ETV Bharat / state

ನಿರಪರಾಧಿ ಮೇಲೆ ಕ್ರಮ ಸಲ್ಲದು: ಸಿಎಂ ಬಿಎಸ್​​ವೈಗೆ ಬೆಂಬಲ ಘೋಷಿಸಿದ ದಿಂಗಾಲೇಶ್ವರ ಶ್ರೀ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸ್ವಪಕ್ಷದವರು ಬಹಳಷ್ಟು ವಿರೋಧ ಮಾಡುತ್ತಾ ಬಂದರು. ಆ ವಿರೋಧವನ್ನ ಹೈಕಮಾಂಡ್ ನಿಯಂತ್ರಿಸಬೇಕಿತ್ತು. ಜಾತಿ, ಪಕ್ಷ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಬೇಕೇ ಹೊರತು ನಿರಪರಾಧಿಗಳ ಮೇಲೆ ಕ್ರಮಕೈಗೊಳ್ಳಬಾರದು ಎಂದು ಯಡಿಯೂರಪ್ಪ ಬದಲಾವಣೆಗೆ ದಿಂಗಾಲೇಶ್ವರ ಶ್ರೀ ವಿರೋಧ ವ್ಯಕ್ತಪಡಿಸಿದ್ದಾರೆ.

author img

By

Published : Jul 25, 2021, 1:27 PM IST

Updated : Jul 25, 2021, 1:36 PM IST

Dingaleshwar swamiji
ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ

ಬೆಂಗಳೂರು: ಜಾತಿ ರಾಜಕಾರಣ, ಪಕ್ಷ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಬೇಕೇ ಹೊರತು ನಿರಾಪರಾಧಿಗಳ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಯಡಿಯೂರಪ್ಪ ಬದಲಾವಣೆಗೆ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪಗೆ ಮಠಾಧೀಶರ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದಾರೆ.

ಸಿಎಂ ಬಿಎಸ್​​ವೈಗೆ ಬೆಂಬಲ ಘೋಷಿಸಿದ ದಿಂಗಾಲೇಶ್ವರ ಶ್ರೀ

ಅರಮನೆ ಮೈದಾನದಲ್ಲಿ ಮಠಾಧೀಶರ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಹಾಗೂ ಮಕ್ಕಳು ಮಠಾಧೀಶರ ಸಮಾವೇಶ ಆಯೋಜನೆ ಮಾಡಲು ಕಾರಣ ಎಂಬ ಮಾತು ಕೇಳಿ ಬಂದಿದೆ. ದೇವರ ಸಾಕ್ಷಿಯಾಗಿ ಯಡಿಯೂರಪ್ಪ ಇಂತಹ ಹೋರಾಟ ಮಾಡಬೇಡಿ ಎಂದು ಹೇಳಿದ್ದಾರೆ. ಇದು ನಮ್ಮ ವೈಯಕ್ತಿಕ ನಿಲುವು. ಈ ಸಮಾವೇಶಕ್ಕೂ ಯಡಿಯೂರಪ್ಪ ಕುಟುಂಬ, ಬಿಜೆಪಿ ನಾಯಕರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸ್ವಪಕ್ಷದವರು ಬಹಳಷ್ಟು ವಿರೋಧ ಮಾಡುತ್ತಾ ಬಂದರು. ಆ ವಿರೋಧವನ್ನ ಹೈಕಮಾಂಡ್ ನಿಯಂತ್ರಿಸಬೇಕಿತ್ತು. ಜಾತಿ, ಪಕ್ಷ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಬೇಕೇ ಹೊರತು ನಿರಾಪರಾಧಿಗಳ ಮೇಲೆ ಕ್ರಮಕೈಗೊಳ್ಳಬಾರದು ಎಂದು ಯಡಿಯೂರಪ್ಪ ಬದಲಾವಣೆಗೆ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.

