ETV Bharat / state

ಬೆಂಗಳೂರು: ಕೊರೊನಾ ರೋಗಿಗಳ ಮಾಹಿತಿ ನೀಡದ 4 ಆಸ್ಪತ್ರೆಗಳ ಪರವಾನಗಿ ರದ್ದು - ಬೆಂಗಳೂರು ಲೆಟೆಸ್ಟ್ ನ್ಯೂಸ್

ಕೊರೊನಾ ರೋಗಿಗಳ ಬಗ್ಗೆ ಮಾಹಿತಿ ನೀಡದ 4 ಆಸ್ಪತ್ರೆಗಳ ಪರವಾನಗಿಯನ್ನು ಜಿಲ್ಲಾಧಿಕಾರಿ ಶಿವಮೂರ್ತಿ ರದ್ದು ಮಾಡಿ‌ ಆದೇಶ ಹೊರಡಿಸಿದ್ದಾರೆ.

Hospital license
Hospital license
author img

By

Published : Jun 13, 2020, 9:11 PM IST

ಬೆಂಗಳೂರು: ILI, SARI, ಕೊರೊನಾ ರೋಗಿಗಳ ಬಗ್ಗೆ ಮಾಹಿತಿ ನೀಡದ ಆಸ್ಪತ್ರೆಗಳ ಪರವಾನಗಿಯನ್ನು ಜಿಲ್ಲಾಧಿಕಾರಿ ಶಿವಮೂರ್ತಿ ರದ್ದು ಮಾಡಿ‌ ಆದೇಶ ಹೊರಡಿಸಿದ್ದಾರೆ.

ಕೊರೊನಾ ಹರಡುವಿಕೆ‌ ದಿನೇ ದಿನೆ ಹೆಚ್ಚಾಗುತ್ತಿದೆ. ‌ತೀವ್ರಗತಿಯಲ್ಲಿ ಸೋಂಕಿತರ‌‌ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೆಪಿಎಂಇ ನೋಂದಾಯಿತ ಆರೋಗ್ಯ ಸಂಸ್ಥೆಗಳಿಂದ ದೈನಂದಿನ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ರೋಗಿಗಳ ಬಗ್ಗೆ ಆಸ್ಪತ್ರೆಗಳು ಮಾಹಿತಿ ಸಲ್ಲಿಸಿಲ್ಲ. ಹಾಗಾಗಿ 4 ಆಸ್ಪತ್ರೆಗಳ ಪರವಾನಗಿಯನ್ನು ಜಿಲ್ಲಾಧಿಕಾರಿ ರದ್ದು ಮಾಡಿ‌ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನೋಟಿಸ್ ನೀಡಿದ್ದರೂ ಆಸ್ಪತ್ರೆಗಳು ಉತ್ತರ ನೀಡಿಲ್ಲ. ಹೀಗಾಗಿ KPME ಕಾಯ್ದೆ ಪ್ರಕಾರ ನಾಲ್ಕು ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಒಟ್ಟು 17 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿತ್ತು. ಇದರಲ್ಲಿ ಮಾಹಿತಿ ಅಪ್ಡೇಟ್ ಮಾಡದ ಬಗ್ಗೆ 13 ಆಸ್ಪತ್ರೆಗಳು ತಪ್ಪೊಪ್ಪಿಗೆ ಸಲ್ಲಿಸಿವೆ. ನಾಲ್ಕು ಆಸ್ಪತ್ರೆಗಳು ನೋಟಿಸ್​ಗೆ ಉತ್ತರ ನೀಡಿರಲಿಲ್ಲ. ಹೀಗಾಗಿ ನಾಲ್ಕು ಆಸ್ಪತ್ರೆಗಳ ಪರವಾನಗಿ ರದ್ದು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಯಾವ್ಯಾವ ಆಸ್ಪತ್ರೆಗಳ ಪರವಾನಗಿ ರದ್ದು?

1. ನಮ್ಮ ಕ್ಲಿನಿಕ್, ಸಹಕಾರ ನಗರ
2. ಪಂಚಮುಖಿ ಸ್ಪೆಷಲ್‌ ಕ್ಲಿನಿಕ್, ಪೀಣ್ಯ ಎರಡನೇ ಹಂತ
3. ಮಾತೃ ಛಾಯಾ ಕ್ಲಿನಿಕ್, ಸುಧಾಮನಗರ
4. ನಾಯಕ್ ಆಸ್ಪತ್ರೆ, ಗಾಯಿತ್ರಿ ನಗರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.