ಬೆಂಗಳೂರು: ಬಜರಂಗದಳ ನಿಷೇಧ ಘೋಷಣೆ ವಾಪಸ್ ಪಡೆಯೋದಿಲ್ಲ. ಬಿಜೆಪಿಯವರು ಯಾವ ರೀತಿ ಬೇಕಾದ್ರೂ ನೆರೇಷನ್ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜರಂಗದಳಕ್ಕೂ ಆಂಜನೇಯನಿಗೂ ಏನು ಸಂಬಂಧ? ನಾನು ಕೂಡ ರಾಮ, ಆಂಜನೇಯ, ಶಿವನ ಭಕ್ತ. ನಾನು ಕೂಡ ದಿನ ಹನುಮಾನ್ ಚಾಲೀಸಾ ಪಠಣ ಮಾಡುತ್ತೇನೆ. ಕುಂಬಳಕಾಯಿ ಕಳ್ಳ ಅಂದ್ರೆ ಇವರ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಾ ಇದ್ದಾರೆ ಎಂದು ತಿರುಗೇಟು ಕೊಟ್ಟರು.
ನಾವು ಆಂಜನೇಯ ಭಕ್ತರು. ಅವರು ಮಾತ್ರನಾ? ಶಾಂತಿಯ ತೋಟ ಕದಲಬಾರದು. ಸೌಹಾರ್ದತೆ ಇರಬೇಕು. ಬಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯಗೂ ಬಜರಂಗದಳಕ್ಕೂ ಏನ್ ಸಂಬಂಧ. ಬಿಜೆಪಿ ಅವರು, ಬಹಳ ಪ್ರವೋಕ್ ಮಾಡ್ತಿದ್ದಾರೆ. ಜನಕ್ಕೆ ಇದು ಅರ್ಥ ಆಗಿದೆ. ನಾವು ಹನುಮಂತ ಭಕ್ತರು ನಾವು ಆಂಜನೇಯ ಪ್ರವೃತ್ತಿ. ಆಂಜನೇಯ ಬೇರೆ ಬಜರಂಗದಳ ಬೇರೆ. ಬಿಜೆಪಿಯವರು ಭಜರಂಗಿ ಅಂತ ಕ್ಯಾಂಪೇನ್ ಮಾಡೋದು ಬೇಡ. ಹೊಟ್ಟೆಗೆ ಏನ್ ಕೊಟ್ರಿ, ಉದ್ಯೋಗ ಏನ್ ಕೊಟ್ರಿ ಹೇಳಿ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ನಾಳೆ ಹನುಮಾನ್ ಚಾಲೀಸಾ ಪಠಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹನುಮಾನ್ ಚಾಲೀಸಾ ನಾವು ದಿನಾ ಮಾಡ್ತೀವಿ. ಅವರೊಬ್ಬರೇನಾ ಮಾಡೋದು. ಹಿಂದಿನ ಆರ್ಎಸ್ಎಸ್ ಬೇರೆ ಈಗಿನ ಆರ್ಎಸ್ಎಸ್ ಬೇರೆ. ಮೊದಲು ನೀವು ದೇಶ ಉಳಿಸಿ. ಆಯನೂರು ಮಂಜುನಾಥ್ ಏನ್ ಹೇಳಿದ್ರು. ಈಶ್ವರಪ್ಪಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಹೇಳಿ. ನಮ್ಮ ಗ್ಯಾರಂಟಿ ಕಾರ್ಡ್ ಐತಿಹಾಸಿಕ. ನಮ್ಮ ಗ್ಯಾರಂಟಿ ನಾವು ಕೊಟ್ಟೇ ಕೊಡ್ತೀವಿ. ಬಿಜೆಪಿಗರು ಒಂದೊಂದು ವಿಷಯ ತೆಗೆದುಕೊಂಡು ಹೀಗೆ ಮಾಡ್ತಿದ್ದಾರೆ. ಇದೆಲ್ಲ ವರ್ಕ್ ಆಗೊಲ್ಲ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮಗೆ 141 ಸೀಟು ಬರೋದು ಪಕ್ಕಾ. 