ETV Bharat / state

ಜಮೀರ್ ನಿವಾಸಕ್ಕೆ ಡಿಕೆಶಿ ಭೇಟಿ: ಸುದೀರ್ಘ ಸಮಾಲೋಚನೆ

ಇಂದು ಜಮೀರ್ ಅಹಮದ್ ಖಾನ್ ಜೊತೆ ಮಾತುಕತೆ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಸದ್ಯವೇ ಪಕ್ಷದ ರಾಜ್ಯ ನಾಯಕರ ಜೊತೆ ಈ ವಿಚಾರವಾಗಿ ಚರ್ಚಿಸಿ ಹೋರಾಟ ಕೈಗೊಳ್ಳುವ ಸಂಬಂಧ ರೂಪುರೇಷೆ ಹೆಣೆಯಲು ತೀರ್ಮಾನಿಸಿದ್ದಾರೆ.

DKS visit to Zameer's residence
ಜಮೀರ್ ನಿವಾಸಕ್ಕೆ ಡಿಕೆಶಿ ಭೇಟಿ: ಸುದೀರ್ಘ ಸಮಾಲೋಚನೆ
author img

By

Published : Aug 10, 2021, 10:16 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಂಟೋನ್ಮೆಂಟ್ ಸಮೀಪವಿರುವ ಶಾಸಕ ಜಮೀರ್ ಅಹಮದ್ ಖಾನ್ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು. ಆ.6 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ಅಹಮದ್ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು.

ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ಇವರ ಮೇಲೆ ದಾಳಿ ನಡೆದಿದ್ದು, ಒಂದು ದಿನ ಸುದೀರ್ಘ ವಿಚಾರಣೆ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ದಿಲ್ಲಿಗೆ ತೆರಳಿದ್ದರು. ಇದಾದ ಬಳಿಕ ಆ.7ರಂದು ದಿಲ್ಲಿಗೆ ಬಂದು ವಿಚಾರಣೆ ಎದುರಿಸುವಂತೆ ಜಮೀರ್​ಗೆ ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.

ಎಂಟರಂದು ದಿಲ್ಲಿಗೆ ತೆರಳಿದ್ದ ಜಮೀರ್ ಅಹಮದ್, ಇಂದು ನಗರಕ್ಕೆ ವಾಪಸ್​ ಆಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವ​ರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. ಇವರು ನೀಡಿದ ಮಾಹಿತಿಯನ್ನು ಪಕ್ಷದ ಹೈಕಮಾಂಡ್ ನಾಯಕರಿಗೂ ಶಿವಕುಮಾರ್ ತಿಳಿಸಲಿದ್ದಾರೆ.

ಈಗಾಗಲೇ ಪಕ್ಷದ ಹೈಕಮಾಂಡ್ ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಜಮೀರ್ ನಿವಾಸದ ಮೇಲಿನ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿಯನ್ನು ಖಂಡಿಸಿ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಜಮೀರ್ ನಿವಾಸಕ್ಕೆ ಡಿಕೆಶಿ ಭೇಟಿ
ಜಮೀರ್ ನಿವಾಸಕ್ಕೆ ಡಿಕೆಶಿ ಭೇಟಿ

ಇಂದು ಜಮೀರ್ ಅಹಮದ್ ಖಾನ್ ಜೊತೆ ಮಾತುಕತೆ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಸದ್ಯವೇ ಪಕ್ಷದ ರಾಜ್ಯ ನಾಯಕರ ಜೊತೆ ಈ ವಿಚಾರವಾಗಿ ಚರ್ಚಿಸಿ ಹೋರಾಟ ಕೈಗೊಳ್ಳುವ ಸಂಬಂಧ ರೂಪುರೇಷೆ ಹೆಣೆಯಲು ತೀರ್ಮಾನಿಸಿದ್ದಾರೆ.

ಕಳೆದ ವರ್ಷ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರ ಸೋದರ ಡಿ ಕೆ ಸುರೇಶ್ ಹಾಗೂ ಆಪ್ತರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಸುದೀರ್ಘ ಮೂರು ದಿನಗಳ ಕಾಲ ತಪಾಸಣೆ ಬಳಿಕ ದಿಲ್ಲಿಗೆ ತೆರಳಿ ಶಿವಕುಮಾರ್​ ಅವರನ್ನೇ ಅಲ್ಲಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.