ETV Bharat / state

ಬಿಜೆಪಿ ನಾಯಕರು‌ ನೀಚರು, ಯಾವ ಹಂತಕ್ಕೆ ಬೇಕಾದರು ಹೋಗುತ್ತಾರೆ: ಡಿ ಕೆ ಸುರೇಶ್

ಚುನಾವಣೆಗೆ ಕಾಂಗ್ರೆಸ್ ಎಲ್ಲ ತಯಾರಿ ಮಾಡಿಕೊಂಡಿದೆ - ಅತಿ ಶೀಘ್ರದಲ್ಲಿ ಕಾಂಗ್ರೆಸ್​ನ ಮೊದಲ ಪಟ್ಟಿ ಬಿಡುಗಡೆ ಆಗಲಿದೆ - ಸಂಸದ ಡಿ ಕೆ ಸುರೇಶ್ ಹೇಳಿಕೆ

DK Suresh reaction on bjp leaders
ಬಿಜೆಪಿ ನಾಯಕರು‌ ನೀಚರು ಯಾವ ಹಂತಕ್ಕೆ ಬೇಕಾದರು ಹೋಗುತ್ತಾರೆ: ಡಿ ಕೆ ಸುರೇಶ್
author img

By

Published : Feb 5, 2023, 5:42 PM IST

ಬೆಂಗಳೂರು: ಚುನಾವಣೆಗೆ ಕಾಂಗ್ರೆಸ್ ಎಲ್ಲ ತಯಾರಿ ಮಾಡಿಕೊಂಡಿದೆ. ಟಿಕೆಟ್ ಹಂಚಿಕೆ ಬಗ್ಗೆ ಅಭಿಪ್ರಾಯ ತಿಳಿಸಿದ್ದೇವೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕರು‌ ಕಮಿಟಿ ಮಾಡುತ್ತಾರೆ. ಆದಷ್ಟು ಬೇಗ ಪರಿಶೀಲನಾ ಸಮಿತಿ‌ ಮಾಡಲು ಹೇಳಿದ್ದೇವೆ. ಅತಿ ಶೀಘ್ರದಲ್ಲಿ ಕಾಂಗ್ರೆಸ್​ನ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದರು.

ಬಿಜೆಪಿಯವರು ಜನರನ್ನು ಭ್ರಮೆಯಲ್ಲಿ ಇಟ್ಟಿದ್ದಾರೆ. ಜನರು ಕೂಡ ಬದಲಾಗಿದ್ದಾರೆ. ಈ ಸರ್ಕಾರ ತೊಲಗಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಹಾಗೂ ಕೇಂದ್ರ ನಾಯಕರು ಸರ್ವೇ ಮಾಡಿಸಿದ್ದಾರೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ. ರವಿ ಹೇಳಿಕೆ ನೋಡಿದರೆ ಕೋಮುಗಲಭೆ ಮುನ್ಸೂಚನೆ ನೀಡಿದಂತಿದೆ. ಕರಾವಳಿ ಭಾಗದಲ್ಲಿ ಅಶಾಂತಿ‌ ಮೂಡಿಸಲು‌ ಹೊರಟಿದ್ದಾರೆ. ಪಾಕಿಸ್ತಾನ ಬಗ್ಗೆ ಹೇಳಿಕೆ ನೀಡಿದ್ದಾರೆ. ಪದೆ ಪದೆ ಪಾಕಿಸ್ತಾನ ಹೆಸರನ್ನು ಎಳೆದು ತರುತ್ತಿದ್ದಾರೆ. ಹಾಗಾಗಿ ಟಿ ರವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಾಕಿಸ್ತಾನದ ಹೆಸರಲ್ಲಿ ರಾಜಕೀಯ ‌ಮಾಡಬೇಡಿ: ಬಿಜೆಪಿ ನಾಯಕರು‌ ನೀಚರು, ಯಾವ ಹಂತಕ್ಕೆ ಬೇಕಾದರು ಹೋಗುತ್ತಾರೆ. ಜನರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಭ್ರಷ್ಟಾಚಾರ ವ್ಯವಸ್ಥೆ ಅವರಿಗೆ ಕಾಣಿಸುತ್ತಿಲ್ಲವೇ? ಪದೆ ಪದೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಈಗಾಗಲೇ ಹಗರಣಗಳು ಹೊರಗೆ ಬಂದಿವೆ. ಪಾಕಿಸ್ತಾನದ ಹೆಸರಲ್ಲಿ ರಾಜಕೀಯ ‌ಮಾಡಬೇಡಿ. ಡಿ ಕೆ ಶಿವಕುಮಾರ್ ಹೆಸರು ಹೇಳಲು ಯೋಗ್ಯತೆ ಇಲ್ಲ ಎಂದು ಸಿ ಟಿ ರವಿ ವಿರುದ್ಧ ಡಿ‌ ಕೆ ಸುರೇಶ್ ವಾಗ್ದಾಳಿ ನಡೆಸಿದರು.

