ಬೆಂಗಳೂರು: ಫ್ಲಿಪ್‌ಕಾರ್ಟ್ ಇಂದು ಶಾಪ್ಸಿ ಎಂಬ ಯೋಜನೆಯನ್ನು ಪ್ರಕಟಿಸಿದೆ. ಈ ಆ್ಯಪ್ ಮೂಲಕ ಭಾರತೀಯರು ಯಾವುದೇ ಪೂರ್ವ ಬಂಡವಾಳವನ್ನು ತೊಡಗಿಸದೇ ತಮ್ಮ ಆನ್ಲೈನ್ ವ್ಯವಹಾರಗಳನ್ನು ಆರಂಭಿಸಬಹುದಾಗಿದೆ.
ತಮ್ಮ ಸ್ಥಳೀಯ ಜಾಲದ ಮೇಲೆ ಪ್ರಭಾವ ಬೀರುವ ಹಾಗೂ ಅವರ ಆಕಾಂಕ್ಷೆಗಳನ್ನು ಈಡೇರಿಸುವ ಸಾಮರ್ಥ್ಯದೊಂದಿಗೆ, ಶಾಪ್ಸಿಯ ಬಳಕೆದಾರರು ಫ್ಲಿಪ್ ಕಾರ್ಟ್ ಮಾರಾಟಗಾರರು ನೀಡುವ 15 ಕೋಟಿಗೂ ಅಧಿಕ ಉತ್ಪನ್ನಗಳ ವ್ಯಾಪಕ ಆಯ್ಕೆಯ ಕ್ಯಾಟಲಾಗ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಇದರಲ್ಲಿ ಫ್ಯಾಶನ್, ಸೌಂದರ್ಯ, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳನ್ನು ಜನಪ್ರಿಯ ಸಾಮಾಜಿಕ ಮಾಧ್ಯಮ ಮತ್ತು ಸಂದೇಶವಾಹಕ ಆ್ಯಪ್‌ಗಳಿಂದ ವ್ಯವಹಾರ ನಡೆಸಬಹುದಾಗಿದೆ.
ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗಳ ಮೂಲಕ ಸರಳವಾಗಿ ಶಾಪ್ಸಿ ಆ್ಯಪ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ತಮ್ಮ ಆನ್ಲೈನ್ ಉದ್ಯಮಶೀಲತ್ವದ ಪ್ರಯಾಣವನ್ನು ಆರಂಭಿಸಬಹುದು. ಹೂಡಿಕೆ, ದಾಸ್ತಾನು ಅಥವಾ ಲಾಜಿಸ್ಟಿಕ್ ನಿರ್ವಹಣೆಯ ತೊಂದರೆಯಿಲ್ಲದೇ ತಮ್ಮ ನಂಬಿಕಾರ್ಹ ಜನರ ನೆಟ್ವರ್ಕ್ಗೆ ಪ್ರವೇಶವನ್ನು ಹೊಂದಿರುವವರೆಗೆ ಉದ್ಯಮಿಗಳು ತಮ್ಮ ವ್ಯವಹಾರವನ್ನು ಸ್ಥಾಪಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Amul milk price hike: ದೇಶದೆಲ್ಲೆಡೆ ನಾಳೆಯಿಂದ ಹೊಸ ಬೆಲೆ ಜಾರಿ