ETV Bharat / state

ಮಾಡಿದ ಅಪರಾಧದಿಂದ ಡಿಕೆಶಿ ಬಂಧನವಾಗಿದೆ: ಪ್ರಹ್ಲಾದ್ ಜೋಶಿ

ಮಾಡಿದ ಅಪರಾಧದಿಂದಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

ಡಿಕೆಶಿ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ
author img

By

Published : Sep 6, 2019, 7:38 PM IST

ಬೆಂಗಳೂರು: ಡಿ ಕೆ ಶಿವಕುಮಾರ್ ಏನು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ಕಣ್ಣೀರು ಹಾಕಿ ಜೈಲಿಗೆ ಹೋದರೆ ಅನುಕಂಪ ಬರುತ್ತದೆ ಎಂದು ತಿಳಿದುಕೊಂಡಿದ್ದಾರೆ. ಆದ್ರೆ ಇಂತಹ ಎಷ್ಟು‌ ಸ್ಟೋರಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ, ಇಡಿ, ಸಿಬಿಐ ದುರ್ಬಳಕೆ ಸಂಬಂಧ ಬಿಜೆಪಿ ವಿರುದ್ಧ ನಿರಾಧಾರ ಆರೋಪ ಮಾಡಲಾಗುತ್ತಿದೆ. ಪಿ.ಚಿದಂಬರಂ ಮತ್ತು ಡಿ.ಕೆ ಶಿವಕುಮಾರ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ನಿಂದ ಸುಪ್ರೀಂಕೋರ್ಟ್ ವರೆಗೆ ಅವರ ವಾದವನ್ನು ತಳ್ಳಿ ಹಾಕಿದ್ದಾರೆ. ಅವರ ವಾದದಲ್ಲಿ ಒಂದಂಶವಾದರೂ ಸತ್ಯವಿದ್ದರೆ ಸುಪ್ರೀಂಕೋರ್ಟ್ ಒಪ್ಪಿಕೊಳ್ಳುತ್ತಿತ್ತು ಎಂದು ಡಿಕೆಶಿ ಬಂಧನವನ್ನು ಸಮರ್ಥಿಸಿಕೊಂಡರು.

ನಮ್ಮ ಕಾನೂನು ಯಾವ ಪರಿಸ್ಥಿತಿಯಲ್ಲೂ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ಹೇಳುತ್ತದೆ. ಅವರ ಹೇಳಿಕೆಯಲ್ಲಿ‌ ನಿಜವಿದ್ದರೆ ಅವರನ್ನು ನ್ಯಾಯಾಂಗ ಬಂಧನಕ್ಕೆ, ಇಡಿ, ಸಿಬಿಐ ವಶಕ್ಕೆ ಕೊಡುತ್ತಿರಲಿಲ್ಲ. ಅವರು ಮಾಡಿದ ತಪ್ಪು ಅಪರಾಧದ ಕಾರಣದಿಂದ ಅವರು ಇವತ್ತು ಬಂಧನದಲ್ಲಿದ್ದಾರೆ. ಇದಕ್ಕೂ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.

ಡಿಕೆಶಿ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

ಇನ್ನು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯಾಕೆ ರಾಜೀನಾಮೆ ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ ಎಂದು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಕಾರಣಕ್ಕೇ ಅವರು ಐಎಎಸ್ ಅಧಿಕಾರಿಯಾಗಿದ್ದಾರೆ ಎಂದು ಕೇಂದ್ರ ಸಚಿವರು ಪ್ರತಿಕ್ರಿಯೆ ನೀಡಿದರು.

Intro:

ಬೆಂಗಳೂರು:ಅವರು ಏನು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ.ಜೈಲಿಗೆ ಹೋದರೆ ಅನುಕಂಪ ಬರುತ್ತದೆ ಎನ್ನುವುದನ್ನು ಮಾಡುತ್ತಿದ್ದಾರೆ ಇಂತಹ ಎಷ್ಟು‌ ಸ್ಟೋರಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಐಟಿ,ಇಡಿ,ಸಿಬಿಐ ದುರ್ಬಳಕೆ ಸಂಬಂಧ ಬಿಜೆಪಿ ವಿರುದ್ಧ ನಿರಾಧಾರ, ಶುದ್ದಾಂಗ ಸುಳ್ಳು ಆರೋಪ ಮಾಡಲಾಗುತ್ತಿದೆ. ಪಿ.ಚಿದಂಬರಂ ಮತ್ತು ಡಿಕೆ ಶಿವಕುಮಾರ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ನಿಂದ ಸುಪ್ರೀಂಕೋರ್ಟ್ ವರೆಗೆ ಅವರ ವಾದವನ್ನು ತಳ್ಳಿ ಹಾಕಿದ್ದಾರೆ.ಅವರ ವಾದದಲ್ಲಿ ಒಂದಂಶವಾದರೂ ಸತ್ಯವಿದ್ದರೆ ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳುತ್ತಿತ್ತು ಎಂದು ಬಂಧನವನ್ನು ಸಮರ್ಥಿಸಿಕೊಂಡರು.

ನಮ್ಮ ಕಾನೂನು ಯಾವ ಪರಿಸ್ಥಿತಿಯಲ್ಲೂ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ಹೇಳುತ್ತದೆ ಅವರ ಹೇಳಿಕೆಯಲ್ಲಿ‌ ನಿಜವಿದ್ದರೆ ಅವರನ್ನು ನ್ಯಾಯಾಂಗ ಬಂಧನಕ್ಕೆ,ಇಡಿ,ಸಿಬಿಐ ವಶಕ್ಕೆ ಕೊಡುತ್ತಿರಲಿಲ್ಲ. ಅವರು ಮಾಡಿದ ತಪ್ಪು ಅಪರಾಧದ ಕಾರಣದಿಂದ ಅವರು ಇವತ್ತು ಜೈಲಿನಲ್ಲಿದ್ದಾರೆ. ಇದಕ್ಕೂ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯಾಕೆ ರಾಜೀನಾಮೆ ಕೊಟ್ಟಿದಾರೆ ಗೊತ್ತಿಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ ಎಂದು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಕಾರಣಕ್ಕೆ ಅವರು ಐಎಎಸ್ ಅಧಿಕಾರಿಯಾಗಿದ್ದಾರೆ ಆಗಿದ್ದರೆ.ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು ಅದನ್ನು ಬಿಟ್ಟು ರಾಜೀನಾಮೆ ಕೊಡುವುದು ಪರಿಹಾರವಲ್ಲ ಎಂದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.