ಎರಡನೇ ಡೋಸ್ ಲಸಿಕೆ ಇನ್ನೂ ಸಿಕ್ಕಿಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಎರಡನೇ ಡೋಸ್ ಪಡೆಯಲು ವಿಳಂಬವಾದರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಈಟಿವಿ ಭಾರತದ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಮನವಿ ಮಾಡಿದರು.
ಈಗಾಗಲೇ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಪಡೆಯಲು 12 ರಿಂದ 16 ವಾರಗಳ ಅಂತರವನ್ನ ಸರ್ಕಾರ ನಿಗದಿಪಡಿಸಿದೆ. ಕೋವಿಶೀಲ್ಡ್ 2ನೇ ಲಸಿಕೆ ಪಡೆಯಲು ಹೆಚ್ಚು ಸಮಯಾವಕಾಶವಿದೆ.
ಕೋವ್ಯಾಕ್ಸಿನ್ ಎರಡನೇ ಲಸಿಕೆ ಪಡೆಯಲು 4 ರಿಂದ 6 ವಾರವಿರುವ ಕಾರಣ ಇನ್ನು ಎರಡನೇ ಲಸಿಕೆ ಪಡೆದಿಲ್ಲ ಎಂದರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು.
ಇದನ್ನೂ ಓದಿ:ಸೋಂಕು ತಡೆಗೆ ಲಾಕ್ಡೌನ್ ಮುಂದುವರೆಯಲಿ: ಮಾಜಿ ಸಚಿವ ರಮೇಶ ಜಾರಕಿಹೊಳಿ
ಒಂದೆರಡು ದಿನ ವಿಳಂಬವಾದರೂ ಲಸಿಕೆಯ ಸಾಮರ್ಥ್ಯ ಕಡಿಮೆ ಆಗಲ್ಲ. ಸದ್ಯಕ್ಕೆ ಎರಡನೇ ಲಸಿಕೆ ನೀಡಲು ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆಗೆ ಹೋಗಿ ಎರಡನೇ ಲಸಿಕೆ ಪಡೆಯಬಹುದು ಎಂದರು.