ಬೆಂಗಳೂರು: ಕೊರೊನಾ ಹಾಟ್ಸ್ಪಾಟ್ ಆಗಿರುವ ಬೆಂಗಳೂರಿನಲ್ಲಿ ಸಾಮಾಜಿಕ ಅಂತರವಿಲ್ಲದೆ ಆಹಾರ ಧಾನ್ಯಗಳ ಕಿಟ್ ಪಡೆದುಕೊಳ್ಳಲು ಜನ ಮುಗಿ ಬಿದ್ದಿದ್ದಾರೆ.
ನಗರದ ಓಕಳಿಪುರಂ ಬಳಿ ಇರುವ ಆರ್. ಆರ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ವತಿಯಿಂದ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ ಸಾರ್ವಜನಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು. ಈ ವೇಳೆ ಜನ ಮಾಸ್ಕ್ ಧರಿಸದೆ ಸಾಲುಗಟ್ಟಿ ನಿಂತು ಆಹಾರ ಧಾನ್ಯಗಳ ಕಿಟ್ ಪಡೆಯುತ್ತಿದ್ದರು.