ಬೆಂಗಳೂರು : ಕೋವಿಡ್ ಮಾರ್ಗಸೂಚಿಯೋ ಇಲ್ಲ ಏನು ಬೇಕಾದರೂ ಮಾಡಲಿ, ಅದು ಎಲ್ಲರಿಗೂ ಅನ್ವಯವಾಗುವಂತಿರಬೇಕು. ಬೇಕಾದವರಿಗೆ ಅನುಕೂಲ ಉಳಿದವರಿಗೆ ಅನಾನುಕೂಲ ಮಾಡುವುದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದೆದುರು ಮಾಧ್ಯಮಗಳೊಂದಿಗೆ ಮತನಾಡಿದ ಅವರು, ನಾಳೆ ನಾನು ಕೇರಳಕ್ಕೆ ಹೋಗುತ್ತಿದ್ದೇನೆ, ಐದು ಕಡೆ ಸಭೆ ಇದೆ. ಅದಾದಮೇಲೆ ರಾಜ್ಯದ ಮೂರು ಕ್ಷೇತ್ರದ ಚುನಾವಣಾ ಪ್ರಚಾರದ ಕಡೆ ಗಮನ ಹರಿಸುತ್ತೇನೆ ಎಂದರು.
ಸಚಿವ ಕೆ ಎಸ್ ಈಶ್ವರಪ್ಪ ಅವರು ಸಿಎಂ ವಿರುದ್ಧ ಮಾಡಿದ ಆರೋಪದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಸರ್ಕಾರದಲ್ಲಿ ರಾಜ್ಯಪಾಲರು ಓತ್ ಕೊಟ್ಟಿದ್ದಾರೆ, ಸಿಎಂ ವಿರುದ್ಧ ಸಿಡಿದೆದ್ದು ಪತ್ರ ಬರೆದು ಸೆಕ್ಷನ್ ಕೋಟ್ ಮಾಡಿದ್ದಾರೆ.
ಪಕ್ಷಕ್ಕೆ ಈಶ್ವರಪ್ಪ ಲಾಯಲ್ ಆಗಿರಬಹುದು, ಇಲ್ಲಿ ಸ್ಕೂಲಿಗೆ ಯಾರು ಹೋಗುತ್ತಿಲ್ಲ, ಸಿಎಂ ವಿರುದ್ಧ ದೂರು ಕೊಟ್ಟ ಮೇಲೆ ಆಡಳಿತ ಕುಸಿದಿದೆ ಎಂದರ್ಥ, ಸಿಎಂ ಕೂಡಲೇ ರಾಜೀನಾಮೆ ನೀಡಬೇಕು ಎಂದರು.
ತಮ್ಮ ಮೇಲಿನ ಮನಿ ಲಾಂಡರಿಂಗ್ ಆರೋಪ ಸಂಬಂಧ ಪ್ರತಿಕ್ರಿಯಿಸಿ, ಮೊದಲು ಅಸೆಂಬ್ಲಿಯಲ್ಲಿ ಚರ್ಚೆ ಆದ ವಿಚಾರ ಇಡಿಗೆ, ಇನ್‌ಕಮ್ ಟ್ಯಾಕ್ಸಿಗೆ ಕಳಿಸಿ, ಅದಾದ ಮೇಲೆ ನನ್ನ ಮೇಲಿನ ವಿಚಾರ ಚರ್ಚೆ ಮಾಡಲಿ ಎಂದು ಉತ್ತರ ನೀಡಿದರು.
ಇದನ್ನೂ ಓದಿ: ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆಗೊಳ್ಳಲಿದೆ: ಆರೋಗ್ಯ ಸಚಿವ