ಬೆಂಗಳೂರು: ಆರ್.ಆರ್ ನಗರದಲ್ಲಿ ಅಷ್ಟೊಂದು ಅಂತರದ ಸೋಲು ಸಾಧ್ಯವಿಲ್ಲ. ವೋಟಿಂಗ್ ಪ್ಯಾಟ್ರನ್ ಚೇಂಜ್ ಆಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಇವಿಎಂ ಹ್ಯಾಕ್ ಬಗ್ಗೆ ಆರೋಪಿಸಿದ್ದಾರೆ.
ಇವಿಎಂ ದುರ್ಬಳಕೆ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ಅಮೆರಿಕದಲ್ಲೂ ಬ್ಯಾಲೆಟ್ ಪೇಪರ್ ನಡೆಯುತ್ತೆ. ಇವಿಎಂ ದುರ್ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಚುನಾವಣೆ ಆಯೋಗ ಮೂಕ ಪ್ರೇಕ್ಷರಂತೆ ಆಗಿದೆ ಎಂದು ಡಿ.ಕೆ.ಸುರೇಶ್ ಕಿಡಿ ಕಾರಿದರು.
ಹೀಗೆ ಆದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ತರಬೇಕು. ಎಲ್ಲಾ ಪಕ್ಷಗಳು ಇದನ್ನ ಒತ್ತಾಯಿಸಬೇಕು. ಈ ಕುರಿತು ಸುಪ್ರೀಂಕೋರ್ಟ್ಗೆ ಪತ್ರ ಅಭಿಯಾನ ಮಾಡಬೇಕು ಎಂದರು.
ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಸಂತಾಪ: ರವಿ ಬೆಳಗೆರೆ ಸಮಾಜ ಸುಧಾರಣೆಗೆ ಪ್ರಯತ್ನ ಮಾಡಿದವರು. ನೇರ ನಡೆ-ನುಡಿಗೆ ಹೆಸರಾದವರು. ಕನ್ನಡ ಪತ್ರಿಕೋದ್ಯಮ ಅವರನ್ನ ಕಳೆದುಕೊಂಡಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.