ETV Bharat / state

ಸೋಷಿಯಲ್​ ಪ್ಲಾಟ್​ಫಾರ್ಮ್​​ನಲ್ಲಿ ಆ್ಯಕ್ಟಿವ್ ಆಗಲಿದ್ದಾರೆ ಡಿಜಿ ಪ್ರವೀಣ್ ಸೂದ್!

author img

By

Published : Feb 7, 2020, 2:32 PM IST

Updated : Feb 7, 2020, 2:43 PM IST

ಕಳೆದ ವಾರ ಅಧಿಕಾರ ವಹಿಸಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಮತ್ತು ನಿರೀಕ್ಷಕರಾದ ಪ್ರವೀಣ್ ಸೂದ್ ಅವರು ಸಮಾಜದ ಒಂದು ಭಾಗವೇ ಆಗಿ ಆವರಿಸಿರುವ ಸಾಮಾಜಿಕ ಜಾಲತಾಣದಲ್ಲಿ ಸ್ಟ್ರಾಂಗ್ ಆಗಲು ಸಿದ್ಧತೆ ನಡೆಸಿದ್ದಾರೆ.

dg-and-igp-praveen-sood
dg-and-igp-praveen-sood

ಬೆಂಗಳೂರು: ನಗರ ಪೊಲೀಸರು ಪ್ರಮುಖ ಸೋಷಿಯಲ್​ ಮೀಡಿಯಾಗಳಾದ ಟ್ವಿಟರ್, ಫೇಸ್ಬುಕ್ ಹೀಗೆ ನಾನಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು, ಸಾರ್ವಜನಿಕರ ದೂರು-ತೊಂದರೆಗಳಿಗೆ ಸೋಷಿಯಲ್​ ಪ್ಲಾಟ್​ಫಾರ್ಮ್​​ನಲ್ಲೇ ಉತ್ತರ ನೀಡುವ ಮತ್ತು ಸಲಹೆ-ಸೂಚನೆಗಳನ್ನು ನೀಡುವ ಕಾರ್ಯ ಮಾಡುತ್ತಿದ್ದಾರೆ. ಸದ್ಯ ಅದೇ ವಿಚಾರಕ್ಕೆ ಸುದ್ದಿಯಲ್ಲಿರೋದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಮತ್ತು ನಿರೀಕ್ಷಕರಾದ ಪ್ರವೀಣ್ ಸೂದ್.

ಹೌದು, ಕಳೆದ ವಾರ ಅಧಿಕಾರ ವಹಿಸಿರುವ ಡಿಜಿ ಮತ್ತು ಐಜಿಪಿಯಾದ ಪ್ರವೀಣ್ ಸೂದ್ ಅವರು ಸಮಾಜದ ಒಂದು ಭಾಗವೇ ಆಗಿ ಆವರಿಸಿರುವ ಸಾಮಾಜಿಕ ಜಾಲತಾಣದಲ್ಲಿ ಸ್ಟ್ರಾಂಗ್ ಆಗಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ 'ಡಿಜಿ ಕರ್ನಾಟಕ' ಅನ್ನೋ ಹೆಸರಿನಲ್ಲಿ ಫೇಸ್ಬುಕ್ ಪೇಜ್ ಹಾಗೂ ಟ್ವಿಟರ್ ಅಕೌಂಟ್​​ನನ್ನು ತೆರೆಯಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಈ ಮೊದಲು ರಾಜ್ಯದಲ್ಲಿ ಪೊಲೀಸ್ ಇಲಾಖೆಯನ್ನು ಪ್ರತಿನಿಧಿಸುವ ಯಾವುದೇ ಅಧಿಕೃತ ಖಾತೆ ಸಾಮಾಜಿಕ ಜಾಲತಾಣದಲ್ಲಿ ಇರಲಿಲ್ಲ. ಹೀಗಾಗಿ ರಾಜ್ಯದಲ್ಲಿ ಯಾವುದೇ ವೈಯುಕ್ತಿಕ ಅಥವಾ ಸಾರ್ವಜನಿಕ ಸಮಸ್ಯೆಗಳನ್ನ ಸಾರ್ವಜನಿಕರು ಬೆಂಗಳೂರು ಸಿಟಿ ಪೊಲೀಸ್​ ಫೇಸ್ಬುಕ್ ಪೇಜ್​ಗೆ ಹಾಕುತ್ತಿದ್ದರು. ಅದಕ್ಕಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಪ್ರವೀಣ್ ಸೂದ್ ಅವರು ರಾಜ್ಯ ಪೊಲೀಸ್ ನಿರ್ದೇಶಕರಾಗಿ, ರಾಜ್ಯದ ಸಂಪೂರ್ಣ ವಿದ್ಯಾಮಾನಗಳನ್ನು ಗಮನಿಸಬೇಕಿರುತ್ತದೆ. ಹಾಗೂ ಹಲವು ಬಾರಿ ಪೊಲೀಸ್​ ಇಲಾಖೆಯಿಂದ ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸುವ ಅಗತ್ಯವಿರುತ್ತದೆ. ಇದೇ ಕಾರಣಕ್ಕೆ ಸೋಷಿಯಲ್​ ಮೀಡಿಯಾದಲ್ಲಿ 'ಡಿಜಿ ಕರ್ನಾಟಕ' ಕಾರ್ಯ ಪ್ರವೃತ್ತವಾಗಲಿದ್ದು ಈ ಅಕೌಂಟ್​ಗಳನ್ನು ಹ್ಯಾಂಡಲ್ ಮಾಡಲು ಪೊಲೀಸರಲ್ಲೇ ಕೆಲ ಎಕ್ಸ್​ಪರ್ಟ್​ಗಳನ್ನು ಡಿಜಿ ಮತ್ತು ಐಜಿಪಿ, ಪ್ರವೀಣ್ ಸೂದ್ ನಿಯೋಜನೆ ಮಾಡಲಿದ್ದಾರೆ.

Last Updated : Feb 7, 2020, 2:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.