ವರ್ತಮಾನದ ಸಮಸ್ಯೆಯಲ್ಲಿ ಇದು ಈಗೀನ ರಾಜಕೀಯವೂ ಹೌದು. ಯಡಿಯೂರಪ್ಪ ಅವರನ್ನ ಈ ವೇದಿಕೆ ಅಭಿನಂದಿಸುತ್ತದೆ. ಎಲ್ಲಾ ಜನಾಂಗದವರಿಗೆ ಬಜೆಟ್​​ನಲ್ಲಿ ಅನುದಾನ ನೀಡಿರುವುದರಿಂದ ಅವರನ್ನ ಅಭಿನಂದಿಸಬೇಕು. ಈ ಸಮಾವೇಶ ಯಾವ ಪಕ್ಷದ ಪರವಾಗಿಯೂ ಇಲ್ಲ. ಯಾವ ಪಕ್ಷದ ವಿರೋಧವಾಗಿಯೂ ಇಲ್ಲ ಎಂದು ಸ್ವಾಮೀಜಿ ಹೇಳಿದ್ರು.

ಯಾವ ಕಾರಣಕ್ಕಾಗಿ ರಾಜ್ಯದಲ್ಲಿ ಇಷೆಲ್ಲಾ ಆಯ್ತು ಎನ್ನುವುದನ್ನು ಮಾಧ್ಯಮಗಳು ತೋರಿಸಿವೆ. ನಾಯಕತ್ವ ಬದಲಾವಣೆ ಅಗಲಿದೆ. ಮುಂದಿನ ಸರ್ಕಾರದಲ್ಲಿ ಯಡಿಯೂರಪ್ಪ ಅವರಿಗೆ ಅವಕಾಶವಿಲ್ಲ. ಈಶ್ವರಪ್ಪ, ಜಗದೀಶ್ ಶೆಟ್ಟರ್​​ಗೆ ಅವಕಾಶ ಇಲ್ಲ. ನಮ್ಮದೇ ಇನ್ಮುಂದೆ ಎಲ್ಲಾ ನಡೆಯೋದು ಅಂದರೆ ಹೇಗೆ? ಅವಕಾಶ ಇಲ್ಲ ಎನ್ನುವುದನ್ನು ಒಪ್ಪುತ್ತೇವೆ. ಆದರೆ ನಮ್ಮದೇ ಇನ್ಮುಂದೆ ನಡೆಯೋದು ಅನ್ನೋದನ್ನು ಸಹಿಸಲ್ಲ ಎಂದು ಪರೋಕ್ಷವಾಗಿ ಕಟೀಲ್ ವಿರುದ್ಧ ಕಿಡಿಕಾರಿದರು.

ಕೇಂದ್ರ ನಾಯಕರಿಗೆ ಸಂದೇಶ ತಲುಪಿಸಲು ಹಿಂದಿಯಲ್ಲಿ ಕೆಲ ಮಾತುಗಳನ್ನಾಡಿದ ದಿಂಗಾಲೇಶ್ವರ ಶ್ರೀಗಳು, ನಾವೂ ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ಕೇಂದ್ರ ಸರ್ಕಾರ ಹಾಗೂ ಹೈಕಮಾಂಡ್ ವಿರುದ್ಧ ನಾವೂ ಈ ಸಮಾವೇಶ ಮಾಡಿಲ್ಲ. ಜತೆಗೆ ಮಠಾಧೀಶರು ಶಕ್ತಿ ಪ್ರದರ್ಶನಕ್ಕೆ ಬಂದಿಲ್ಲ ಎಂದು ಪುನಚ್ಚರಿಸಿದ್ದರು.

ಮಠಾಧಿಪತಿಗಳು ಆಳುವ ಅರಸರಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಈ ಪಕ್ಷಗಳು ಹುಟ್ಟುವ ಮುನ್ನ ಮಠಗಳು ಸಾವಿರ ವರ್ಷಗಳ ಹಿಂದೆಯೇ ಹುಟ್ಟಿ ಕೆಲಸ ಮಾಡಿವೆ ಎಂದು ಮಠಗಳನ್ನು ಪಕ್ಷಗಳಿಗೆ ಬೆಂಬಲಿಸುವ ಹೇಳಿಕೆ ನೀಡುತ್ತಿರುವ ರಾಜಕಾರಣಿಗಳಿಗೆ ತಿರುಗೇಟು ನೀಡಿದರು.

ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ವಾಸ ಮಾಡಿದಂತೆ:

ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂಬ ಸುದ್ದಿ ಹರಿಬಿಟ್ಟರು. ಹಿಂದಿನ ವರ್ಷ ನೆರೆ ಸಂಬಂಧಿಸಿದಾಗ 45 ದಿನ ಯಡಿಯೂರಪ್ಪ ಅವರು ಒಬ್ಬರೇ ಕೆಲಸ ಮಾಡಿದರು. ಬಂದಾಳಿಕೆ ಮರದಲ್ಲಿ ಬಿಟ್ಟರೆ ಮರವನ್ನೇ ನಾಳ ಮಾಡುತ್ತದೆ. ಬಿಜೆಪಿಯಲ್ಲಿ ಹುಟ್ಟಿ ಬಿಜೆಪಿಯನ್ನೇ ತೆಗೆಯಲು ಹೋಗುತ್ತಾರೆ. ಆಗ ನಾವು ಬಂದಾಳಿಕೆಯನ್ನ ತೆಗೆದು ಹಾಕಬೇಕು. ಈಶ್ವರಪ್ಪ, ಜಗದೀಶ್, ಸಿ ಟಿ ರವಿ, ಯತ್ನಾಳ್ ನಂತಹ ಅಗ್ರಗಣ್ಯರಿದ್ದಾರೆ. ನಾಯಕರಿಲ್ಲ ಎಂದಲ್ಲ. ಯಡಿಯೂರಪ್ಪ ಸುದೀರ್ಘ ಕಾಲ ಕೆಲಸ ಮಾಡಿದ್ದಾರೆ. ಕೆಲ ನಾಯಕರು ಬೇರೆ ನಾಯಕರನ್ನ ತೇಜೊವಧೆ ಮಾಡುವುದು ಸಲ್ಲದು.

ಯಾರೋ ಕಟ್ಟಿದ ಮನೆಯಲ್ಲಿ ಯಾರೋ ಇರುವುದು ಅಲ್ಲ. ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ವಾಸ ಮಾಡೋದು ಅಲ್ಲ. ಯಡಿಯೂರಪ್ಪ ಕಟ್ಟಿರುವ ಮನೆಯಲ್ಲಿ ಬೇರೆಯವರು ಇರುವುದು ಸೂಕ್ತವಲ್ಲ ಎಂದು ಪರೋಕ್ಷವಾಗಿ ವಿರೋಧಿ ಬಣದ ವಿರುದ್ಧ ಸ್ವಾಮೀಜಿ ವಾಗ್ದಾಳಿ ನಡೆಸಿದರು.

ಸನ್ಯಾಸಿಗಳ ಮಾತು ಮೀರಿದರೆ ಸಮಸ್ಯೆ:

ನಮ್ಮ ನಿಲುವಿಗೆ ನಾವು ಬದ್ಧರಾಗಿದ್ದೇವೆ. ನಾಡಿನ ಹಿತಕ್ಕಾಗಿ ಬದಲಾಗೋಣ. ಯಾವುದು ಮಾಡಿದರೆ ಸರಿ ಎಂಬುದನ್ನ ಸೂಕ್ಷ್ಮವಾಗಿ ಗಮನಿಸಬೇಕು. ಯಾವುದೇ ಕಾಲಕ್ಕೆ ಸನ್ಯಾಸಿಗಳ ಮಾತನ್ನ ಉಲ್ಲಂಘಿಸಿದರೆ ಮುಂದೆ ದೊಡ್ಡ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

ಯಡಿಯೂರಪ್ಪ ಅವರನ್ನ ನಾವೂ ಯಾವ ಕಾರಣಕ್ಕಾಗಿ ಆಶೀರ್ವಾದ ಮಾಡಿದ್ದೇವೆ ಎಂಬುವುದನ್ನು ಹೇಳುತ್ತೇನೆ. ‌ಒಂದೇ ಒಂದು ಜಾತಿಯನ್ನ ಅವರು ಬೆಂಬಲಿಸಲ್ಲ. ಅವರು ಜಾತ್ಯತೀತ ನಾಯಕರು. ಹೀಗಾಗಿ ನಾವೂ ಆಶೀರ್ವಾದ ಮಾಡಿದ್ದೇವೆ ಎಂದು ತಮ್ಮ ಬೆಂಬಲವನ್ನ ಶ್ರೀಗಳು ಸಮರ್ಥಿಸಿಕೊಂಡರು.

