ETV Bharat / state

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆಗೆ ಕೊರೊನಾ ಪಾಸಿಟಿವ್! - ಗರ್ಭಿಣಿಗೆ ಕೊರೊನಾ

ಕೊರೊನಾ ರೋಗ ಲಕ್ಷಣಗಳು ಇರುವ ರೋಗಿಗಳ ಗಂಟಲು ದ್ರವದ ಮಾದರಿ ತೆಗೆಯುತ್ತಿದ್ದ ವೈದ್ಯೆಗೆ ಕೊರೊನಾ ದೃಢಪಟ್ಟಿದೆ. ಹೊರ ರೋಗಿಗಳ ಸ್ಕ್ರೀನಿಂಗ್ ವಿಭಾಗದಲ್ಲಿ ಇವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.

victoria
victoria
author img

By

Published : Jun 10, 2020, 11:46 AM IST

Updated : Jun 10, 2020, 1:23 PM IST

ಬೆಂಗಳೂರು: ಕೊರೊನಾ ವೈರಸ್ ಸದ್ಯ ವಾರಿಯರ್ಸ್​​​ ಬಿಟ್ಟಿಲ್ಲ. ಎಷ್ಟೇ ಮುಂಜಾಗ್ರತಾ ಕ್ರಮ ವಹಿಸಿದ್ದರೂ, ಕೊರೊನಾ ವಾರಿಯರ್​ಗಳಲ್ಲಿ ಸೋಂಕು ಪತ್ತೆಯಾಗುತ್ತಿದೆ.

ಇದೀಗ ವಿಕ್ಟೋರಿಯಾದಲ್ಲಿ ಮತ್ತೊಬ್ಬ ವೈದ್ಯೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇವರು ರೇಡಿಯಾಲಜಿ ವಿಭಾಗದಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದರು. ಹೊರ ರೋಗಿಗಳ ಸ್ಕ್ರೀನಿಂಗ್ ವಿಭಾಗದಲ್ಲಿ ಇವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.

ಕೊರೊನಾ ರೋಗ ಲಕ್ಷಣಗಳು ಇರುವ ರೋಗಿಗಳ ಗಂಟಲು ದ್ರವದ ಮಾದರಿ ತೆಗೆಯುತ್ತಿದ್ದರು. ಇತ್ತೀಚೆಗೆ ಮಂಗಳೂರಿಗೆ ಹೋಗಿ ಬಂದಿರುವ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ.

ಜ್ವರ ಇದ್ದ ಕಾರಣಕ್ಕೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ವರದಿ ಬರುವ ತನಕ ವೈದ್ಯೆಯನ್ನ ಬೌರಿಂಗ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ನಲ್ಲಿ ಇರಿಸಲಾಗಿತ್ತು. ರಿಪೋರ್ಟ್ ಪಾಸಿಟಿವ್ ಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಇತ್ತ ಬೆಂಗಳೂರಿಗೆ ಮತ್ತೆ ಮಹಾರಾಷ್ಟ್ರ ಕಂಟಕ ಮಾತ್ರ ಕಡಿಮೆ ಆಗಿಲ್ಲ. ಮಹಾರಾಷ್ಟ್ರದಿಂದ ಬಂದಿದ್ದ ಐವರಲ್ಲಿ ಕೊರೊನಾ ಪತ್ತೆಯಾಗಿದೆ. ಚಿಕ್ಕಜಾಲ ಸ್ಪೋರ್ಟ್ಸ್ ಹಾಸ್ಪೆಲ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.

ಮಹಾರಾಷ್ಟ್ರದಿಂದ ಬಾಗಲಗುಂಟೆಗೆ ಬಂದಿದ್ದ ವ್ಯಕ್ತಿಗೂ ಕೊರೊನಾ ದೃಢಪಟ್ಟಿದ್ದು, ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿರುವುದಾಗಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗರ್ಭಿಣಿ ಹಾಗೂ ವಯೋವೃದ್ಧರಲ್ಲಿ ಕೊರೊನಾ:

ಬೆಂಗಳೂರಿನ ಬನಶಂಕರಿ ನಿವಾಸಿ 27 ವರ್ಷದ ಗರ್ಭಿಣಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಗರ್ಭಿಣಿಯರಿಗೆ ಕೊರೊನಾ ಟೆಸ್ಟ್ ಮಾಡುವುದು ಕಡ್ಡಾಯ. ಹೀಗಾಗಿ ಕಿಮ್ಸ್ ಆಸ್ಪತ್ರೆಗೆ ತಪಾಸಣೆಗೆಗಾಗಿ ಹೋದಾಗ ಗಂಟಲು ದ್ರವದ ಮಾದರಿ ಪಡೆಯಲಾಗಿತ್ತು. ‌ಈಗ ಪಾಸಿಟಿವ್ ಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಕೋಲ್ಸ್ ಪಾರ್ಕ್‌ನಲ್ಲಿ 60 ವರ್ಷದ ವೃದ್ಧನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿನ ಮೂಲ ಪತ್ತೆಯಾಗಿಲ್ಲ.ಸದ್ಯ ನಿಗದಿತ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

34 ಮಂದಿ ಪೊಲೀಸರು ಕ್ವಾರಂಟೈನ್:

ಸಿಟಿ ಮಾರ್ಕೆಟ್ ಕಾನ್ಸ್ಟೇಬಲ್​ಗೆ ಕೊರೊನಾ ಬಂದ‌ ಹಿನ್ನೆಲೆ, 34 ಪೊಲೀಸರನ್ನ ಕ್ವಾರಂಟೈನ್ ಮಾಡಲಾಗಿದೆ. ಆನಂದ್ ರಾವ್ ಸರ್ಕಲ್ ಬಳಿಯ ಪೊಲೀಸ್ ‌ಕ್ವಾಟ್ರಸ್​ನ‌ ಗೆಸ್ಟ್ ಹೌಸ್​ನಲ್ಲಿದ್ದ ಕಾನ್ಸ್ಟೇಬಲ್ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಕೇಂದ್ರ ವಿಭಾಗ ಹಾಗೂ ಪಶ್ಚಿಮ ವಿಭಾಗದ ಪೊಲೀಸರು ಇರುವ ಕ್ವಾಟ್ರಸ್ ಸೀಲ್ ಡೌನ್ ಮಾಡಲಾಗಿದೆ. ಪಾದರಾಯನಪುರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಆಗಿದ್ದ ಕಾನ್ಸ್ಟೇಬಲ್​ಗೆ ಕೊರೊನಾ ಕಾಣಿಸಿಕೊಂಡಿತ್ತು.

Last Updated : Jun 10, 2020, 1:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.