ETV Bharat / state

ಬಿಜೆಪಿಯವರಿಗೆ ರಾಹುಲ್ ಗಾಂಧಿ ಮೇಲಿರುವ ಭಯ ಇನ್ಯಾರ ಮೇಲೂ ಇಲ್ಲ: ದಿನೇಶ್ ಗುಂಡೂರಾವ್ - ದಿನೇಶ್ ಗುಂಡೂರಾವ್

ರಾಹುಲ್ ಗಾಂಧಿಯವರನ್ನು ಕೆಟ್ಟದಾಗಿ ಬಿಂಬಿಸಲು ಬಿಜೆಪಿ ಕೋಟ್ಯಂತರ ಹಣ ವ್ಯಯಿಸುತ್ತಿರುವುದು ಅಕ್ಷರಶಃ ಸತ್ಯ. ಬಹುಶಃ ಬಿಜೆಪಿಯವರಿಗೆ ರಾಹುಲ್ ಗಾಂಧಿಯವರ ಮೇಲಿರುವ ಭಯ ಇನ್ಯಾರ ಮೇಲೂ ಇಲ್ಲ ಎಂದು ದಿನೇಶ್​ ಗುಂಡೂರಾವ್​ ಟ್ವೀಟ್​ ಮಾಡಿದ್ದಾರೆ.

Dinesh Gundu Rao tweet agilest bjp
ಬಿಜೆಪಿಯವರಿಗೆ ರಾಹುಲ್ ಗಾಂಧಿಯವರ ಮೇಲಿರುವ ಭಯ ಇನ್ಯಾರ ಮೇಲೂ ಇಲ್ಲ
author img

By

Published : Oct 9, 2022, 10:59 PM IST

Updated : Oct 9, 2022, 11:07 PM IST

ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೇಲಿರುವಷ್ಟು ಭಯ ಬಿಜೆಪಿ ನಾಯಕರಿಗೆ ಬೇರೆ ಯಾರ ಮೇಲೂ ಇಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿಯವರನ್ನು ಕೆಟ್ಟದಾಗಿ ಬಿಂಬಿಸಲು ಬಿಜೆಪಿ ಕೋಟ್ಯಂತರ ಹಣ ವ್ಯಯಿಸುತ್ತಿರುವುದು ಅಕ್ಷರಶಃ ಸತ್ಯ. ಬಹುಶಃ ಬಿಜೆಪಿಯವರಿಗೆ ರಾಹುಲ್ ಗಾಂಧಿಯವರ ಮೇಲಿರುವ ಭಯ ಇನ್ಯಾರ ಮೇಲೂ ಇಲ್ಲ. ಆ ಭಯದಿಂದಲೇ, ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಬಿಜೆಪಿಯ ಟ್ರೋಲ್ ಪೇಜ್‌ಗಳು, ಫೇಕ್ ಫ್ಯಾಕ್ಟರಿಗಳು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಗಾಂಧಿಯವರಷ್ಟು ನಿರಂತರ ಅಪಮಾನ ಹಾಗೂ ಸುಳ್ಳು ಆರೋಪಗಳಿಗೆ ಗುರಿಯಾದವರಿಲ್ಲ. ನೇರವಾದ ಮರಕ್ಕೆ ಕೊಡಲಿ ಪೆಟ್ಟು ಜಾಸ್ತಿ ಎಂಬಂತೆ, ರಾಹುಲ್‌ರವರ ನೇರವಂತಿಕೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ಪ್ರೀತಿಯ ವ್ಯಕ್ತಿತ್ವ ಬಿಜೆಪಿಯವರ ನಿದ್ದೆಗೆಡಿಸಿದೆ. ದ್ವೇಷ ಕಾರುವ ಬಿಜೆಪಿಯವರಿಗೆ ಪ್ರೀತಿಯ ರಾಯಭಾರಿ ಆಗಿರುವ ರಾಹುಲ್ ಕಂಡರೆ ಹೆದರಿಕೆ ಸಹಜ ಎಂದು ಹೇಳಿದ್ದಾರೆ.

  • 3
    BJPಯವರು ತಮ್ಮ ವಿರುದ್ದ ಎಷ್ಟೇ ಅಪಪ್ರಚಾರ ಮಾಡಿದರೂ, ಅದೆಷ್ಟೇ ಅಪಹಾಸ್ಯ ಮಾಡಿದರೂ @RahulGandhi ಎದೆಗುಂದಿಲ್ಲ.‌

    ಸೈದಾಂತಿಕ ನಿಲುವಿನ ಬಗ್ಗೆ ಬದ್ಧತೆಯಿರುವ ಯಾವುದೇ ವ್ಯಕ್ತಿ ಎಂತಹ ಅಪಪ್ರಚಾರಗಳಿಗೂ ಬಗ್ಗುವುದಿಲ್ಲ ಎಂಬುವುದಕ್ಕೆ ರಾಹುಲ್ ಗಾಂಧಿಯವರೇ ಸಾಕ್ಷಿ.

    ರಾಹುಲ್‌ರವರ ಆ ಬದ್ಧತೆಯೇ ಇಂದು‌ ಅವರನ್ನು ಪೊರೆಯುತ್ತಿರುವ ಶಕ್ತಿ.

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 9, 2022 " class="align-text-top noRightClick twitterSection" data=" ">

ಬಿಜೆಪಿಯವರು ತಮ್ಮ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರೂ, ಅದೆಷ್ಟೇ ಅಪಹಾಸ್ಯ ಮಾಡಿದರೂ ರಾಹುಲ್ ಗಾಂಧಿ ಎದೆಗುಂದಿಲ್ಲ.‌ ಸೈದಾಂತಿಕ ನಿಲುವಿನ ಬಗ್ಗೆ ಬದ್ಧತೆಯಿರುವ ಯಾವುದೇ ವ್ಯಕ್ತಿ ಎಂತಹ ಅಪಪ್ರಚಾರಗಳಿಗೂ ಬಗ್ಗುವುದಿಲ್ಲ ಎಂಬುವುದಕ್ಕೆ ರಾಹುಲ್ ಗಾಂಧಿಯವರೇ ಸಾಕ್ಷಿ. ರಾಹುಲ್‌ರವರ ಆ ಬದ್ಧತೆಯೇ ಇಂದು‌ ಅವರನ್ನು ಪೊರೆಯುತ್ತಿರುವ ಶಕ್ತಿ ಎಂದಿದ್ದಾರೆ.

ಇದನ್ನೂ ಓದಿ : ಈಸ್ಟ್ ಇಂಡಿಯಾ ಕಂಪನಿ ರೀತಿಯಲ್ಲಿ ಬಿಜೆಪಿ ಅಡಳಿತ.. ರಣದೀಪ್ ಸಿಂಗ್ ಸುರ್ಜೇವಾಲಾ

Last Updated : Oct 9, 2022, 11:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.