ಶಿವಮೊಗ್ಗ: ಆಧುನಿಕತೆ ಬೆಳೆದಂತೆ ಮಾನವ ಸಂಬಂಧಗಳಿಗೆ ಬೆಲೆ ಕಡಿಮೆ ಆಗುತ್ತಿದೆ. ತನ್ನ ಸ್ವಾರ್ಥ ಹಾಗೂ ತಾನೇ ಸರಿ ಎಂಬ ಭ್ರಮೆಗೆ ಬಿದ್ದು ಜೀವನದಲ್ಲಿ ತನ್ನ ಹತ್ತಿರದವನರನ್ನು ದೂರ ಮಾಡಿಕೊಳ್ಳುತ್ತಾ ಒಬ್ಬಂಟಿ ಜೀವಿಯಾಗಿ ಬಯುಸಿದ್ದಾನೆ.
ಅದರಲ್ಲೂ ಪವಿತ್ರವಾದ ಪತಿ-ಪತ್ನಿ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದಾನೆ. ಅದರಲ್ಲೂ ವಿದ್ಯಾವಂತರಲ್ಲಿ ಗಂಡ- ಹೆಂಡತಿಯರ ನಡುವಿನ ಸಂಬಂಧದ ಕೊಂಡಿಯನ್ನು ಕಳಚಿಕೊಳ್ಳುವವರ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿದೆ.
ವಿಚ್ಛೇದನ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಗಂಡ- ಹೆಂಡತಿಯರಲ್ಲಿ ಒಬ್ಬರು ತಮಗೆ ವಿಚ್ಛೇದನ ಬೇಕು ಎಂದು ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ವಿಚಾರಣೆಗೆ ತೆಗೆದುಕೊಂಡ ಕೋರ್ಟ್ ಇಬ್ಬರಿಗೂ ಕೌನ್ಸಿಲಿಂಗ್ ನಡೆಸುತ್ತದೆ. ಇಲ್ಲಿ ಸರಿಯಾಗದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ನಂತರ ಪ್ರಕರಣ ಪ್ರಾರಂಭವಾಗುತ್ತದೆ. ಇಲ್ಲಿ ಗಂಡ ಹೆಂಡತಿ ಬೇರೆಯಾಗಲು ಅವರ ನೀಡುವ ಕಾರಣಗಳನ್ನು ತಿಳಿದು ಅದನ್ನು ಪರಿಶೀಲಿಸಿ ಅವರಿಗೆ ವಿಚ್ಛೇದನ ನೀಡುವ ಕಾರ್ಯ ಮಾಡುತ್ತದೆ.
ಇಲ್ಲಿ ಪತಿಯ ಆದಾಯವನ್ನು ನೋಡಿ ಆದಾಯದ ಶೇಕಾಡವಾರು ಹಣ ಪತ್ನಿಯ ಜೀವನಾಂಶವಾಗಿ ನೀಡಬೇಕೆಂದು ತಿಳಿಸುತ್ತದೆ. ಉದಾಹರಣೆಗೆ ನೋಡುವುದಾದರೆ ಶಿವಮೊಗ್ಗದಂತಹ ಜಿಲ್ಲೆಯಲ್ಲಿ ಪ್ರತಿ ವರ್ಷಕ್ಕೆ ಸರಿ ಸುಮಾರು 300 ವಿಚ್ಛೇದನ ನಡೆಯುತ್ತವೆ.
ಹಿಂದೆಲ್ಲಾ ತುಂಬು ಕುಟುಂಬಗಳು ಇರುತ್ತಿದ್ದವು. ಇದರಲ್ಲಿ ಗಂಡ- ಹೆಂಡತಿ ಹೆಚ್ಚಾಗಿ ಹೊಂದಿಕೊಂಡು ಇರುತ್ತಿದ್ದರು. ಕಾರಣ ತನ್ನ ತಂದೆ-ತಾಯಿ, ಅಣ್ಣ-ತಮ್ಮ ಹಾಗೂ ಕುಟುಂಬದವರಿಗೆ ನೋವಾಗುತ್ತದೆ, ಅವಮಾನವಾಗುತ್ತದೆ ಎಂದು ವಿಚ್ಛೇದನದ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಸಣ್ಣ ಕುಟುಂಬಗಳು ಹೆಚ್ಚಾಗಿವೆ. ಇದರಿಂದ ಕುಟುಂಬದಲ್ಲಿ ಗಂಡು ಅಥವಾ ಹೆಣ್ಣು ಒಬ್ಬೂಬ್ಬರೆ ಮಕ್ಕಳು ಇರುತ್ತಾರೆ. ಅವರನ್ನು ಅವರ ತಂದೆ ತಾಯಿಗಳು ಅತ್ಯಂತ ಚೆನ್ನಾಗಿ ನೋಡಿಕೊಂಡಿರುತ್ತಾರೆ. ಮನೆ ಕೆಲಸವನ್ನೆ ಮಾಡದೆ ಹುಡುಗಿ ಗಂಡನ ಮನೆಗೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೆ ವಿಚ್ಛೇದನಕ್ಕೆ ಮುಂದಾಗುತ್ತಾರೆ ಎಂಬುದು ಹಿರಿಯ ವಕೀಲೆ ರೋಹಿಣಿ ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಹುಣಸೋಡು ಸ್ಪೋಟ ಪ್ರಕರಣಕ್ಕೆ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಿದೆ; ಆಯನೂರು ಮಂಜುನಾಥ್