ಬೆಂಗಳೂರು: ಸಂಸತ್ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಿಸುವಂತೆ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಬಗ್ಗೆ ಕೆಂಪೇಗೌಡ ಕೇಂದ್ರ ಸಮಿತಿ ನಿಮಗೆ ಸಲ್ಲಿಸಿದ ಮನವಿಪತ್ರವನ್ನು ಪರಿಗಣಿಸುವಂತೆ ಕೋರಿದ್ದಾರೆ. 16ನೇ ಶತಮಾನದಲ್ಲಿ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿರುವುದು ನಿಮಗೆ ತಿಳಿದಿರುವ ವಿಚಾರವಾಗಿದೆ. ಕೆಂಪೇಗೌಡರು ಆವತ್ತು ಬಿತ್ತಿದ ಬೀಜ ಇಂದು ಬೆಂಗಳೂರು ಜಾಗತಿಕವಾಗಿ ಬೆಳೆಯಲು ಕಾರಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನ ನಿರ್ಮಾತೃರಾದ ಕೆಂಪೇಗೌಡರನ್ನು ಭಾರತದ ತಂತ್ರಜ್ಞಾನ ಬೆಳವಣಿಗೆಯ ಗುರುತಾಗಿ ನೋಡಬಹುದಾಗಿದೆ. ಭಾರತದಲ್ಲಿ ಬೆಂಗಳೂರು ಹೊಂದಿದಷ್ಟು ವಿಜ್ಞಾನ ಸಂಸ್ಥೆಗಳು, ತಾಂತ್ರಿಕ ಹಿರಿಮೆ ಬೇರೆ ಯಾವುದೇ ನಗರದಲ್ಲಿ ಇಲ್ಲ ಎಂದು ವಿವರಿಸಿದ್ದಾರೆ.
ಓದಿ: ಕೆಂಪೇಗೌಡ ಪ್ರತಿಮೆ, ಏರ್‌ಪೋರ್ಟ್ ಟರ್ಮಿನಲ್ ಉದ್ಘಾಟನೆಗೆ ಮೋದಿ ಆಗಮನ: ಸಿದ್ದತೆಗೆ ಸಿಎಂ ಸೂಚನೆ