13ಕ್ಕೆ ಫಲಿತಾಂಶ ಹೊರಗೆ ಬರುತ್ತೆ, ಆಗ ಗೊತ್ತಾಗುತ್ತೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಏಕಪಕ್ಷೀಯವಾಗಿ ವರ್ತನೆ ಮಾಡ್ತಿದೆ - ಡಿಕೆಶಿ: ಬೆಂಗಳೂರಲ್ಲಿ ಪ್ರಧಾನಿ ಮೋದಿ 37ಕಿ.ಮೀ ರ್‍ಯಾಲಿ ವಿಚಾರ ಕುರಿತು ಮಾತನಾಡಿ, 37 ಅಲ್ಲ 370 ಕಿ.ಮೀ ಮಾಡಲಿ. ಬಿಜೆಪಿಗರು ಅಧಿಕಾರ ಮಿಸ್ ಯೂಸ್ ಮಾಡ್ತಿದ್ದಾರೆ. ಆಯೋಗದವರು ನಮಗೂ ಅವಕಾಶ ಕೊಡಲಿ. ಬಿಜೆಪಿ ಕಾರ್ಯಕರ್ತರ ರೀತಿ ಪೊಲೀಸ್ ಅವರು ವರ್ತನೆ ಮಾಡ್ತಿದ್ದಾರೆ. ನಮಗೂ ಅವಕಾಶ ಕೊಡಲಿ ನಾವು ರ್‍ಯಾಲಿ ಮಾಡ್ತೀವಿ. ಚುನಾವಣಾ ಆಯೋಗ ಏಕಪಕ್ಷೀಯವಾಗಿ ವರ್ತನೆ ಮಾಡ್ತಿದೆ. ರ್‍ಯಾಲಿ ವಿಚಾರ, ಖರ್ಚಿನ ವಿಚಾರ. ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಚಾರದಲ್ಲಿ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಡಿ ಕೆ ಶಿವಕುಮಾರ್ ಆರೋಪಿಸಿದರು.
ನಾವು ರೋಡ್ ಶೋ ಮಾಡ್ತೀವಿ. ರಾಹುಲ್ ಗಾಂಧಿ ಮೇ 7 ತಾರೀಖು ಬೆಂಗಳೂರಿನಲ್ಲಿ ರ್‍ಯಾಲಿ ಮಾಡ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ ಎಟಿಎಂ ಎಂಬ ಮೋದಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನ ಟೀಕೆ ಮಾಡೋದು ಬೇಡ. ಮೊದಲು ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರ ಏನ್ ಕೊಡ್ತು ಅಂತ ಹೇಳಲಿ. ಕಾಂಗ್ರೆಸ್ ಎಟಿಎಂ ಮಾಡಿದ್ದಾರೋ ಬಿಜೆಪಿ ಅವರು ಮಾಡಿದ್ದಾರೆ ಗೊತ್ತಿದೆ ಎಂದು ಟಾಂಗ್ ಕೊಟ್ಟರು.
ಮೇಕದಾಟು, ಮಹಾದಾಯಿ, ಉದ್ಯೋಗ ಸೃಷ್ಟಿ ಎಷ್ಟು ಕೊಟ್ರು ಹೇಳಲಿ. ಬಿಜೆಪಿಯುವರು ಉದ್ಯೋಗ ಕೊಟ್ರಾ, ಬಂಡವಾಳ ಹೂಡಿಕೆ ಮಾಡೋರು ಬಂದ್ರಾ. 15 ಲಕ್ಷ ಕೊಟ್ರಾ? 1 ಲಕ್ಷ ಸಾಲಮನ್ನಾ ಮಾಡ್ತೀನಿ ಅಂದ್ರು ಮಾಡಿದ್ರಾ? ಭ್ರಷ್ಟಾಚಾರ ಬಗ್ಗೆ ಮಾತಾಡಿದ್ರಾ? 40% ಆರೋಪದ ಬಗ್ಗೆ ಮಾತಾಡಿದ್ರಾ? ಅವರ ಮಂತ್ರಿಗಳ ವಿರುದ್ಧ ಏನ್ ಆಕ್ಷನ್ ತಗೊಂಡ್ರು? ಎಲ್ಲದಕ್ಕೂ ಮೋದಿ ಮೌನಂ ಸಮ್ಮತಿ ಲಕ್ಷ್ಮಣಂ ತೋರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಹನುಮಂತ ನಮ್ಮ ಜೇಬಿನಲ್ಲಿಲ್ಲ, ಹೃದಯದಲ್ಲಿದ್ದಾನೆ: ಗೌರವ್ ಭಾಟಿಯಾ