ETV Bharat / state

ಗೆದ್ದ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿ ಸೋಂಕು ಹರಡಿಸಬೇಡಿ: ಡಿಕೆಶಿ - ಪಕ್ಷ ಸಂಭ್ರಮಾಚರಣೆ

ಫಲಿತಾಂಶ ಏನು ಬೇಕಾದರೂ ಆಗಬಹುದು. ಜ‌ನರು ಕೂಡ ಬದಲಾವಣೆ ಬಯಸಿದ್ದಾರೆ. ಏನೇ ಫಲಿತಾಂಶ ಬರಲಿ, ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ಪಕ್ಷದ ನಾಯಕರು, ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿ ಸೋಂಕು ಹರಡಿಸಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

dk shivkumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
author img

By

Published : May 2, 2021, 2:07 PM IST

ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ಪಕ್ಷದ ನಾಯಕರು ಸಹ ಗೆದ್ದ ಬಳಿಕ ಸಂಭ್ರಮಾಚರಣೆ ಮಾಡುವ ಮೂಲಕ ಸೋಂಕು ಪ್ರಸರಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಸ್ಕಿ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಮನ್ನಡೆ ಸಾಧಿಸಿದ್ದೇವೆ. ಚುನಾವಣಾ ಆಯೋಗದಿಂದ ಕಟ್ಟುನಿಟ್ಟಿನ ಆದೇಶ ಇದೆ. ಯಾರೂ ಕೂಡ ಸಂಭ್ರಮಾಚರಣೆ ಮಾಡಬಾರದೆಂಬುದು ನನ್ನ ನಮ್ರತೆಯ ಮನವಿ ಎಂದರು.

ಬೆಳಗಾವಿಯಲ್ಲಿಯೂ ಗೆಲುವಿಗೆ ಬಹಳ ಹತ್ತಿರದಲ್ಲಿ ಇದ್ದೇವೆ. ಫಲಿತಾಂಶ ಏನು ಬೇಕಾದರೂ ಆಗಬಹುದು. ಜ‌ನರು ಬದಲಾವಣೆ ಬಯಸಿದ್ದಾರೆ. ಏನೇ ಫಲಿತಾಂಶ ಬರಲಿ, ರಾಜ್ಯಕ್ಕೆ ಒಳ್ಳೆಯ ವಾತಾವರಣ ಬಯಸುತ್ತಿದ್ದಾರೆ. ಮತದಾರರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುಸ್ತೇನೆ ಎಂದರು.

ಕೋವಿಡ್​ ಹಿನ್ನೆಲೆ ಸಂಭ್ರಮಾಚರಣೆ ಬೇಡ:

ಸಂಭ್ರಮ ಸಲುವಾಗಿ ಕೆಪಿಸಿಸಿ ಕಚೇರಿಗೂ ಕೂಡ ಯಾರೂ ಬರಬಾರದು. ಪಶ್ಚಿಮ ಬಂಗಾಳಲ್ಲಿ ಬಿಜೆಪಿ ಹಿನ್ನೆಡೆಯಾಗಿದೆ ಎಂದು ಕೂಡ ಸಂಭ್ರಮಾಚರಣೆ ಮಾಡಬೇಡಿ. ಡಿಎಂಕೆ ಗೆದ್ದಿದೆ ಎಂದೂ ಸಹ ಯಾರೂ ಸಂಭ್ರಮ ಮಾಡಬಾರದು ಎಂದು ಮನವಿ ಮಾಡಬಾರದು.

ಮಮತಾ ಬ್ಯಾನರ್ಜಿಯಂತಹ ಹೆಣ್ಣುಮಗಳಿಗೆ ಕೊಟ್ಟ ಶೋಷಣೆ ಇದೆಯಲ್ಲ ಅಷ್ಟಿಷ್ಟಲ್ಲ. ಎಂಟು ಫೇಸ್​​ನಲ್ಲಿ ಚುನಾವಣೆ ಮಾಡಿ ಇಡಿ ಸರ್ಕಾರವೇ ಅಲ್ಲಿತ್ತು. ಇಡೀ ದೇಶದ ಅಧಿಕಾರ, ಸರ್ಕಾರದ ಅಧಿಕಾರ ಎಲ್ಲವನ್ನೂ ಉಪಯೋಗಿಸಿ ಎಂಟು ಹಂತದಲ್ಲಿ ಚುನಾವಣೆ ಮಾಡಿದ್ರು. ರಾಜ್ಯದಲ್ಲೂ ಚುನಾವಣೆ ಮುಂದೂಡಿ ಅಂತ ನಾವು ಸಾಕಷ್ಟು ಬಾರಿ ಕೇಳಿಕೊಂಡಿದ್ದೆವು. ಆದ್ರೂ ಮಾತು ಕೇಳಲಿಲ್ಲ, ಈಗ ಅನುಭವಿಸ್ತಿದ್ದಾರೆ. ಇರಲಿ, ಗೆಲವು ಮತ್ತು ಸಂಭ್ರಮಾಚರಣೆ ನಮ್ಮ ಪ್ರಯಾರಿಟಿ ಅಲ್ಲ. ಒಂದು ಜೀವ ಉಳಿದರೂ ಕೂಡ ಅದು ಮುಖ್ಯ ನಮಗೆ ಎಂದು‌ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.