ETV Bharat / state

ಸಕ್ರಿಯ ಕಾರ್ಯಕರ್ತರಿಗೆ ನಾವು ಅವಕಾಶ ನೀಡಿದ್ದೇವೆ: ಡಿ.ಕೆ.ಶಿವಕುಮಾರ್ - ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ

ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಬಿ ಫಾರಂ ವಿತರಿಸಿದರು.

ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

author img

By

Published : Nov 22, 2021, 9:38 PM IST

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿರುವ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿದೆ. ಸಕ್ರಿಯ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ನಮ್ಮ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಪಕ್ಷದ ಹೊರಗಿನವರಿಗೆ ಟಿಕೆಟ್ ವಿಚಾರ ಸ್ಥಳೀಯ ನಾಯಕರು ಹೇಳಿದಂತೆ ಕೇಳ ಬೇಕಾಗುತ್ತೆ. ರಾಜ್ಯಸಭಾ ಚುನಾವಣೆಯಲ್ಲಿ ನಾವು ನೋಡಿದ್ದೇವೆ. ಹೀಗಾಗಿ ಇದು ಅನಿವಾರ್ಯ ಎಂದರು.

ಎಸ್.ಆರ್.ಪಾಟೀಲ್​ ಅವರನ್ನು ನಾವು ಕೈ ಬಿಡೋಲ್ಲ. ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ. ಬೇರೆ ತಂತ್ರಗಾರಿಕೆ ನಡೀತಾ ಇದೆ. ಕೊಂಡಯ್ಯ ವಿಚಾರದಲ್ಲಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಹೈಕಮಾಂಡ್ ಹೇಳಿದ್ದನ್ನು ಕೇಳಬೇಕು ಎಂದು ಹೇಳಿದರು.

ಎಲ್ಲಾ ಕಡೆ, ಎಲ್ಲರ ಜೊತೆ ಚರ್ಚೆ ಮಾಡಿದ್ದೇವೆ. ಸೂಕ್ತ ಅಭ್ಯರ್ಥಿಗಳಿಗೆ ಅವಕಾಶ ಕೊಡಲಾಗಿದೆ. ಕಳೆದ ಬಾರಿ ಸೋತಿದ್ದು, ಎಲ್ಲವೂ ಟ್ಯಾಲಿ ಮಾಡಿ, ಸೂಕ್ತ ತೀರ್ಮಾನ ಮಾಡಿದ್ದೇವೆ. ಬೀದರ್, ಕೋಲಾರ, ಬೆಂಗಳೂರು ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಮೂರು ಕಡೆ ಎಲ್ಲರೂ ಬಹುಮತಕ್ಕೆ ಬಂದಿದ್ದಾರೆ. ಎಲ್ಲರೊಂದಿಗೆ ಚರ್ಚೆ ಮಾಡಿ ಒಮ್ಮತ ನಿರ್ಧಾರ ಮಾಡಿದ್ದೇವೆ. ಇಲ್ಲಿ ನಮ್ಮ ವೈಯಕ್ತಿಕ ನಿರ್ಧಾರಗಳಿಲ್ಲ. ಕೆಲವೇ ನಿಮಿಷಗಳಲ್ಲಿ ಫೆಂಡಿಂಗ್ ಇರುವ ಅಭ್ಯರ್ಥಿಗಳ ಹೆಸರು ಬಿಡುಗಡೆ ಆಗುತ್ತೆ ಎಂದರು.

ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಕೆ‌.ಸಿ.ಕೊಂಡಯ್ಯ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ವಿರೋಧ ಸಾಮಾನ್ಯ. ನನ್ನ ಮತದಾರರೇ ಜನಪ್ರತಿನಿಧಿಗಳು. ಅವರ ಜೊತೆ ನಾನು ಮಾತನಾಡುತ್ತೇನೆ. ನನ್ನ ವಿರೋಧ ಮಾಡಿದ ಶಾಸಕರ ಜೊತೆಯೂ ಮಾತನಾಡುತ್ತೇನೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ, ಗದಗ ಹಾವೇರಿಯ ಸಲೀಂ ಅಹಮದ್, ಬೆಂಗಳೂರು ಗ್ರಾಮಾಂತರದ ಎಸ್. ರವಿ, ಮಂಡ್ಯದ ದಿನೇಶ್ ಗೂಳಿಗೌಡ, ಬಳ್ಳಾರಿಯ ಕೆ.ಸಿ.ಕೊಂಡಯ್ಯ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ನಡೆಯಲಿರುವ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ 'ಬಿ' ಫಾರಂ ವಿತರಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.