ETV Bharat / state

ಶಾಸಕರ ಅನರ್ಹತೆ: 113ರಿಂದ 104ಕ್ಕೆ ಕುಸಿದ ಮ್ಯಾಜಿಕ್​​ ನಂಬರ್​​​... ಬಿಜೆಪಿಗೆ ಪ್ಲಸ್​​ ಆಯ್ತಾ ಸ್ಪೀಕರ್​​​ ತೀರ್ಪು? - Karnataka crisis

14 ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ತೀರ್ಪು ನೀಡಿದ ಹಿನ್ನೆಲೆ 113ರಿಂದ 104ಕ್ಕೆ ಮ್ಯಾಜಿಕ್ ನಂಬರ್ ಕುಸಿದಿದ್ದು, ಬಿಜೆಪಿಗೆ ಇದು ವರದಾನವಾಗಿದೆ.

ಬಿಜೆಪಿಗೆ ಪ್ಲಸ್ ಆಯ್ತಾ ಸ್ಪೀಕರ್ ತೀರ್ಪು?
author img

By

Published : Jul 28, 2019, 4:51 PM IST

ಬೆಂಗಳೂರು: ನಂಬರ್ ಗೇಮ್ ಆಟದಲ್ಲಿ ಸಮ್ಮಿಶ್ರ ಸರ್ಕಾರದಂತೆ ಬಿಜೆಪಿ ಕೂಡ ಬೀಳಲಿದೆ ಎನ್ನುವ ಆತಂಕದಿಂದ ಬಿಜೆಪಿ ಪಾರಾಗಿದ್ದು, ಸ್ಪೀಕರ್ ತೀರ್ಪು ಯಾರ ಬೆಂಬಲವೂ ಇಲ್ಲದೆ ಬಿಜೆಪಿ ಅಗತ್ಯ ಸಂಖ್ಯಾಬಲವನ್ನು ಅಧಿಕೃತವಾಗಿ ಹೊಂದುವಂತೆ ಮಾಡಿದೆ.

ಒಂದೆಡೆ ಅತೃಪ್ತ ಶಾಸಕರು ಅನರ್ಹಗೊಂಡು ಆತಂಕಕ್ಕೆ ಸಿಲುಕಿದ್ದರೆ, ಇನ್ನೊಂದೆಡೆ ಬಿಜೆಪಿ ಪಾಳಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮೊನ್ನೆ ಮೂವರು ಶಾಸಕರನ್ನ ಅನರ್ಹಗೊಳಿಸಿದ್ದ ಸ್ಪೀಕರ್ ರಮೇಶ್ ಕುಮಾರ್, ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. ಇದರಿಂದಾಗಿ ವಿಧಾನಸಭೆಯಲ್ಲಿ 17 ಸ್ಥಾನಗಳು ಖಾಲಿಯಾಗಿದ್ದು, ವಿಧಾನಸಭೆ ಸದಸ್ಯ ಬಲ 207ಕ್ಕೆ ಕುಸಿದಿದೆ. ಹಾಗಾಗಿ ಬಹುಮತಕ್ಕೆ ಈ ಹಿಂದೆ ಇದ್ದ 113ರ ಬದಲು 104 ಮ್ಯಾಜಿಕ್ ನಂಬರ್ ಆಗಿದೆ.

ಸದ್ಯ ಬಿಜೆಪಿ‌ ವಿಧಾನಸಭೆಯಲ್ಲಿ 105 ಸದಸ್ಯ ಬಲ ಹೊಂದಿದ್ದು,‌ ಓರ್ವ ಪಕ್ಷೇತರ ಶಾಸಕ ಕೂಡ ಬಿಜೆಪಿ ಬೆಂಬಲಿಸಿರುವ ಕಾರಣ 106 ಆಗಿದೆ. ಹೀಗಾಗಿ ಅನಾಯಾಸವಾಗಿ ಯಾವುದೇ ತೊಡಕಿಲ್ಲದೇ ಬಹುಮತವನ್ನು ಬಿಜೆಪಿ ಸಾಬೀತುಪಡಿಸಲಿದೆ. ಅಲ್ಲದೆ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಮಹೇಶ್ ಬಿಜೆಪಿಗೆ ಬೆಂಬಲ ನೀಡಿದರೆ ಅಥವಾ ತಟಸ್ಥರಾಗಿ ಉಳಿದರೆ ಬಿಜೆಪಿ ಗೆಲುವಿಗೆ ಮತ್ತಷ್ಟು ಸಹಕಾರಿಯಾಗಲಿದೆ.

