ETV Bharat / state

ಪಾಕಿಸ್ತಾನಕ್ಕೆ ಬೆಂಬಲ ನೀಡಲು ಹೋಗಿದ್ದರಾ ಎಂದ ಹೆಚ್​ಡಿಕೆ: ತಿರುಗೇಟು ನೀಡಿದ ಡಿಸಿಎಂ ಶಿವಕುಮಾರ್​

author img

By ETV Bharat Karnataka Team

Published : Oct 21, 2023, 5:20 PM IST

ಪಾಕಿಸ್ತಾನ ಬೆಂಬಲಿಸಲು ನಿನ್ನೆ ಕ್ರಿಕೆಟ್​ ಪಂದ್ಯ ನೋಡಲು ಹೋಗಿದ್ದರಾ ಎಂದು ಪ್ರಶ್ನಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿ ಕೆ ಶಿವಕುಮಾರ್​ ತಿರುಗೇಟು ನೀಡಿದ್ದಾರೆ.

did-cm-and-dcm-went-to-cheer-for-pakistan-team-asks-hd-kumaraswamy
ಪಾಕಿಸ್ತಾನಕ್ಕೆ ಬೆಂಬಲ ನೀಡಲು ಹೋಗಿದ್ದರಾ ಎಂದ ಹೆಚ್​ಡಿಕೆ: ಡಿಸಿಎಂ ಶಿವಕುಮಾರ್​ ತಿರುಗೇಟು

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ‌ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರ ವಿರುದ್ಧ ಮಾಜಿ ಸಿಎಂ ಹೆಚ್​​ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ''ಬರಗಾಲದ ನಡುವೆಯೂ ಐದಾರು ತಾಸು ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಪೈಕಿ ಯಾರಿಗೆ ಬೆಂಬಲ ನೀಡಲು ಹೋಗಿದ್ದೀರಾ? ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಪಾಕಿಸ್ತಾನಕ್ಕೆ ಬೆಂಬಲ ನೀಡಲು ಹೋಗಿದ್ದರೋ ಅಥವಾ ಆಸ್ಟ್ರೇಲಿಯಾಕ್ಕೋ?'' ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ''ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ಮ್ಯಾಚ್ ನೋಡಲು ಪಟಾಲಂ ಜೊತೆಗೆ ಹೋಗಿದ್ದಾರೆ. ಇಂಡಿಯಾ ಹಾಗೂ ಪಾಕಿಸ್ತಾನದ ನಡುವೆ ಮ್ಯಾಚ್ ಇದ್ದರೆ ಭಾರತಕ್ಕೆ ಸಪೋರ್ಟ್ ಕೊಡಲು ಹೋಗಿದ್ದಾರೆಂದು ಹೇಳಬಹುದು. ಆದರೆ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾದ ನಡುವಿನ ಪಂದ್ಯಕ್ಕೆ ಹೋಗುವ ಅಗತ್ಯ ಏನಿತ್ತು?'' ಎಂದು ಅವರು ಪ್ರಶ್ನಿಸಿದರು.

ಹಾಗಾದರೆ ಬೆಂಗಳೂರಿನಲ್ಲಿ‌ ನಡೆದ ಪಂದ್ಯಕ್ಕೆ ಹೋಗುವುದು ತಪ್ಪೇ? ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ''ಕ್ರಿಕೆಟ್ ನೋಡುವುದು ತಪ್ಪಲ್ಲ. ಆದರೆ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಮತ್ತೊಂದು ಕಡೆಯಲ್ಲಿ ವಿದ್ಯುತ್ ಸಮಸ್ಯೆ ಇದೆ. ಹೀಗಿರುವಾಗ ಏಳೆಂಟು ಗಂಟೆಗಳ ಕಾಲ ಹೋಗಿ ಮ್ಯಾಚ್ ನೋಡುವುದು ಸರಿಯಾ?'' ಎಂದು ಹೆಚ್​ಡಿಕೆ ಮರುಪ್ರಶ್ನೆ ಮಾಡಿದರು.

''ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ಈವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿರುವ ಕುರಿತು ಮಾಹಿತಿ ಇಲ್ಲ. ರೈತರ ಸಮಸ್ಯೆಗಳನ್ನು ಕೇವಲವಾಗಿ ನೋಡಬೇಡಿ'' ಎಂದು ಎಚ್ಚರಿಕೆ ನೀಡಿದ ಕುಮಾರಸ್ವಾಮಿ, ಬರ ಪರಿಹಾರದ ಹಣ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಆದರೆ ಖಾತೆಯಲ್ಲಿದ್ದರೆ ಏನು ಪ್ರಯೋಜನ, ತಕ್ಷಣ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಡಿಸಿಎಂ ಡಿ ಕೆ ಶಿವಕುಮಾರ್​ ತಿರುಗೇಟು: ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ನೋಡಲು ಸಿಎಂ, ಡಿಸಿಎಂ ಹೋಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರಿಗೆ ಡಿಸಿಎಂ ಶಿವಕುಮಾರ್​ ತಿರುಗೇಟು ನೀಡಿದ್ದಾರೆ. ''ಕುಮಾರಸ್ವಾಮಿಗೆ ಈ ದೇಶದ ಆಸ್ತಿ ಏನೆಂಬುದರ ಬಗ್ಗೆ ಅರಿವಿಲ್ಲ. ಜನರ ಬದುಕು ನಮ್ಮ ಸಂಸ್ಕೃತಿಯಲ್ಲಿ ಏನೆಲ್ಲ ಇದೆ. ದೇಶದಲ್ಲಿ ದೇವಾಲಯ, ಚರ್ಚ್​, ಚಿತ್ರಕಲೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳು ಇವೆ.‌ ಕುಮಾರಸ್ವಾಮಿ ತಯಾರು ಮಾಡುವ ಸಿನಿಮಾ,‌ ಅವರ ಮಗ ಆ್ಯಕ್ಟ್ ಮಾಡುವ ಸಿನಿಮಾಗಳೂ ಇವೆ. ಹೀಗೆ ಎಲ್ಲದಕ್ಕೂ ಪ್ರೋತ್ಸಾಹ ನೀಡಬೇಕಲ್ಲ'' ಎಂದು ಹೇಳಿದರು.

''ಇಡೀ ಪ್ರಪಂಚವೇ ಕ್ರೀಡೆಗಾಗಿ ಎಷ್ಟೊಂದು ಹೋರಾಟ ಮಾಡುತ್ತಿದೆ. ನಮಗೆ ಅದರ ರುಚಿ ಗೊತ್ತಿದೆ. ಕುಮಾರಸ್ವಾಮಿಗೆ ಆ ರುಚಿ ಗೊತ್ತಿಲ್ಲದೇ ಇರಬಹುದು. ಎಷ್ಟು ರಾಜಕಾರಣಿಗಳು, ಸಿಎಂಗಳು ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರಾಗಿಲ್ಲಾ?'' ಎಂದು ಹೆಚ್​ಡಿಕೆಗೆ ಡಿ ಕೆ ಶಿವಕುಮಾರ್​ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಕಮಿಷನ್​ಗಾಗಿ ವಿದ್ಯುತ್ ಕೊರತೆ ಸೃಷ್ಟಿಸಿರುವ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಲಿ: ಡಿಕೆಶಿ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.