ETV Bharat / state

ಪೊಲೀಸ್​​ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಲು ಡಿಜಿ&ಐಜಿಪಿ ಪ್ರವೀಣ್ ಸೂದ್ ಸಭೆ - 48 ಜನ ಪೊಲೀಸರಿಗೆ ಕೊರೊನಾ

ಕೊರೊನಾ ಧೃಡಪಟ್ಟಿರುವ 48 ಮಂದಿ ಪೊಲೀಸರ ಜೊತೆ ಸಂಪರ್ಕ ಹೊಂದಿದ ಸಾಕಷ್ಟು ಸಿಬ್ಬಂದಿ ಹಾಗೂ ಕುಟುಂಬಸ್ಥರನ್ನು ಪ್ರೈಮರಿ ಕಾಂಟ್ಯಾಕ್ಟ್ ಮೇರೆಗೆ ಕ್ವಾರಂಟೈನ್ ಮಾಡಲಾಗಿದೆ. ಪೊಲೀಸ್​​ ಇಲಾಖೆಗೂ ವ್ಯಾಪಿಸಿರುವ ಈ ಕೊರೊನಾವನ್ನು ದೂರ ಮಾಡಿ, ಸಿಬ್ಬಂದಿಗೆ ಆತ್ಮ ಸ್ಥೈರ್ಯ ತುಂಬಲು ಡಿಜಿ&ಐಜಿಪಿ ಪ್ರವೀಣ್ ಸೂದ್ ಅವರು ಈ ಸಭೆ ನಡೆಸಿದ್ದಾರೆ.

instill confidence in police
ಪ್ರವೀಣ್ ಸೂದ್ ಸಭೆ
author img

By

Published : Jun 3, 2020, 7:26 PM IST

ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು 48 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಡಿಜಿ&ಐಜಿಪಿ ಪ್ರವೀಣ್ ಸೂದ್ ಅವರು ಸಿಬ್ಬಂದಿಯ ಆರೋಗ್ಯದ ಕುರಿತಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಕೊರೊನಾ ದೃಢಪಟ್ಟಿರುವ 48 ಮಂದಿ ಪೊಲೀಸರ ಜೊತೆ ಸಂಪರ್ಕ ಹೊಂದಿದ ಸಾಕಷ್ಟು ಸಿಬ್ಬಂದಿ ಹಾಗೂ ಕುಟುಂಬಸ್ಥರನ್ನು ಪ್ರೈಮರಿ ಕಾಂಟ್ಯಾಕ್ಟ್ ಮೇರೆಗೆ ಕ್ವಾರಂಟೈನ್ ಮಾಡಲಾಗಿದೆ. ಪೊಲೀಸ್​​ ಇಲಾಖೆಗೂ ವ್ಯಾಪಿಸಿರುವ ಈ ಕೊರೊನಾವನ್ನು ದೂರ ಮಾಡಿ, ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಲು ಡಿಜಿ&ಐಜಿಪಿ ಪ್ರವೀಣ್ ಸೂದ್ ಅವರು ಈ ಸಭೆ ನಡೆಸಿದ್ದಾರೆ.

instill confidence in police
ಎಡಿಜಿಪಿ ಅಲೋಕ್ ಕುಮಾರ್ ಅವರಿಂದ ಟ್ರೈನಿಂಗ್

ಜಿಲ್ಲೆ ರೌಂಡ್ಸ್ ಮಾಡುತ್ತಿರುವ ಡಿಜಿ&ಐಜಿಪಿ ಪ್ರವೀಣ್ ಸೂದ್:

