ಬೆಂಗಳೂರು : ಕೊರೊನಾ ನಡುವೆಯೂ ಬಹುತೇಕ ಪಾರ್ಕ್ಗಳಲ್ಲಿ ಜನರು ವ್ಯಾಯಾಮ ಪ್ರಾರಂಭಿಸಿದ್ದಾರೆ. ಕೆಲವರು ಅಂತರ ಮರೆತು ಒಟ್ಟಾಗಿ ಓಡಾಡುತ್ತಿರೋದು ಸಿಲಿಕಾನ್ ಸಿಟಿಯ ಕೆಲ ಪಾರ್ಕ್ಗಳಲ್ಲಿ ಕಂಡು ಬಂದಿದೆ.
ಆರೋಗ್ಯ ಹಾಗೂ ಫಿಟ್ನೆಸ್ಗಾಗಿ ವಾಕಿಂಗ್ ಅಗತ್ಯ. ಆದರೆ, ಈ ವೇಳೆ ಜನರು ಮಾಡುವ ಕೆಲ ಸಣ್ಣ ತಪ್ಪುಗಳಿಂದಾಗಿ ಕೋವಿಡ್ ಮತ್ತಷ್ಟು ವ್ಯಾಪಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಒಂದು ವೇಳೆ ವಾಕಿಂಗ್ ಮಾಡಲೇಬೇಕೆಂದರೆ ಕೆಲ ನಿಯಮಗಳನ್ನು ಅನುಸರಿಸಿದರೆ ಒಳಿತು.
ಬೆಳ್ಳಂಬೆಳಗ್ಗೆ ಸ್ವಚ್ಛ ಗಾಳಿಯಲ್ಲಿ ವಾಕ್ ಮಾಡಿ, ಜಾಗಿಂಗ್ ವೇಳೆ ಮಾಸ್ಕ್ ಧರಿಸಿ, ಪಾರ್ಕ್ನಲ್ಲಿ ಹೆಚ್ಚು ಜನರಿದ್ದರೆ, ರಸ್ತೆಯಲ್ಲೇ ವಾಕ್ ಮಾಡಿ.. ಕೊರೊನಾ ಹೆಚ್ಚುತ್ತಿರುವ ಕಾರಣ ಉಡಾಫೆ ತೋರದಿರಿ ಅಂತಾರೆ ರಾಧಾ ಕೃಷ್ಣ ಆಸ್ಪತ್ರೆಯ ವೈದ್ಯೆ ಡಾ. ವಿದ್ಯಾ ವಿ. ಭಟ್.