ETV Bharat / state

ಕೆಲಸ‌ ಕೊಡಿಸುವುದಾಗಿ ನೂರಾರು ಜನರಿಗೆ ಲಕ್ಷಾಂತರ ವಂಚನೆ; ಆರೋಪಿಗಳ ಬಂಧನ - banglore crime news

ಉದ್ಯೋಗಾಕಾಂಕ್ಷಿಗಳಿಗೆ ಕೆಲಸ‌ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚಿಸುತ್ತಿದ್ದ ಐವರು ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

banglore
ಆರೋಪಿಗಳ ಬಂಧನ
author img

By

Published : Nov 16, 2020, 8:13 PM IST

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಉದ್ಯೋಗಾಂಕ್ಷಿಗಳಿಗೆ ಕೆಲಸ‌ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚಿಸುತ್ತಿದ್ದ ಐವರು ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಸಾಯಿ ಕಲ್ಯಾಣ್ ರಾಮ್, ಘಾತಲಾ ದಿಲೀಪ್ ಕುಮಾರ್, ವಿಶ್ವನಾಥ್, ಶ್ರೀಧರ್, ಪತ್ತಿ ಶಿವಾ ಬಂಧಿತ ಆರೋಪಿಗಳಾಗಿದ್ದಾರೆ. ಕೊರೊನಾವನ್ನೇ ಬಂಡವಾಳ ಮಾಡಿಕೊಂಡ ವಂಚಕರು‌ ಮೋಸ ಮಾಡುವ ಉದ್ದೇಶದಿಂದಲೇ ನಗರ ಪೊಲೀಸ್ ಕಮೀಷನರ್ ಕಚೇರಿ ರಸ್ತೆಯಲ್ಲಿ ಹೆಚ್.ಆರ್.ಇಂಡಿಯಾ ಸರ್ವೀಸ್ ಹೆಸರಿನಲ್ಲಿ ಆಫೀಸ್ ತೆರೆದಿದ್ದರು. ನೌಕರಿ ಡಾಟ್ ಕಾಮ್ ಹಾಗೂ ಕ್ವಿಕರ್ ಡಾಟ್ ಕಾಮ್​ನಲ್ಲಿ‌ ಉದ್ಯೋಗಕ್ಕಾಗಿ ಬಯೋಡೇಟಾ ಸಲ್ಲಿಸಿದ್ದ ನಿರುದ್ಯೋಗಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಕೆಲಸ ಖಾಲಿಯಿದೆ ಎಂದು ಒಬ್ಬೊಬ್ಬರಿಂದ 50 ಸಾವಿರದವರೆಗೆ ಹಣ ಪಡೆಯುತ್ತಿದ್ದರು‌.

ಅಭ್ಯರ್ಥಿಗಳನ್ನು ನಂಬಿಸಲು ಮಾನ್ಯತಾ ಟೆಕ್ ಪಾರ್ಕ್ ಕಚೇರಿಯೊಂದರಲ್ಲಿ ನಕಲಿ ಸಂದರ್ಶನ ನಡೆಸಿ ಆಫರ್ ಲೆಟರ್ ನೀಡುತ್ತಿದ್ದರು. ಇದೇ ರೀತಿ ಸುಮಾರು 500 ಉದ್ಯೋಗಾಕಾಂಕ್ಷಿಗಳಿಗೆ ಆಫರ್ ಲೆಟರ್ ನೀಡಿ ಅಂದಾಜು 45 ಲಕ್ಷ ರೂಪಾಯಿ ವಸೂಲಿ ಮಾಡಿ‌ದ್ದರು. ಹಣ ಪಡೆದುಕೊಂಡು ಕೆಲಸ ಕೊಡದೆ, ಹಣವನ್ನೂ ನೀಡದೆ ಸತಾಯಿಸುತ್ತಿದ್ದರು.

ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ‌ ವಂಚನೆ ಪ್ರಕರಣ ದಾಖಲಿಸಿಕೊಂಡು ವಂಚಕರನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.