ETV Bharat / state

ಮಧುಮೇಹಿಗಳಿಗೆ ಉಚಿತ ಇನ್ಸುಲಿನ್ ನೀಡುವ ಯೋಜನೆ ಜಾರಿಗೆ ತರಬೇಕು: ಅಶ್ವತ್ಥ್ ನಾರಾಯಣ್ - ಡಿಸಿಎಂ ಅಶ್ವತ್ ನಾರಾಯಣ್

ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆ. ಇದು ಜೀವ ಹಾಗೂ ಜೀವನ ಎರಡನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್​ ಕಳವಳ ವ್ಯಕ್ತಪಡಿಸಿದ್ದಾರೆ.

diabetes-is-a-disease-that-kills-quietly-said-by-ashwath-narayan
ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾದ ಅರಿವು ಕಾರ್ಯಕ್ರಮ
author img

By

Published : Mar 1, 2020, 8:00 PM IST

ಬೆಂಗಳೂರು: ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆ. ಇದು ಜೀವ ಹಾಗೂ ಜೀವನ ಎರಡನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್​ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾದ ಅರಿವು ಕಾರ್ಯಕ್ರಮವನ್ನ ಡಿಸಿಎಂ ಅಶ್ವತ್ಥ್ ನಾರಾಯಣ್ ಉದ್ಘಾಟನೆ ಮಾಡಿದರು. ಇವರಿಗೆ ಸಂಸದ ತೇಜಸ್ವಿ ಸೂರ್ಯ ಸಾಥ್ ಕೊಟ್ಟರು.

ಉದ್ಘಾಟನೆ ಬಳಿಕ ಮಾತಾನಾಡಿದ ಅವರು, ಇಂದು ಪಟ್ಟಣ ಮಾತ್ರವಲ್ಲ ಗ್ರಾಮೀಣ ಪ್ರದೇಶವನ್ನು ಈ ಕಾಯಿಲೆ ಆವರಿಸಿದೆ. ಮಕ್ಕಳಲ್ಲೂ ಕಂಡುಬರುತ್ತಿರುವುದು ಆತಂಕದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾದ ಅರಿವು ಕಾರ್ಯಕ್ರಮ

ನಂತರ ಮಾತನಾಡಿ, ಸರ್ಕಾರ ಟೈಪ್ 1 ಮತ್ತು 2 ಡಯಾಬಿಟಿಸ್ ಹೊಂದಿರುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದೆ. ಜನೌಷದ್, ಅಮೃತ್ ಯೋಜನೆಯಡಿ ಹಲವು ಔಷಧಗಳನ್ನು‌ ವಿತರಿಸಲಾಗುತ್ತಿದೆ. ಇನ್ನು ಸರ್ಕಾರ ಮೆಡಿಕಲ್ ಇನ್ಸುರೆನ್ಸ್ ಕೊಡಲು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಗೋವಾದಲ್ಲಿ ಟೈಪ್ 1 ಡಯಾಬಿಟಿಸ್ ಹೊಂದಿರುವವರಿಗೆ ಉಚಿತವಾಗಿ ಇನ್ಸುಲಿನ್ ಕೊಡಲಾಗುತ್ತಿದೆ. ಗೋವಾ ಕರ್ನಾಟಕದ ಆರ್ಥಿಕ ಸ್ಥಿತಿ ಚೆನ್ನಾಗಿದೆ. ರಾಜ್ಯದಲ್ಲೂ ಈ ಸೌಲಭ್ಯ ನೀಡಲು‌ ಸರ್ಕಾರಕ್ಕೆ ಕಷ್ಟವಾಗೊದಿಲ್ಲ. ಹೀಗಾಗಿ ಇಲ್ಲಿಯೂ‌ ಇದನ್ನು ಜಾರಿಗೆ ತಂದರೆ ಚೆನ್ನಾಗಿರುತ್ತೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.