ETV Bharat / state

ಶನಿ ಮಹಾರಾಜ ತುಳಿದರೆ ಪಾತಾಳಕ್ಕೆ ಹೋಗ್ತೇವೆ, ಶನಿ ಎತ್ತಿದರೆ ಮೇಲೆ ಹೋಗ್ತೇವೆ: ಡಿಕೆಶಿ - Mathikere news

ಬೆಂಗಳೂರಿನ ಮತ್ತೀಕೆರೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಚಾರ ಸಭೆ ನಡೆಸಿದರು.

D.K Shivakumar
ಡಿ.ಕೆ ಶಿವಕುಮಾರ್
author img

By

Published : Oct 8, 2020, 12:04 AM IST

ಬೆಂಗಳೂರು: ಶನಿ ಮಹರಾಜ ತುಳಿದರೆ ಪಾತಾಳಕ್ಕೆ ಹೋಗ್ತೇವೆ, ಶನಿ ಎತ್ತಿದರೆ ಮೇಲೆ ಹೋಗ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದಿದ್ದಾರೆ.

ಬೆಂಗಳೂರಿನ ಮತ್ತೀಕೆರೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಆರ್​ಆರ್​ ನಗರದ ನೊಂದು ಬೆಂದ ಜನ ಸೇರಿದ್ದೀರಿ. ನನ್ನದು, ನನ್ನ ಸೋದರಿ ಕುಸುಮಾ ಇಬ್ಬರದ್ದೂ ಮೊದಲನೆ ಸಭೆ. ವಿಘ್ನ ವಿನಾಯಕ ನಮಗಿಬ್ಬರಿಗೂ ವಿಜಯ ಕೊಡಲಿ ಅಂತ ನಂಬ್ತೇನೆ. ಕಾರ್ಯಕರ್ತರಿಗೆ ಆರ್​ಆರ್ ನಗರದಲ್ಲಿ ಸಾಕಷ್ಟು ತೊಂದರೆ ಆಗ್ತಿದೆ. ಇಲ್ಲಿಗೆ ಅದೆಲ್ಲವೂ ಮುಕ್ತಾಯವಾಗಲಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಇಷ್ಟು ದಿನ ಕಣ್ಣಿಗೆ ಬಟ್ಟೆ ಕಟ್ಕೊಂಡು ಗಾಂಧಾರಿ ತರ ಇದ್ದೆ. ಆದ್ರೆ ಇನ್ಮುಂದೆ ಹಾಗೆ ಸುಮ್ನಿದ್ರೆ ಸಾಧ್ಯವಿಲ್ಲ ಎಂದರು.

ಮತ್ತೀಕೆರೆಯಲ್ಲಿ ನಡೆದ ಪ್ರಚಾರ ಸಭೆ

ನಮ್ಮ ಕಾರ್ಯಕರ್ತರ ಮೇಲೆ ಎಫ್​ಐಆರ್ ಆಗಿರುವ ಮಾಹಿತಿ ಕೊಡಿ. ನಾಳೆ ಸಂಜೆಯೊಳಗೆ ಎಫ್​ಐಆರ್ ಮಾಡಿರುವ ಆಫಿಸರ್​ನ ಸಸ್ಪೆಂಡ್ ಮಾಡಿಸ್ತೇನೆ. ಅಧಿಕಾರಿಗಳಿಗೆ ಎಚ್ಚರಿಕೆ ಕೊಡ್ತಿದ್ದೇನೆ. ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ ಆರ್​ಆರ್​ ನಗರವೂ ಅಷ್ಟೇ ಮುಖ್ಯ. ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ. ಇಲ್ಲದೆ ಹೋದರೆ ಮುಂದೆ ನಿಮ್ಮ ಭವಿಷ್ಯಕ್ಕೆ ಮುಳುವಾಗತ್ತೆ. ನಿಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಿಸ್ತೇನೆ ಎಂದು ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಡಿಕೆಶಿ ವಾರ್ನಿಂಗ್ ಕೊಟ್ಟರು.