ಇನ್ನು ಮೈತ್ರಿ ಪಕ್ಷದ ಪರ ಕಾಂಗ್ರೆಸ್ 65 ಮತ್ತು ಜೆಡಿಎಸ್ 34 ಸದಸ್ಯ ಬಲ ಹೊಂದಿದ್ದು, ಒಟ್ಟು 99 ಸದಸ್ಯರನ್ನು ಹೊಂದಿದೆ. ಆದರೆ ಆಸ್ಪತ್ರೆಯಲ್ಲಿರುವ ಶಾಸಕ ನಾಗೇಂದ್ರ ಗೈರಾದರೆ 98ಕ್ಕೆ ಕುಸಿಯಲಿದ್ದು, ಮತದಾನದಲ್ಲಿ ಸಮಬಲವಾದಲ್ಲಿ ಮಾತ್ರ ಸ್ಪೀಕರ್ ಮತ‌ ಚಲಾಯಿಸಲು ಅವಕಾಶ ಹೊಂದಿರುವ ಕಾರಣ 97ಕ್ಕೆ ಮೈತ್ರಿ ಮತ ಸೀಮಿತವಾಗುವ ಸಾಧ್ಯತೆ ಇದೆ. ಶಾಸಕರ ರಾಜೀನಾಮೆ ಇತ್ಯರ್ಥ ಆಗದ ಕಾರಣ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಸದನದಲ್ಲಿ ಹಾಜರಿದ್ದ ಸಂಖ್ಯೆಯ ಆಧಾರದಲ್ಲಿ ಸಮ್ಮಿಶ್ರ ಸರ್ಕಾರ ವಿಶ್ವಾಸಮತದಲ್ಲಿ ಸೋಲನ್ನು ಅನುಭವಿಸಿತ್ತು. ಅಂದು ಮ್ಯಾಜಿಕ್ ಸಂಖ್ಯೆ 113 ಆಗಿದ್ದರೂ ಮೈತ್ರಿ ಪಕ್ಷದ ಶಾಸಕರು ಸದನಕ್ಕೆ ಬಾರದೆ ಇದ್ದದ್ದರಿಂದ ಹಾಜರಿದ್ದ ಸದಸ್ಯರ ಮತಗಳ ವಿಭಜನೆ ಮೂಲಕ ಫಲಿತಾಂಶ ಪ್ರಕಟಿಸಲಾಗಿತ್ತು. ಆದರೆ ಈಗ ತೀರ್ಪು ಹೊರಬಂದ ಕಾರಣ ಮ್ಯಾಜಿಕ್ ನಂಬರ್ 104 ಆಗಿದ್ದು, ಅಧಿಕೃತವಾಗಿಯೇ ಬಿಜೆಪಿ ಅಷ್ಟು ಸಂಖ್ಯೆಯನ್ನು ಹೊಂದಿರುವುದರಿಂದ ಅನಾಯಾಸವಾಗಿ ವಿಶ್ವಾಸಮತ ಗೆಲ್ಲುವ ವಿಶ್ವಾಸದಲ್ಲಿದೆ.

Intro:

ಬೆಂಗಳೂರು: ನಂಬರ್ ಗೇಮ್ ಆಟದಲ್ಲಿ ಸಮ್ಮಿಶ್ರ ಸರ್ಕಾರದಂತೆ ಬಿಜೆಪಿ ಕೂಡ ಬೀಳಲಿದೆ ಎನ್ನುವ ಆತಂಕದಿಂದ ಬಿಜೆಪಿ ಪಾರಾಗಿದ್ದು ಯಾರ ಬೆಂಬವೂ ಇಲ್ಲದೆ ಬಿಜೆಪಿ ಅಗತ್ಯ ಸಂಖ್ಯಾಬಲವನ್ನು ಅಧಿಕೃತವಾಗಿ ಹೊಂದಿದೆ.

ಒಂದೆಡೆ ಅತೃಪ್ತ ಶಾಸಕರು ಅನರ್ಹಗೊಂಡು ಆತಂಕಕ್ಕೆ ಸಿಲುಕಿದ್ದರೆ ಇತ್ತ ಬಿಜೆಪಿ ಪಾಳಯದಲ್ಲಿ ನೆಮ್ಮದಿಯ ನಿಟ್ಟುಸಿರು ಕಂಡುಬಂದಿದೆ. ಮೊನ್ನೆ ಮೂವರು ಶಾಸಕರನ್ನ ಅನರ್ಹಗೊಳಿಸಿದ್ದ ಸ್ಪೀಕರ್ ರಮೇಶ್ ಕುಮಾರ್ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ ಇದರಿಂದಾಗಿ ವಿಧಾನಸಭೆಯಲ್ಲಿ 17 ಸ್ಥಾನಗಳು ಖಾಲಿಯಾಗಿದ್ದು ವಿಧಾನಸಭೆ ಸದಸ್ಯ ಬಲ 207 ಕ್ಕೆ ಕುಸಿದಿದೆ,ಹಾಗಾಗಿ ಬಹುಮತಕ್ಕೆ ಈ ಹಿಂದೆ ಇದ್ದ 113 ರ ಬದಲು 104 ಮ್ಯಾಜಿಕ್ ನಂಬರ್ ಆಗಿದೆ.

