ಬೆಂಗಳೂರು: ದೇವೇಗೌಡರು ವಂಶ ಉದ್ಧಾರ ಮಾಡ್ತಿದ್ದಾರೆ. ಅವರು ಸ್ಪರ್ಧೆ ಮಾಡೋದನ್ನು ಬಿಟ್ಟು ಮೊಮ್ಮಕ್ಕಳಿಗೆ ಆಶೀರ್ವಾದ ಮಾಡಿ ಸುಮ್ಮನಿರಲಿ ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಟಾಂಗ್ ನೀಡಿದರು.
ಡಾಲರ್ಸ್ ಕಾಲೋನಿ ಬಿಎಸ್ ವೈ ನಿವಾಸಕ್ಕೆ ಆಗಮಿಸಿದ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಬಳಿಕ ಮಾತನಾಡುತ್ತಾ, ಸಚಿವ ರೇವಣ್ಣ, ಅನಿತಾ ಕುಮಾರಸ್ವಾಮಿಯಿಂದ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಚಾಮುಂಡೇಶ್ವರಿ ಸೋಲಿನ ಗಾಯ ಇನ್ನೂ ಮಾಸಿಲ್ಲ. ಮೇಲ್ನೋಟಕ್ಕೆ ಎಲ್ಲರೂ ಒಂದಾಗಿರಬಹುದು. ಆದ್ರೆ ಕಾರ್ಯಕರ್ತರು ಮಾತ್ರ ಒಂದಾಗಿಲ್ಲ. ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿಕೊಂಡಿರುವ ಕೇಸ್ಗಳು ಇನ್ನೂ ಇವೆ. ಇವರುಗಳು ಮೇಲೆ ಒಂದಾದ್ರೆ ಆಗಲ್ಲ, ನೋಡ್ತಾ ಇರಿ ಎಂದು ತಿಳಿಸಿದರು.
ಮೋದಿ ವಿರುದ್ಧ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವನಿಗೆ ಮಾತಾಡೋದನ್ನೇ ಕಲಿಸಿಲ್ಲ. ಮೂರು ಸಾರಿ ಗೆದ್ದಿದ್ದಾರೆ. ರೇವಣ್ಣನ್ನೂ ಹಂಗೆ ಮಾತಾಡ್ತಾನೆ, ಈ ಪಾರ್ಟಿಯೂ ಹಂಗೆ ಮಾತಾಡ್ತಾರೆ ಎಂದು ಕಿಡಿ ಕಾರಿದರು.