ETV Bharat / state

ಶಾಸಕ ಸ್ಥಾನವನ್ನು ಮಾರಿಕೊಂಡವರನ್ನು ಗೆಲ್ಲಿಸಬೇಡಿ : ದಿನೇಶ್​ ಗುಂಡೂರಾವ್

author img

By

Published : Nov 30, 2019, 8:55 PM IST

ಹೊಸಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಭಾಗವಹಿಸಿದ್ದರು.

Dinesh gundu rao
ದಿನೇಶ್​ ಗುಂಡೂರಾವ್

ಹೊಸಪೇಟೆ : ಅನರ್ಹ ಶಾಸಕರು ತಮ್ಮ ಶಾಸಕ ಸ್ಥಾನವನ್ನು ಮಾರಿಕೊಂಡು ರಾಜ್ಯಕ್ಕೆ ಮೋಸ ಮಾಡಿ, ಮತದಾರರಿಗೆ ಅನ್ಯಾಯವೆಸಗಿದ್ದಾರೆ. ಅಂತಹವರನ್ನು ಗೆಲ್ಲಿಸಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್​ ಗುಂಡೂರಾವ್

ಹೊಸಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್​ ಗುಂಡೂರಾವ್​, ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಅವರನ್ನು ಪಕ್ಷ ಯಾವತ್ತು ಕ್ಷಮಿಸಲ್ಲ. ರಾಜ್ಯದಲ್ಲಿ ಉಪಚುನಾವಣೆ ಮಾಡುವಂತಹ ಅವಶ್ಯಕತೆ ಇರಲಿಲ್ಲ ಇವರಿಂದಾಗಿ ಚುನಾವಣೆ ನಡೆಯುತ್ತಿದೆ ಎಂದರು.

ಅನರ್ಹ ಶಾಸಕರಿಗೆ ಜನರು ಮತವನ್ನು ನೀಡಬಾರದು. ಸಂವಿಧಾನ ವಿರೋಧಿ ಪಕ್ಷವನ್ನು ಜನ ಬೆಂಬಲಿಸಬಾರದು. ಶಾಸಕರನ್ನು ದುಡ್ಡು ಕೊಟ್ಟು ಕೊಂಡುಕೊಂಡಿದ್ದಾರೆ ಅಂತವರನ್ನು ರಾಜಕೀಯದಿಂದ ದೂರ ಉಳಿಯುವಂತೆ ಮಾಡಬೇಕೆಂದರು.

ಬಿಜೆಪಿಯು ಕುದುರೆ ವ್ಯಾಪಾರ ಮಾಡುತ್ತಿದೆ. ಅಧಿಕಾರದ ವ್ಯಾಮೋಹದಿಂದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದಾರೆ. ಇವರಿಗೆಲ್ಲ ಚುನಾವಣೆ ಮಾಡುವುದಕ್ಕೆ ದುಡ್ಡು ಎಲ್ಲಿಂದ ಬರುತ್ತದೆ ಎಂದು ಗುಂಡೂರಾವ್​ ಪ್ರಶ್ನಿಸಿದರು.

Intro:ಶಾಸಕರ ಸ್ಥಾನವನ್ನು ಮಾರಿಕೊಂಡವರನ್ನು ಗೆಲ್ಲಿಸಬೇಡಿ : ದಿನೇಶ ಗುಂಡುರಾವ್
ಹೊಸಪೇಟೆ : ಅನರ್ಹ ಶಾಸಕರು ರಾಜ್ಯಕ್ಕೆ ಮೋಸವನ್ನು ಮಾಡಿದ್ದಾರೆ. ಅವರು ಮತದಾರಿಗೆ ಅನ್ಯಾಯ ವೇಸಗಿದ್ದಾರೆ. ಅಭಿವೃದ್ಧಿಗೆ ಒತ್ತು ನೀಡುವುದನ್ನು ಬಿಟ್ಟು ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಗುಂಡುರಾವ್ ಮಾತನಾಡಿದರು.

Body:ನಗರದ ಕಾಂಗ್ರೆಸ್ ಕಛೇರಿಯಲ್ಲಿ ಇಂದು ದಿನೇಶ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅನರ್ಹರ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮೋಸವನ್ನು ಮಾಡಿದ್ದಾರೆ. ಅವರನ್ನು ಪಕ್ಷ ಯಾವತ್ತು ಕ್ಷೇಮಿಸಲ್ಲ. ರಾಜ್ಯ ದಲ್ಲಿ ಉಪಚುನಾವಣೆ ಮಾಡುವಂತಹ ಅವಶ್ಯಕತೆ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಮಾತನಾಡಿದರು.
ಅನರ್ಹ ಶಾಸಕರಿಗೆ ಮತವನ್ನು ಕ್ಷೇತ್ರದ ಜನರು ನೀಡಬಾರದು. ಸಂವಿಧಾನ ವಿರೋಧ ಪಕ್ಷವನ್ನು ಬೆಂಬಲಿಸಬಾರದು. ಶಾಸಕರನ್ನು ದುಡ್ಡು ಕೊಟ್ಟುಕೊಂಡುಕೊಂಡಿದ್ದಾರೆ ಅಂತರಿಗೆ ರಾಜಕೀಯ ಪಕ್ಷದಿಂದ ದೂರ ಉಳಿಯುವಂತೆ ಮಾಡಬೇಕು. ಈ ಎಲ್ಲ ಶಾಸಕರನ್ನು ನಾವು ಪಕ್ಷದಲ್ಲಿ ಕರೆದುಕೊಂಡಿದ್ದು ನಮ್ಮ ತಪ್ಪಾಗಿದೆ ಎಂದು ಹೇಳಿದರು.
ರಾಜ್ಯದ ಉಪಚುನಾವಣೆಯಲ್ಲಿ ಜನರು ಇವರನ್ನು ಗ್ರಾಮದೋಳಗೆ ಬಿಟ್ಟುಕೊಳ್ಳುತ್ತಿಲ್ಲ. ಇವರಿಗಾಗಿ ಗ್ರಾಮದೋಳಗೆ ಪ್ರವೇಶವಿಲ್ಲ ಎಂದು ನಾಮ ಫಲಕವನ್ನು ಹಾಕಿದ್ದಾರೆ.
ಬಿಜೆಪಿ ಪಕ್ಷವು ಕುದುರೆ ವ್ಯಾಪಾರವನ್ನು ಮಾಡುತ್ತಿದೆ ಎಂದು. ಅವರಿಗೆ ಅಧಿಕಾರದ ವ್ಯಾಮೋಹದಿಂದ ಸಮ್ಮಿಶ್ರ ಸರಕಾರವನ್ನು ಬಿಳಿಸಿದ್ದಾರೆ.ಇವರಿಗೆಲ್ಲ ಚುನಾವಣೆ ಮಾಡುವುದಕ್ಕೆ ದುಡ್ಡು ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು. ಸುಪ್ರೀಮ ಕೋಟ್೯ ಇವರನ್ನು ಅನರ್ಹರು ಎಂದು ತಿರ್ಪುಕೊಟ್ಟಿದೆ. ಜನರ ಮುಂದೆ ಅವರನ್ನು ನಿಲ್ಲಿಸಿದೆ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

Conclusion:KN_HPT_2_ DINESH GUNDURAV_PRESS MEET_KA10028
Bite: ದಿನೇಶ ಗುಂಡುರಾವ ಕೆಪಿಸಿಸಿ ಅಧ್ಯಕ್ಷ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.