ಬೆಂಗಳೂರು: ವಿದ್ಯಾರ್ಥಿ ಹೋರಾಟಗಾರ್ತಿ ದಿಶಾ ರವಿ ಅವರ ಬಂಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಡಿಕೆಶಿ, ಇದು ಭಾರತದ ಯುವಕರ ನೈತಿಕ ಬಲವನ್ನು ದುರ್ಬಲಗೊಳಿಸುವ ಸೂಚನೆ..? ದಿಶಾ ರವಿ ವಿರುದ್ಧ ಪೊಲೀಸ್ ಕ್ರಮ ಸರಿಯಲ್ಲ, 'ಟೂಲ್‌ಕಿಟ್' ಪಿತೂರಿಯನ್ನು ಬಳಸುವುದು ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತದೆ. ಯುವತಿಯನ್ನು ಬಂಧಿಸುವ ಮೊದಲ ನ್ಯಾಯಾಲಯವನ್ನು ಏಕೆ ಸಂಪರ್ಕಿಸಬಾರದಿತ್ತು ? ಎಂದು ಪ್ರಶ್ನಿಸಿದ್ದಾರೆ.
ದಿಶಾ ರವಿ ಬಂಧನವನ್ನು ಹಲವು ನಾಯಕರು ಈಗಾಗಲೇ ಖಂಡಿಸಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷರು ಕೂಡ ಟ್ವೀಟ್ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸತತ 8ನೇ ದಿನವೂ ಜಿಗಿದ ಇಂಧನ ದರ: ಬೆಂಗಳೂರಲ್ಲಿ 100 ರೂ. ಗಡಿಯತ್ತ ಪೆಟ್ರೋಲ್!