ETV Bharat / state

ಎಸ್‌.ಟಿ.ಸೋಮಶೇಖರ್​ 'ಘರ್​ ವಾಪಸಿ' ನಿಶ್ಚಿತ? ಕುತೂಹಲ ಹುಟ್ಟಿಸಿದ ಡಿಕೆಶಿ ಮಾತು! - ಸೋಮಶೇಖರ್​ ಘರ್​ ವಾಪಸಿ

ಯಶವಂತಪುರದಲ್ಲಿ ಕಸದ ಘಟಕದ ಸಮಸ್ಯೆ ಬಗ್ಗೆ ಜನರು ಹೇಳಿಕೊಂಡಿದ್ದು, ಪರಿಶೀಲನೆ ಮಾಡುತ್ತೇವೆ. ಆದರೆ, ಎಲ್ಲವೂ ಒಂದೇ ದಿನದಲ್ಲಿ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು. ಇದೇ ವೇಳೆ, ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್‌ ಮರಳಿ ಕಾಂಗ್ರೆಸ್‌ ಸೇರ್ಪಡೆ ವಿಚಾರಕ್ಕೆ ಡಿಕೆಶಿ ಹೇಳಿಕೆ ಮತ್ತಷ್ಟು ಇಂಬು ನೀಡಿತು.

Etv Bharat
Etv Bharat
author img

By ETV Bharat Karnataka Team

Published : Aug 27, 2023, 7:08 AM IST

ಬೆಂಗಳೂರು: ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್​​ಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರಾ? ಎಂಬ ಬಲವಾದ ಅನುಮಾನ ಮೂಡಿಸಿದೆ.

ಡಿಸಿಎಂ ಮಾತನಾಡುತ್ತಾ, "ನನ್ನದು ಮತ್ತು ಎಸ್.ಟಿ. ಸೋಮಶೇಖರ್ ಅವರದು 35 ವರ್ಷಗಳ ಸ್ನೇಹ. ಅವರನ್ನು ನೀರು, ಗೊಬ್ಬರ ಹಾಕಿ ರಾಜಕೀಯವಾಗಿ ಬೆಳೆಸಿದ್ದೇವೆ, ಹಣ್ಣು ಬಿಟ್ಟಿದೆ. ಅದನ್ನು ಬೇರೆಯವರು ಕಿತ್ಕೊಂಡು ತಿನ್ನೋದಕ್ಕೆ ಬಿಡಬಾರದು ಅನ್ನೋದು ನನ್ನ ಭಾವನೆ" ಎಂದು ಸೂಚ್ಯವಾಗಿ ತಿಳಿಸಿದರು.

'ಕಾಂಗ್ರೆಸ್​​ಗೆ ಬೆಂಬಲ ನೀಡಿ': "ಸೋಮಶೇಖರ್ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ನೀವು ಅವರು ಕೂತು ತೀರ್ಮಾನ ಮಾಡಿಕೊಳ್ಳಿ. ನಮ್ಮ ಸರ್ಕಾರ ಅಂತೂ 5 ವರ್ಷ ಇರುತ್ತದೆ. ನೀವು ಪ್ರಜ್ಞಾವಂತರಿದ್ದೀರಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೀರಿ ಅಂತ ಗೊತ್ತಿದೆ. ನಾನು ಕನಕಪುರಕ್ಕೆ ಹೋಗಲು ಆಗಿಲ್ಲ. ಆದರೆ ಈ ಸೋಮಶೇಖರ್ ಎರಡು ಬಾರಿ ನನ್ನನ್ನು ನಿಮ್ಮ ಕ್ಷೇತ್ರಕ್ಕೆ ಎಳೆದುಕೊಂಡು ಬಂದಿದ್ದಾರೆ. ನಿಮ್ಮ ಸಮಸ್ಯೆ ಬಗ್ಗೆ ನಮಗೂ ಕಾಳಜಿ ಇದೆ. ಈ ಬಾರಿಯ ಚುನಾವಣೆಯಲ್ಲಿ ನೀವು ಕಾಂಗ್ರೆಸ್​​ಗೆ ಬೆಂಬಲ ನೀಡಲಿಲ್ಲ. ಮುಂದಿನ ಚುನಾವಣೆಯಲ್ಲಿ ನೀವು ಕಾಂಗ್ರೆಸ್​​ಗೆ ಬೆಂಬಲ ನೀಡಬೇಕು" ಎಂದು ಜನತೆಗೆ ಡಿಕೆಶಿ ಮನವಿ ಮಾಡಿದರು.