ಅಭ್ಯರ್ಥಿಗಳ ಆಪರೇಷನ್ ಕಮಲ ವಿಚಾರ ಮಾತನಾಡಿ, ಆಪರೇಷನ್ ವಿಚಾರಕ್ಕೆ ಬಿಜೆಪಿಯವರು ಫೇಮಸ್ ಆಗಿದ್ದಾರೆ. ಇವತ್ತು ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಕೇಂದ್ರ ಸರ್ಕಾರ ಅದಾನಿಗೆ ಬೆಂಬಲ ಕೊಟ್ಟಿತ್ತು. ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಹತ್ತು ಲಕ್ಷ ಕೋಟಿ ರೂಪಾಯಿ ನಷ್ಟ ಆಗಿದೆ. ಇದಕ್ಕೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. ಮುಂದೆ ಆರ್ಥಿಕ ಪರಿಸ್ಥಿತಿ ಜನರ ಮೇಲೆ ಪರಿಣಾಮ ಬೀರುತ್ತೆ ಎಂದು ಸಂಸದ ಡಿ ಕೆ ಸುರೇಶ್​ ಹೇಳಿದ್ದಾರೆ.

ಡಿ ಕೆ ಶಿವಕುಮಾರ್, ಪರಮೇಶ್ವರ್ ಒಂದೇ ನಾಣ್ಯದ ಎರಡು ಮುಖಗಳು: ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಸಿ, ಜಿ ಪರಮೇಶ್ವರ್​ ಅವರಿಗೆ ಅಸಮಾಧಾನ ಏನು ಇಲ್ಲ. ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ರಾಜೀನಾಮೆ ಕೊಟ್ಟ ಬಗ್ಗೆ ಮಾಹಿತಿ ಇಲ್ಲ. ಡಿ ಕೆ ಶಿವಕುಮಾರ್, ಪರಮೇಶ್ವರ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದರು. ಈಗಾಗಲೇ ಚುನಾವಣೆ ಗೆ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ಸಮಿತಿ ಕೂಡ ಸಭೆ ಸೇರಿ ರಾಜ್ಯದ ವರಿಷ್ಟರಿಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ ಎಂದು ಹೇಳಿದರು.

ಕೇಂದ್ರದ ಪರಿಶೀಲನಾ ಸಮಿತಿ ಮುಂದೆ ಆದಷ್ಟು ಬೇಗ ಕಳಿಸುತ್ತೇವೆ. ಕ್ಷೇತ್ರದಲ್ಲಿ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗಲು ಅನುಕೂಲ ಆಗಲಿದೆ. ನಾವು ಶಿಫಾರಸುಗಳನ್ನು ಮಾಡಿದ್ದೇವೆ, ಅವು ಎಲ್ಲವೂ ಸಮಿತಿ ಮುಂದೆ ಹೋಗಿ ನಿರ್ಧಾರ ಆಗಲಿವೆ. ಬಿಜೆಪಿಯ ಭ್ರಮೆಯಲ್ಲಿ ರಾಜ್ಯವನ್ನು ಇಟ್ಟಿದೆ. ಸುಳ್ಳು ಆಶ್ವಾಸನೆ, ಸುಳ್ಳು ಭರವಸೆಗಳೆಲ್ಲವೂ ಕೂಡ ಹುಸಿಯಾಗಿವೆ. ಹಳ್ಳಿಗಳ ಮಟ್ಟದಲ್ಲಿ ಜನರು ಬಿಜೆಪಿಯಿಂದ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಸರ್ಕಾರ ತೊಲಗಬೇಕು ಅಂತ ಜನ ಬಯಸುತ್ತಿದ್ದಾರೆ ಎಂದರು.

