ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವ ಕ್ಷೇತ್ರ ಕನಕಪುರದ ಜನರಿಗೆ ಮುದ್ದಿನ ಮಗಳ ಮದುವೆಯ ಉಡುಗೊರೆ ನೀಡಿದ್ದಾರೆ.
ನಿನ್ನೆ ಬೆಂಗಳೂರಿ ಖಾಸಗಿ ಹೋಟೆಲ್ನಲ್ಲಿ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಕಾಫಿ ಡೇ ಮಾಲೀಕರಾದ ದಿ. ಸಿದ್ದಾರ್ಥ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆಯವರ ವಿವಾಹ ಸಮಾರಂಭವು ಅದ್ಧೂರಿಯಾಗಿ ನೆರವೇರಿತು. ಕೊರೊನಾ ಹಿನ್ನೆಲೆಯಲ್ಲಿ ಮಗಳ ವಿವಾಹಕ್ಕೆ ರಾಜಕೀಯ ನಾಯಕರು, ಗಣ್ಯರು, ಮಠಾಧೀಶರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಕನಕಪುರ ಜನರಿಗೆ ಉಡುಗೊರೆ ನೀಡಿದ ಡಿಕೆಶಿ:
ಮಗಳ ವಿವಾಹ ಮಹೋತ್ಸವದ ಅಂಗವಾಗಿ ಸ್ವ ಕ್ಷೇತ್ರ ಕನಕಪುರದ ಜನರಿಗೆ ಉಡುಗೊರೆ ನೀಡಿದ್ದಾರೆ. ತಮ್ಮ ತಮ್ಮ ಊರುಗಳಿಂದಲೇ ಮದುವೆಗೆ ಹಾರೈಸುವಂತೆ ಸ್ವೀಟ್ ಬಾಕ್ಸ್ಗಳನ್ನು ಕೂಡ ಹಂಚಿದ್ದಾರೆ. ಇದಲ್ಲದೆ ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಬಟ್ಟೆ ಹಂಚಿರುವ ಡಿ.ಕೆ. ಶಿವಕುಮಾರ್ ತಮ್ಮ ಮಗಳ ಮದುವೆಗೆ ಆಶೀರ್ವದಿಸುವಂತೆ ಕೋರಿದ್ದರು.
ಓದಿ: ವೈವಾಹಿಕ ಬದುಕಿಗೆ ಕಾಲಿಟ್ಟ ಐಶ್ವರ್ಯಾ- ಅಮರ್ತ್ಯ: ಯುವ ಜೋಡಿಯ ಕಲ್ಯಾಣಕ್ಕೆ ಗಣ್ಯರು ಸಾಕ್ಷಿ
ಕೋಟ್ಯಂತರ ರೂ. ಖರ್ಚು ಮಾಡಿ ತಮ್ಮ ಕ್ಷೇತ್ರದ ಪುರುಷರಿಗೆ ಪ್ಯಾಂಟ್, ಶರ್ಟ್ ಹಾಗೂ ಮಹಿಳೆಯರಿಗೆ ಬನಾರಸ್ ಸೀರೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.