dk-shivakumar-talks-on-st-somashekhar-in-janaspandana-program-at-yashwantapur
ಜನಸ್ಪಂದನ ಕಾರ್ಯಕ್ರಮ

'ರಾಜಕೀಯ ಪಕ್ಕಕ್ಕಿಟ್ಟು ಸಮಸ್ಯೆ ಪರಿಹಾರ': "ಶಾಸಕ ಸೋಮಶೇಖರ್​​ ಅವರು ಎರಡು ಮೂರು ಬಾರಿ ನನ್ನ ಭೇಟಿ ಮಾಡಿ ಕ್ಷೇತ್ರದ ಸಮಸ್ಯೆ ಬಗೆಹರಿಸಬೇಕು ಎಂದು ಕೇಳಿಕೊಂಡಿದ್ದಾರೆ. ಈಗ ಯಶವಂತಪುರ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲೆಂದು ಸರ್ಕಾರದ ಅಧಿಕಾರಿಗಳನ್ನು ಕರೆದುಕೊಂಡು ಬಂದಿದ್ದೇನೆ. ಕನಕಪುರ ರಸ್ತೆಗೆ ಬೇರೆ ಸ್ವರೂಪ ನೀಡಲು ನೀವು ಹೋರಾಟ ಮಾಡಿಕೊಂಡು ಬಂದಿದ್ದೀರಿ. ನೀವು ಸ್ವಾರ್ಥಕ್ಕೆ ಏನೂ ಕೇಳಿಲ್ಲ, ಸಮಸ್ಯೆಗೆ ಪರಿಹಾರ ಕೇಳಿದ್ದೀರಿ. ಆದರೆ, ಸೋಮಶೇಖರ್ ಈ ಮೊದಲೇ ನನ್ನ ಗಮನಕ್ಕೆ ತಂದಿದ್ದಾರೆ. ರಾಜಕೀಯ ಪಕ್ಕಕ್ಕಿಟ್ಟು ನಿಮ್ಮ ಸಮಸ್ಯೆಗೆ ಕಿವಿಗೊಡುತ್ತೇನೆ. ನೀವು ಕೇಳಿದ್ದೆಲ್ಲ ಸಿಗುತ್ತೆ ಎನ್ನಲ್ಲ, ಆದರೆ ಗರಿಷ್ಠ ಪ್ರಮಾಣದಲ್ಲಿ ಬಗೆಹರಿಸುತ್ತೇನೆ" ಎಂದರು.

"ಇಲ್ಲಿನ ಜನರ ಸಮಸ್ಯೆ ಬಗ್ಗೆ ಸೋಮಶೇಖರ್ ಅವರಿಂದ ಲಿಖಿತ ರೂಪದಲ್ಲಿ ಮಾಹಿತಿ ಪಡೆದಿದ್ದೆ. ಈ ಭಾಗದ ಖಾತೆ ವಿಚಾರದ ಬಗ್ಗೆ ಕೇಳಿದ್ದೀರಿ. ಈ ಕೆಲಸ ಮೊದಲು ಮಾಡುವುದಾಗಿ ತುಷಾರ್ ಗಿರಿನಾಥ್ ಅವರು ಮಾತು ಕೊಟ್ಟಿದ್ದಾರೆ. ಇಲ್ಲಿ ನೀರು ಸರಬರಾಜು, ಪಾಲಿಕೆ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಇಲ್ಲಿ ಬಂದಿದ್ದು, ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಸೋಮಶೇಖರ್ ಅವರು ಈ ಭಾಗಕ್ಕೆ ಮೆಟ್ರೋ ತರಬೇಕು ಎಂದು ನಮ್ಮ ಸರ್ಕಾರದ ಅವಧಿಯಲ್ಲಿ ಒತ್ತಡ ಹಾಕಿದ್ದರು. ಯಶವಂತಪುರವು ಬೆಂಗಳೂರು ದಕ್ಷಿಣ ಕ್ಷೇತ್ರದ ಜೊತೆಗೆ ಬಹಳ ದೊಡ್ಡ ಕ್ಷೇತ್ರವಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ಇದಕ್ಕೆ 50 ಸಾವಿರ ಕೋಟಿ ರೂ. ಅಗತ್ಯವಿದೆ" ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ: ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಸಿಎಂ ಭೇಟಿ: ಮತ್ತೆ ಅನುಮಾನ ಮೂಡಿಸಿದ ಉಭಯ ನಾಯಕರ ನಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.