ETV Bharat / state

ನಾಲ್ಕು ಕಂದಾಯ ವಿಭಾಗಗಳಲ್ಲಿ ಇದೇ ತಿಂಗಳಿಂದ ಡಯಾಲಿಸಿಸ್ ಕೇಂದ್ರ ಕಾರ್ಯಾರಂಭ: ಸಚಿವ ಸುಧಾಕರ್ - 263 ಆಂಬ್ಯುಲೆನ್ಸ್ ಗಳು ಕಾರ್ಯ

ರಾಜ್ಯದ ಎಲ್ಲ ಕಂದಾಯ ವಿಭಾಗಗಳಲ್ಲಿಯೂ ಇದೇ ತಿಂಗಳಿನಿಂದ ಡಯಾಲಿಸಿಸ್ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ ಎಂದು ಸರ್ಕಾರ ತಿಳಿಸಿದೆ.

Medical Education Minister Dr K Sudhakar informed
ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಮಾಹಿತಿ
author img

By

Published : Feb 16, 2023, 7:47 PM IST

Updated : Feb 16, 2023, 9:12 PM IST

ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ಮಾತನಾಡಿದರು.

ಬೆಂಗಳೂರು: ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಇದೇ ತಿಂಗಳಿಂದ ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಡಿ.ಎಸ್.ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ತಿಂಗಳ 23 ರಂದು ಟೆಂಡರ್‌ಗೆ ಕಡೇ ದಿನ. ತಿಂಗಳಾಂತ್ಯಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ನಾಲ್ಕು ವಿಭಾಗಗಳಲ್ಲಿ ಡಯಾಲಿಸಿಸ್ ಯಂತ್ರಗಳು ಕಾರ್ಯಾರಂಭಿಸಲಿವೆ ಎಂದರು.

ಯಾವುದೇ ಸಮಸ್ಯೆ ಉಂಟಾದಾಗ ಡಯಾಲಿಸಿಸ್ ಯಂತ್ರಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸಲು ಇಲ್ಲವೇ, ತಾಂತ್ರಿಕ ಸಮಸ್ಯೆಗಳಿದ್ದರೆ ಬದಲಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಸ್ಕಾನ್ ಇ ಸಂಜೀವಿನಿ ಸಂಸ್ಥೆಯವರು ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ. ರೋಗಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ತರೀಕೆರೆಯೂ ಸೇರಿದಂತೆ ಹಲವೆಡೆ ಉಂಟಾದ ಸಮಸ್ಯೆಗಳನ್ನು ಸರಿಪಡಿಸಲು ಕ್ರಮವಾಗಿದೆ. ತರೀಕೆರೆಯಲ್ಲಿ ನಾಲ್ಕು ಡಯಾಲಿಸಿಸ್ ಯಂತ್ರಗಳ ಪೈಕಿ ಒಂದು ಯಂತ್ರ ಮಾತ್ರ ಸ್ಥಗಿತಗೊಂಡಿದ್ದು, ಉಳಿದ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಕೆಟ್ಟಿರುವ ಯಂತ್ರವನ್ನು ಸರಿಪಡಿಸಲು ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗೆ ಸೂಚಿಸಲಾಗಿದೆ. ಈ ಖಾಸಗಿ ಗುತ್ತಿಗೆ ಸಂಸ್ಥೆಯು ನಿಯಮಿತವಾಗಿ ರೋಗಿಗಳ ಡಯಾಲಿಸಿಸ್ ಮಾಡಲೇಬೇಕು ಎಂದು ನಿರ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಿಯಾದರೂ ಡಯಾಲಿಸಿಸ್ ಯಂತ್ರದ ಸಮಸ್ಯೆ ಎದುರಾದರೆ ಸರಿಪಡಿಸಲು ಕೂಡಲೇ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಶಾಸಕ ಸೋಮನಗೌಡ ಬಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು 263 ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಸಂಘ-ಸಂಸ್ಥೆಗಳು, ದಾನಿಗಳು ಉಚಿತವಾಗಿ ಆಂಬ್ಯುಲೆನ್ಸ್ ನೀಡುತ್ತಾರೆ. ಆದರೆ, ಅವುಗಳ ನಿರ್ವಹಣೆ ತುಸು ಕಷ್ಟಕರವಾಗಿದೆ ಎಂದರು.