ನಮ್ಮ ಧರ್ಮ ಹಾಗೂ ಕರ್ತವ್ಯಗಳನ್ನ ಪಾಲಿಸೋಣ:

ಯಡಿಯೂರಪ್ಪ ಅವರನ್ನ ಈಗ ಮಾತ್ರ ಮಾಠಧೀಶರು ಬೆಂಬಲಿಸಿಲ್ಲ. ಕೇವಲ ಈಗಿನ ಮಠಾಧೀಶರು ಅಲ್ಲ ಆಗಿನ ಮಠಾಧೀಶರು ಕೂಡ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ರು. ಬಜೆಟ್​​ನಲ್ಲಿ ಮಠಗಳಿಗೆ ಹಣ ತೆಗೆದಿಟಿದ್ದು ಯಡಿಯೂರಪ್ಪ. ಕುಮಾರಸ್ವಾಮಿಯವರು ಮಠಗಳಿಗಾಗಿ ಬಜೆಟ್​​ನಲ್ಲಿ ಮೀಸಲಿಟ್ಟಿದ್ದಾರೆ. ಯಡಿಯೂರಪ್ಪ ಹಾಕಿಕೊಟ್ಟಿದ್ದನ್ನ ಬೇರೆ ಪಕ್ಷದ ಸರ್ಕಾರವೂ ಅದನ್ನೇ ಮುಂದುವರೆಸಿದ್ದಾರೆ.

ಯಡಿಯೂರಪ್ಪ ಲಿಂಗಾಯತ ಧರ್ಮದಲ್ಲಿ ಹುಟ್ಟಿದ್ದರೂ ಕೂಡ ಅವರು ಎಲ್ಲಾ ಜನಾಂಗದವರನ್ನ ಬೆಂಬಲಿಸಿದ್ದು, ಅವರ ಜಾತ್ಯಾತೀತ ನಿಲುವಿಗಾಗಿ ಅವರನ್ನ ಎಲ್ಲ ಸಮುದಾಯದ ಶ್ರೀಗಳು ಬೆಂಬಲಿಸಿದರು ಎಂದರು.

ಕಾಣಿಕೆ ಸಮರ್ಥನೆ:

ನಾಡಿನ ಹಿತಕ್ಕಾಗಿ ನಾವು ಕಾಣಿಕೆಯನ್ನ ಪಡೆಯುತ್ತೇವೆ ಎಂದು ಯಡಿಯೂರಪ್ಪ ನಿವಾಸದಲ್ಲಿ ಕಾಣಿಕೆ ಪಡೆದ ಕುರಿತು ಮಠಾಧೀಪತಿಗಳನ್ನ ನಿಂದನೆ ಮಾಡಿದಕ್ಕೆ ಅಸಮಧಾನ ವ್ಯಕ್ತಪಡಿಸಿದ ಶ್ರೀಗಳು, ನಾವು ಸನ್ಯಾಸಿಗಳು ಗಂಟೆಗೊಮ್ಮೆ ಬಟ್ಟೆ ಬದಲಿಸಿಕೊಳ್ಳಲ್ಲ. ಹರಿದ ಬಟ್ಟೆ ಹೊಲಿದು ಹಾಕಿಕೊಳ್ಳುತ್ತೇವೆ. ಕಾಣಿಕೆ ಎಲ್ಲರಿಂದ ಪಡೆಯುತ್ತೇವೆ. ಎಲ್ಲ ಪಕ್ಷಗಳ ನಾಯಕರಿಂದಲೂ ಒಡೆಯುತ್ತೇವೆ. ಅದನ್ನೇ ಟೀಕಿಸಿದ್ದು, ಸರಿಯಲ್ಲ. ಅನ್ನಿಸಿಕೊಳ್ಳುತ್ತಾರೆ ಎಂದು ಮನಬಂದಂತೆ ಅನ್ನಬೇಡಿ ಎಂದು ಹೇಳಿದ್ರು.

ಇದನ್ನೂ ಓದಿ: ಬಿಎಸ್​ವೈ ಇಲ್ಲದಿದ್ದರೆ ಬಿಜೆಪಿ ಸರ್ವನಾಶ ಖಂಡಿತ: ದಿಂಗಾಲೇಶ್ವರ ಶ್ರೀ ಎಚ್ಚರಿಕೆ

Last Updated : Jul 25, 2021, 1:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.