ಸಧ್ಯ ಬಿಜೆಪಿ‌ ವಿಧಾನಸಭೆಯಲ್ಲಿ 105 ಸದಸ್ಯ ಬಲ ಹೊಂದಿದ್ದು‌ ಓರ್ವ ಪಕ್ಷೇತರ ಶಾಸಕ ಕೂಡ ಬಿಜೆಪಿ ಬೆಂಬಲಿಸಿರುವ ಕಾರಣ 106 ಆಗಿದೆ ಹೀಗಾಗಿ ಅನಾಯಾಸವಾಗಿ ಯಾವುದೇ ತೊಡಕಿಲ್ಲದೇ ಬಹುಮತವನ್ನು ಬಿಜೆಪಿ ಸಾಬೀತುಪಡಿಸಲಿದೆ. ಅಲ್ಲದೆ ಬಿಎಸ್ಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಮಹೇಶ್ ಬಿಜೆಪಿಗೆ ಬೆಂಬಲ ನೀಡಿದೆ ಅಥವಾ ತಟಸ್ಥರಾಗಿ ಉಳಿದರೆ ಬಿಜೆಪಿ ಗೆಲುವಿಗೆ ಮತ್ತಷ್ಟು ಸಹಕಾರಿಯಾಗಲಿದೆ.

ಇನ್ನು ಮೈತ್ರಿ ಪಕ್ಷದ ಪರ ಕಾಂಗ್ರೆಸ್ 65 ಮತ್ತು ಜೆಡಿಎಸ್ 34
ಸದಸ್ಯ ಬಲ ಹೊಂದಿದ್ದು ಒಟ್ಟು 99 ಸದಸ್ಯರನ್ನು ಹೊಂದಿದೆ,ಆದರೆ ಆಸ್ಪತ್ರೆಯಲ್ಲಿರುವ ಶಾಸಕ ನಾಗೇಂದ್ರ ಗೈರಾದರೆ 98 ಕ್ಕೆ ಕುಸಿಯಲಿದ್ದು, ಮತದಾನದಲ್ಲಿ ಸಮ ಬಲವಾದಲ್ಲಿ ಮಾತ್ರ ಸ್ಪೀಕರ್ ಮತ‌ಚಲಾಯಿಸಲು ಅವಕಾಶ ಹೊಂದಿದ ಕಾರಣ 97 ಕ್ಕೆ ಮೈತ್ರಿ ಮತ ಸೀಮಿತವಾಗುವ ಸಾಧ್ಯತೆ ಇದೆ.

ಶಾಸಕರ ರಾಜೀನಾಮೆ ಇತ್ಯರ್ಥ ಆಗದ ಕಾರಣ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಸದನದಲ್ಲಿ ಹಾಜರಿದ್ದ ಸಂಖ್ಯೆಯ ಆಧಾರದಲ್ಲಿ ಸಮ್ಮಿಶ್ರ ಸರ್ಕಾರ ವಿಶ್ವಾಸಮತದಲ್ಲಿ ಸೋಲನ್ನು ಅನುಭವಿಸಿತ್ತು.ಅಂದು ಮ್ಯಾಜಿಕ್ ಸಂಖ್ಯೆ 113 ಆಗಿದ್ದರೂ ಮೈತ್ರಿ ಪಕ್ಷದ ಶಾಸಕರು ಸದನಕ್ಕೆ ಬಾರದೆ ಇದ್ದದ್ದರಿಂದ ಹಾಜರಿದ್ದ ಸದಸ್ಯರ ಮತಗಳ ವಿಭಜನೆ ಮೂಲಕ ಫಲಿತಾಂಶ ಪ್ರಕಟಿಸಲಾಗಿತ್ತು.ಆದರೆ ಈಗ ತೀರ್ಪು ಹೊರಬಂದ ಕಾರಣ ಮ್ಯಾಜಿಕ್ ನಂಬರ್ 104 ಆಗಿದ್ದು ಅಧಿಕೃತವಾಗಿಯೇ ಬಿಜೆಪಿ ಅಷ್ಟು ಸಂಖ್ಯೆಯನ್ನು ಹೊಂದಿರುವುದರಿಂದ ಅನಾಯಾಸವಾಗಿ ವಿಶ್ವಾಸಮತ ಗೆಲ್ಲುವ ವಿಶ್ವಾಸದಲ್ಲಿದೆ.Body:-ಪ್ರಶಾಂತ್ ಕುಮಾರ್Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.