ಬೆಂಗಳೂರು: ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿದೆ. ಇದಕ್ಕೆ ರಾಜ್ಯದ 25 ಬಿಜೆಪಿ ಸಂಸದರು ಸುಮ್ಮನಿದ್ದಾರೆ. ಅವರೆಲ್ಲ ಶಾಲೆಗೆ ಹೋಗುವ ಮಕ್ಕಳಿದ್ದಂತೆ ಎಂದು ಶಾಸಕ ಡಿ ಕೆ ಶಿವಕುಮಾರ ಲೇವಡಿ ಮಾಡಿದ್ದಾರೆ.
ಇಲ್ಲಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಈಚೆಗೆ ಮಂಡಿಸಿದ ಬಜೆಟ್ಗೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಿಂದಲೂ ಟೀಕೆಗಳು ಬರುತ್ತಿವೆ. 2020 ಐತಿಹಾಸಿಕವಾಗಿಸಿ ಇಲ್ಲಿನ ಉದ್ಯೋಗ, ಬಡತನಕ್ಕೆ ಕೇಂದ್ರ ಬಜೆಟ್ ಪರಿಹಾರ ನೀಡುತ್ತದೆ ಎಂದು ಭಾವಿಸಿದ್ದೆವು. ಉದ್ಯೋಗ ಸೃಷ್ಟಿಸುವ ಯಾವ ಯೋಜನೆಯನ್ನೂ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.