ಇದು ರೆಕಾರ್ಡ್ ಆಗಲಿ ಅಂತ ಹೇಳ್ತಿದ್ದೇನೆ. ಕಾರ್ಯಕರ್ತರ ವಿರುದ್ಧ ಹಾಕಿರುವ ಕೇಸ್​ಗಳಿಗಾಗಿ ಲಾಯರ್ ನೇಮಿಸುತ್ತೇನೆ. ಇನ್ನು ಹತ್ತು ದಿನ ಇಲ್ಲೇ ಕೂತಿರ್ತೇನೆ. ನಂಗೆ ಬೇರೆ ಏನೂ ಕೆಲಸ ಇಲ್ಲ. ಕುಸುಮಾ ಸಮಾಜ ಸೇವೆಗೆ ಅಂತ ನಿಂತಿದ್ದಾಳೆ ಅವಳನ್ನು ಗೆಲ್ಲಿಸಿಕೊಡಬೇಕು. ಈ ಇಲೆಕ್ಷನ್ ನಿಂದ ಯಡಿಯೂರಪ್ಪ ಏನೂ ಕೆಳಗೆ ಇಳಿಯೋದಿಲ್ಲ. ಈ ಚುನಾವಣೆಯಿಂದ ಮೋದಿಗೇನೂ ಸಮಸ್ಯೆ ಇಲ್ಲ. ಆದರೆ ಇಲ್ಲಿನ ಹಿಂದಿನ ಶಾಸಕರಿಂದ ನಿಮಗೆಲ್ಲ ಕಿರುಕುಳ ಆಗಿದೆ. ಹಿಂದೆ ಇಲ್ಲಿ ಮುನಿರತ್ನ ತಾನು ಗೆದ್ದಿದ್ದೇ ಡಿಕೆಶಿಯಿಂದ ಸುರೇಶಣ್ಣನಿಂದ ಅಂತಿದ್ದ. ರಾಜೀನಾಮೆ ಕೊಟ್ಟ ಮೇಲೆ ಏನಂತಿದ್ದ? ಬಿಜೆಪಿ ಕಾರ್ಯಕರ್ತರ ಮೇಲೆ 1000 ಕೇಸ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ 700 ಕೇಸ್ ಹಾಕ್ಸಿದಾರೆ. ಇದಕ್ಕೊಂದು ಅಂತ್ಯ ಉತ್ತರ ಮುಗಿಸ್ತೇನೆ ಎಂದರು.

ಡಿಕೆ ರವಿ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸದ ಕುಸುಮಾ: ಡಿ.ಕೆ ರವಿ ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸದೆ ತಮ್ಮ ಭಾಷಣ ನಡೆಸಿದ ಕುಸುಮಾ ತಮ್ಮನ್ನು ಕಾರ್ಯಕರ್ತರ ಸಭೆಯಲ್ಲಿ ಕುಸುಮಾ ಹನುಮಂತರಾಯಪ್ಪ ಅಂತಲೇ ಪರಿಚಯಿಸಿಕೊಂಡರು. ತಾನು ಪ್ರೊಫೆಸರ್ ಆಗಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೆ. ಇನ್ಮುಂದೆ ಮಹತ್ತರ ಘಟ್ಟ ಶುರುವಾಗ್ತಿದೆ. ಆರ್ ಆರ್ ನಗರ ಕ್ಷೇತ್ರದ ಜನರ ಸಂಕಷ್ಟ ನನಗೆ ಗೊತ್ತಿದೆ. ಹೀಗಾಗಿ ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು ಎಂದರು.

ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಸಭೆ: ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಅಖಾಡಕ್ಕಿಳಿದ ಡಿಕೆಶಿ ಯಶವಂತಪುರ ಬಿಕೆ ನಗರದಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು. ಅಭ್ಯರ್ಥಿ ಕುಸುಮಾ ರವಿ, ಹನುಮಂತ ರಾಯಪ್ಪ ಜೊತೆಗೆ ಸಭೆಗೆ ಆಗಮಿಸಿದ ಡಿಕೆಶಿ ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಮಾಲೋಚನೆ ನಡೆಸಿದರು. ಈ ಮೂಲಕ ಆರ್ ಆರ್ ನಗರದಲ್ಲಿ ಬಿಜೆಪಿಗೆ ಸಡ್ಡು ಹೊಡೆಯಲು ತೀವ್ರ ಪೈಪೋಟಿಗೆ ನಾಂದಿ ಹಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.