ವಿದ್ಯುತ್ ಬೇಡಿಕೆ: ರಾಜ್ಯದಲ್ಲಿ ಪ್ರತಿದಿನ 204.86 ದಶಲಕ್ಷ ಯುನಿಟ್ ವಿದ್ಯುತ್ ಬೇಡಿಕೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರು ಜೆಡಿಎಸ್ ಸದಸ್ಯ ರಾಜಾವೆಂಕಟಪ್ಪ ನಾಯಕ್ ಅವರ ಪ್ರಶ್ನೆಗೆ ಇಂಧನ ಸಚಿವ ಸುನೀಲ್ ಕುಮಾರ್ ಪರವಾಗಿ ಉತ್ತರಿಸಿದರು. ಏಪ್ರಿಲ್ 2022ರಿಂದ 2023ರ ಜನವರಿ ಅಂತ್ಯವರೆಗೆ 204.86 ದಶಲಕ್ಷ ಯುನಿಟ್ ಉತ್ಪಾದನೆಯಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ವಿವಿಧ ಮೂಲಗಳಿಂದ ರೈತರಿಗೆ ವಿತರಣೆ ಮಾಡುವುದಾಗಿ ತಿಳಿಸಿದರು. ವಿವಿಧ ಮೂಲಗಳಾದ ಜಲವಿದ್ಯುತ್ನಿಂದ 11247.27 ದಶಲಕ್ಷ ಯುನಿಟ್ ವಿದ್ಯುತ್ ಪಡೆದುಕೊಳ್ಳಲಾಗುತ್ತಿದೆ. ಶಾಖೋತ್ಪನ್ನ ಮೂಲದಿಂದ 13129.51 ದಶಲಕ್ಷ ಯೂನಿಟ್ಅನ್ನು ಪಡೆದುಕೊಳ್ಳಲಾಗುತ್ತಿದೆ.

ವಿದ್ಯುತ್ ಕೊರತೆ ಇಲ್ಲ: ಕೇಂದ್ರ ಸರ್ಕಾರಿ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಘಟಕಗಳಿಂದ 13153.79 ದಶಲಕ್ಷ ಯುನಿಟ್ ತೆಗೆದುಕೊಳ್ಳಲಾಗುತ್ತಿದೆ. ಅಸಾಂಪ್ರದಾಯಿಕ ಮೂಲಗಳಿಂದ 23727.34 ದಶಲಕ್ಷ ಯುನಿಟ್, ಜಿಂದಾಲ್ನಿಂದ 798.83 ದಶಲಕ್ಷ ಯುನಿಟ್​ ವಿದ್ಯುತ್ ಖರೀದಿಸಲಾಗುತ್ತಿದೆ. ಒಟ್ಟು 62687.54 ದಶಲಕ್ಷ ಯುನಿಟ್ಗಳನ್ನು ರಾಜ್ಯ ಸರ್ಕಾರ ಸದ್ಯ ತೆಗೆದುಕೊಳ್ಳುತ್ತಿದೆ. ಹೀಗಾಗಿ, ರಾಜ್ಯದಲ್ಲಿ ವಿದ್ಯುತ್ ಕೊರತೆ ಎಳ್ಳಷ್ಟೂ ಇಲ್ಲ ಎಂದು ಕಲಾಪಕ್ಕೆ ಉತ್ತರ ನೀಡಿದರು.

ಇದನ್ನೂಓದಿ: ಸದನ-ಕದನ: ಹೊರ ಹಾಕುವ ಎಚ್ಚರಿಕೆ ನೀಡಿದ ಸ್ಪೀಕರ್‌; ಬಾವಿಗಿಳಿದು ಕಾಂಗ್ರೆಸ್ ಸದಸ್ಯರ ಧರಣಿ

Last Updated : Feb 16, 2023, 9:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.