ಬೆಂಗಳೂರು: ರಾಜ್ಯದ ಮೂವತ್ತು ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆ, ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ, ಯೋಜನೆಗಳ ಜಾರಿ ಕುರಿತು ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಅಪರ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.
![DISTRICTINCHARGE ORDER NEWS](https://etvbharatimages.akamaized.net/etvbharat/prod-images/kn-bng-07-districtincharge-order-script-7201951_31122019000543_3112f_1577730943_1065.jpg)
ಯಾವ ಅಧಿಕಾರಿಗೆ ಯಾವ ಜಿಲ್ಲೆಯ ಉಸ್ತುವಾರಿ:
- ತುಷಾರ್ ಗಿರಿನಾಥ್- ಬೆಂಗಳೂರು ನಗರ
- ಪಿ.ಹೇಮಲತ- ಬೆಂಗಳೂರು ಗ್ರಾಮಾಂತರ
- ಡಾ.ರಶ್ಮಿಮಹೇಶ್- ರಾಮನಗರ
- ಪಂಕಜ್ ಕುಮಾರ್ ಪಾಂಡೆ- ಚಿತ್ರದುರ್ಗ
- ಉಮಾ ಮಹಾದೇವನ್- ಕೋಲಾರ
- ಎಲ್.ಕೆ.ಅತೀಕ್- ತುಮಕೂರು
- ನಾಗಾಂಭಿಕ ದೇವಿ- ಚಿಕ್ಕಬಳ್ಳಾಪುರ
- ಪಿ.ಮಣಿವಣ್ಣನ್- ಶಿವಮೊಗ್ಗ
- ಉಮಾಶಂಕರ್- ದಾವಣಗೆರೆ
- ಡಾ.ಜಿ.ಕಲ್ಪನ- ಮೈಸೂರು
- ಜಾವೇದ್ ಅಖ್ತಾರ್- ಮಂಡ್ಯ
- ರಾಜೇಂದ್ರ ಕುಮಾರ್ ಕಠಾರಿಯ- ಚಾಮರಾಜನಗರ
- ನವೀನ್ ರಾಜ್ ಸಿಂಗ್- ಹಾಸನ
- ಅನ್ಬುಕುಮಾರ್- ಕೊಡಗು
- ಶಾಲಿನಿ ರಜನೀಶ್- ಚಿಕ್ಕಮಗಳೂರು
- ಮಹೇಶ್ವರ್ ರಾವ್- ಉಡುಪಿ
- ಪೊನ್ನುರಾಜು- ದ.ಕನ್ನಡ
- ರಾಕೇಶ್ ಸಿಂಗ್- ಬೆಳಗಾವಿ
- ಗೌರವ್ ಗುಪ್ತಾ- ಧಾರವಾಡ
- ರಾಜ್ ಕುಮಾರ್ ಖತ್ರಿ- ಗದಗ
- ಮನೋಜ್ ಕುಮಾರ್ ಮೀನ- ಹಾವೇರಿ
- ಜೆ.ರವಿಶಂಕರ್- ವಿಜಯಪುರ
- ಮುನಿಶ್ ಮುದ್ಗಿಲ್- ಉ.ಕನ್ನಡ
- ಅಂಜು ಪರ್ವೇಜ್- ಬಾಗಲಕೋಟೆ
- ಕಪಿಲ್ ಮೋಹನ್- ಕಲಬುರಗಿ
- ಟಿ.ಕೆ.ಅನಿಲ್ ಕುಮಾರ್- ಯಾದಗಿರಿ
- ಕುಮಾರ್ ನಾಯಕ್- ರಾಯಚೂರು
- ಮಂಜುನಾಥ್ ಪ್ರಸಾದ್- ಕೊಪ್ಪಳ
- ಎಂ.ಎಸ್.ಶೇಖರ್- ಬಳ್ಳಾರಿ
- ಇ.ವಿ.ರಮಣ ರೆಡ್ಡಿ- ಬೀದರ್