ಬಿಜೆಪಿಯವರಿಗೆ ನಾಚಿಕೆ ಆಗಬೇಕು ​: ಮೋದಿ ಯಾಕೆ ಬರುತ್ತಿದ್ದಾರೆ ರಾಜ್ಯಕ್ಕೆ? ಅವರು ಮನ್ ಕಿ ಬಾತ್​ನಲ್ಲಿ ಮಾತನಾಡುವಾಗ ಭ್ರಷ್ಟಾಚಾರ ಕಾಣಿಸುವುದಿಲ್ಲವೆ? ಬಿಜೆಪಿಯವರಿಗೆ ನಾಚಿಕೆ ಆಗಬೇಕು, ಅವರ ಪಕ್ಷದ ನಾಯಕರನ್ನು ಕಂಟ್ರೋಲ್ ಮಾಡಲು ಆಗದವರು ಡಿ ಕೆ ಶಿವಕುಮಾರ್ ಬಗ್ಗೆ ಮಾತನಾಡುತ್ತಾರಾ? ಡಿಕೆ ಶಿವಕುಮಾರ್ ಬಗ್ಗೆ ಮಾತನಾಡೋಕೆ ಯಾವ ಹಕ್ಕಿದೆ ಅವರಿಗೆ. ಪಾಕಿಸ್ತಾನಕ್ಕೆ ಬೇಕಿದ್ದರೆ ಇವರು ಸೇರಿಸಿಕೊಳ್ಳಲಿ. ಪಾಕಿಸ್ತಾನದ ಹೆಸರಿಟ್ಟುಕೊಂಡು ರಾಜಕಾರಣ ಮಾಡುವುದು ನಿಮ್ಮ ಪದ್ಧತಿ. ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ. ರಾಜಕಾರಣಕ್ಕಾಗಿ ಕೊಲೆಗಳನ್ನು ಮಾಡಿಸುತ್ತಾರೆ, ಯಾರನ್ನು ಬೇಕಾದರೂ ಹೊಡಿತಾರೆ, ಯಾವ ಆಪರೇಷನ್ ಬೇಕಾದರೂ ಮಾಡುತ್ತಾರೆ ಎಂದು ಸಂಸದ ಡಿ ಕೆ ಸುರೇಶ್​ ಗಂಭೀರ ಆರೋಪ ಮಾಡಿದರು.

ಸಚಿವ ಅಶ್ವತ್ಥನಾರಾಯಣ ಕಾಂಗ್ರೆಸ್ ಟೀಕೆ ವಿಚಾರವಾಗಿ ಏಕವಚನದಲ್ಲೇ ಹರಿಹಾಯ್ದ ಡಿಕೆ ಸುರೇಶ್, ಕೆಲಸ ನೋಡೋಕ್ಕೆ ಹೇಳಿ ಅವನಿಗೆ. ಅವನ ಬಗ್ಗೆ ಇನ್ನೊಂದು ದಿನ ಮಾತನಾಡುತ್ತೇನೆ. ಸಿಡಿ ವಿಚಾರಗಳನ್ನು ಮಾತನಾಡಿದರೆ ಎಲ್ಲಿಂದ ಎಲ್ಲಿಗೋ ಹೋಗುತ್ತದೆ. ಬೇಡ ಅದೆಲ್ಲ ಎಂದು ಹೇಳಿದರು.

ಇದನ್ನೂ ಓದಿ:'ಬಿಜೆಪಿಯವರು ಯಡಿಯೂರಪ್ಪರನ್ನೇ ಪಂಕ್ಚರ್ ಮಾಡಿದ್ದಾರೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.