ಬೆಂಗಳೂರು: ಕೆಂಗೇರಿಯ ಆರ್.ವಿ. ಕಾಲೇಜು ಬಳಿಯ ವೈಟ್ ಪ್ಯಾಲೇಸ್ ಬಳಿ, ಕಟ್ಟಡ ಕಾರ್ಮಿಕರಿಗೆ ಹಳಸಿದ ಆಹಾರ ನೀಡಲಾಗಿದೆ ಎಂಬ ಆರೊಪ ಕೇಳಿಬಂದಿದೆ.
ಕಾರ್ಮಿಕ ಇಲಾಖೆಯಿಂದ ಸುಮಾರು 6 ಸಾವಿರ ಜನಕ್ಕೆ ಆಹಾರ ನೀಡಲಾಗುತ್ತಿದೆ. ಕೊರೊನಾ ವಾರಿಯರ್ಸ್ ಮೂಲಕ ಆಹಾರ ಪ್ಯಾಕೆಟ್ ಹಂಚಲಾಗುತ್ತದೆ. ಆದರೆ ನಿನ್ನೆ ಮಾಡಿದ ಆಹಾರವನ್ನು ಇಂದಿನ ಆಹಾರದ ಜೊತೆ ಮಿಕ್ಸ್ ಮಾಡಿರುವ ಆರೋಪ ಕೇಳಿ ಬಂದಿದೆ.
ಮಿಕ್ಸ್ ಆಗಿರುವುದರಿಂದ ಆಹಾರ ಹಾಳಾಗಿದ್ದು, CHEF TALK ಕಂಪನಿ ಆಹಾರ ತಯಾರಿಸಿದೆ. ಈ ಕಂಪನಿಯು ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗೂ ಆಹಾರ ನೀಡಲಿದೆ. ಎರಡು ಮೂರು ರೀತಿಯ ಆಹಾರ ನೀಡಿದ್ದು, ಆಹಾರ ಹಾಳಾಗಿದೆ ಎಂದು ಆಹಾರ ಪ್ಯಾಕೆಟ್ ಹಂಚಲು ಕೊರೊನಾ ವಾರಿಯರ್ಸ್ ನಿರಾಕರಿಸಿದ್ದಾರೆ. ಒಂದು ಊಟಕ್ಕೆ 27 ರೂಪಾಯಿ ಕಾರ್ಮಿಕ ಇಲಾಖೆ ನೀಡುತ್ತದೆ. ಆದರೆ ಈ ರೀತಿ ಕಳಪೆ ಆಹಾರ ನೀಡಿ ಶೆಫ್ ಟಾಕ್ ಕಂಪನಿ ಮೋಸ ಮಾಡಿದೆ.