ETV Bharat / state

ದೆಹಲಿ ಪ್ರಯಾಣ ಬೆಳೆಸಿದ ಅನರ್ಹ ಶಾಸಕರ ದಂಡು: ಬಿಜೆಪಿ ಹೈಕಮಾಂಡ್​ ಭೇಟಿ ಸಾಧ್ಯತೆ - disqualified mla's meet

ಯಡಿಯೂರಪ್ಪ ಅವರ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಅನರ್ಹ ಶಾಸಕರು ದೆಹಲಿಯತ್ತ ಮುಖ ಮಾಡಿದ್ದಾರೆ. ಅವರೆಲ್ಲ ಬಿಜೆಪಿ ಹೈಕಮಾಂಡ್​ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ದೆಹಲಿಗೆ ಹೊರಟ ಅನರ್ಹ ಶಾಸಕರು
author img

By

Published : Aug 21, 2019, 7:19 PM IST

ಬೆಂಗಳೂರು: ಅನರ್ಹ ಶಾಸಕರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬೈರತಿ ಬಸವರಾಜ್, ಎಸ್.ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಎಂಟಿಬಿ ನಾಗರಾಜ್​ ಅವರ ಪುತ್ರ ನಿತೀನ್ ಪುರುಷೋತ್ತಮ್, ಗೋಪಾಲಯ್ಯ, ಹೆಚ್. ವಿಶ್ವನಾಥ್ ಅವರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಿದರು.

ದೆಹಲಿಗೆ ಹೊರಟ ಅನರ್ಹ ಶಾಸಕರು

ಸಾಧ್ಯವಾದರೆ ಬಿಜೆಪಿ ಹೈಕಮಾಂಡ್​ ಭೇಟಿ ಮಾಡುತ್ತೇವೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ ಹೇಳಿದ್ರು. ರಾಜಕೀಯ ಲೆಕ್ಕಚಾರದ ಪ್ರಕಾರ ರಾಜ್ಯದ ಸಚಿವರ ಸ್ಥಾನ ಹಂಚಿಕೆ ಮಾಡಲಾಗಿದೆ. ಅದನ್ನು ನಾವು, ನೀವು ಕೇಳಬಾರದು ಎಂದು ವಿಶ್ವನಾಥ್​ ಪ್ರತಿಕ್ರಿಯಿಸಿದರು.

ಇನ್ನು ಇದೇ ವೇಳೆ ಗರಂ ಆದ ಇನ್ನೋರ್ವ ಅನರ್ಹ ಶಾಸಕ ಬೈರತಿ ಬಸವರಾಜ್​ ಅವರು ಯಾವುದೇ ಹೈಕಮಾಂಡ್ ಭೇಟಿ ಮಾಡುತ್ತಿಲ್ಲ. ವೈಯಕ್ತಿಕ ಕಾರಣಗಳಿಗೆ ಹೊರಟಿದ್ದೇನೆ. ನಾವೇನು ದೆಹಲಿಗೆ ಹೋಗಬಾರದಾ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದರು.

ಇನ್ನು ಕೆಲವರು ಪ್ರತಿಕ್ರಿಯಿಸದೇ ಹಾಗೇ ನಡೆದರು. ಗೋವಾಕ್ಕೆ ತೆರಳುತ್ತಿರುವುದಾಗಿ ಕೆಲವರು ತಪ್ಪು ಮಾಹಿತಿ ನೀಡಿದ್ರು. ಅನರ್ಹ ಶಾಸಕರ ಜೊತೆ ಮಾಜಿ ಶಾಸಕರಾದ ಸಿ ಪಿ ಯೋಗೇಶ್ವರ್​, ಕೆ ಎನ್​ ರಾಜಣ್ಣ ಸೇರಿದಂತೆ ಮತ್ತಿತರರು ಇದ್ದರು.

Intro:KN_BNG_01_21_MLA s_Ambarish_7203301
Slug: ದೆಹಲಿಯತ್ತ ಹೊರಟ ಅನರ್ಹ ಶಾಸಕರ ದಂಡು: ಬಿಜೆಪಿ ಹೈ ಕಮಾಂಡ್ ಬೇಟಿ ಸಾಧ್ಯತೆ

ಬೆಂಗಳೂರು: ಅನರ್ಹ ಶಾಸಕರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.. ಬೈರತಿ ಬಸವರಾಜ್, ಎಸ್.ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಸಿಪಿ ಯೋಗೇಶ್ವರ್, ಎಂಟಿಬಿ ಮಗ ನಿತೀನ್ ಪುರುಷೋತ್ತಮ್, ಗೋಪಾಲಯ್ಯ, ಎಚ್ ವಿಶ್ವನಾಥ್ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ರು.. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.. ಆದ್ರೆ ಯಾವುದೇ ಹೈಕಮಾಂಡ್ ಭೇಟಿ ಮಾಡಲು ತೆರಳುತ್ತಿಲ್ಲ ಎಂದು ಬೈರತಿ ಬಸವರಾಜ್ ಹೇಳುತ್ತಾ ನಾವೇನು ದೆಹಲಿಗೆ ಹೋಗಬಾರದಾ ಎಂದು ಮಾದ್ಯಮಗಳ ಮೇಲೆ ಗರಂ ಆದ್ರು..

ತಮ್ಮ ಸ್ಥಾನದ ಬಗ್ಗೆ ಬಿಜೆಪಿ ಹೈಕಮಾಂಡ್ ಬಳಿ ಚರ್ಚಿಸಿ ಭದ್ರ ಮಾಡಿಕೊಳ್ಳಲು ಅನರ್ಹ ಶಾಸಕರು ದೆಹಲಿಗೆ ಹೋರಟಿದ್ದಾರೆ ಎನ್ನಲಾಗಿದ್ದು, ಕೆಐಎಎಲ್ ನಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಲು ಗೋಪಾಲಯ್ಯ ನಿರಾಕರಿಸಿದ್ರು.. ಇದೆ ವೇಳೆ ದೆಹಲಿಗೆ ತೆರಳುತ್ತಿದ್ರು, ಗೋವಾಗೆ ತೆರಳುತ್ತಿದ್ದೇನೆ ಅಂತಾ ತಪ್ಪು ಮಾಹಿತಿ ನೀಡಿ ಗೋಪಾಲಯ್ಯ ಹೊರಟ್ರು..Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.