ಇಲಾಖೆಯಲ್ಲಿ ಕೊರೊನಾ ಇರುವುದರಿಂದ ಈಗಾಗಲೇ ಕೆಎಸ್ಆರ್​ಪಿ, ಎಡಿಜಿಪಿ ಅಲೋಕ್ ಕುಮಾರ್ ಜೊತೆ ಪ್ರವೀಣ್ ಸೂದ್ ಜಿಲ್ಲೆಗಳ ರೌಂಡ್ಸ್ ಹಾಕುತ್ತಿದ್ದಾರೆ. ಶಿವಮೊಗ್ಗ, ಹಾಸನ, ತುಮಕೂರಿಗೆ ಭೇಟಿ ನೀಡಿರುವ ಅವರು ಅಲ್ಲಿರುವ ಸಿಬ್ಬಂದಿಗೆ ಹಾಗೂ ಅವರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಕಂಟೈನ್​ಮೆಂಟ್ ಝೋನ್​ನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಬಗ್ಗೆ ಕಾಳಜಿ ವಹಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನಿಡಿದ್ದಾರೆ.

ಕೊರೊನಾ ಸೋಂಕಿಗೆ ತುತ್ತಾಗಿರುವ ಸಿಬ್ಬಂದಿಯನ್ನು ಪ್ರೀತಿಯಿಂದ ನೋಡಿ ಅವರು ಕರ್ತವ್ಯಕ್ಕೆ ಹಾಜರಾಗುವಾಗ ತಾರತಮ್ಯ ತೋರಿಸಬೇಡಿ. ಹಾಗೆ ಆರೋಗ್ಯದ ದೃಷ್ಟಿಯಿಂದ ಸೂಕ್ತ ಆಹಾರಗಳನ್ನು ತೆಗೆದುಕೊಳ್ಳುವಂತೆ ಡಿಜಿ&ಐಜಿಪಿ ಪ್ರವೀಣ್ ಸೂದ್ ಸಭೆಯಲ್ಲಿ ಹೇಳಿದರು.

ಹಿರಿಯ ಅಧಿಕಾರಿಗಳು ಸ್ಪಾಟ್​ನಲ್ಲಿ ಕೆಲಸ ಮಾಡುವುದಿಲ್ಲ. ಆದರೆ ಕಿರಿಯ ಸಿಬ್ಬಂದಿ ಸ್ಪಾಟ್​ನಲ್ಲಿದ್ದು ಪ್ರತಿಯೊಂದನ್ನು ನಿಭಾಯಿಸುತ್ತಾರೆ. ಆದ್ದರಿಂದ ರಾಜ್ಯದ ಜಿಲ್ಲಾವಾರು ಎಸ್​ಪಿಗಳು ಹಾಗೂ ನಗರದ ಅಧಿಕಾರಿಗಳು ಸಿಬ್ಬಂದಿಯ ಸಮಸ್ಯೆಗಳನ್ನು ಖುದ್ದಾಗಿ ಆಲಿಸಬೇಕೆಂದು ಪ್ರವೀಣ್ ಸೂದ್ ಆದೇಶ ನೀಡಿದ್ದಾರೆ.

ಎಡಿಜಿಪಿ ಅಲೋಕ್ ಕುಮಾರ್ ಅವರಿಂದ ಟ್ರೈನಿಂಗ್

ಎಡಿಜಿಪಿ ಅಲೋಕ್ ಕುಮಾರ್ ಅವರಿಂದ ಟ್ರೈನಿಂಗ್​​:

ಸಿಬ್ಬಂದಿಯಲ್ಲಿ ಆತಂಕ ನೀಗಿಸುವ ಸಲುವಾಗಿ, ಸಾಮಾಜಿಕ ಅಂತರದ ಜೊತೆಗೆ ಕೊರೊನಾದಿಂದ ಯಾವ ರೀತಿ ತಪ್ಪಿಸಿಕೊಳ್ಳಬೇಕು ಎಂಬುದರ ಕುರಿತು ಎಡಿಜಿಪಿ ಅಲೋಕ್ ಕುಮಾರ್ ತರಬೇತಿ ನೀಡುತ್ತಿದ್ದಾರೆ. ಶ್ವಾಸಕೋಶಕ್ಕೆ ಬೇಕಾದ ಯೋಗಾ ತರಬೇತಿಯನ್ನು ಸಿಬ್ಬಂದಿಗೆ ಕಲಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.