ETV Bharat / state

ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ.. ಆಲೆಮನೆಯನ್ನೇ ಸ್ಕ್ಯಾನಿಂಗ್ ಸೆಂಟರ್ ಆಗಿ ಪರಿವರ್ತಿಸಿದ್ದ ನಾಲ್ವರ ಸೆರೆ - ಆಲೆಮನೆಯನ್ನು ಸ್ಕ್ಯಾನಿಂಗ್ ಸೆಂಟರ್

ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಭೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

detection-of-female-fetuses-and-doing-miscarriage-four-arrested-in-bengaluru
ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ : ಅಲೆಮನೆಯನ್ನು ಸ್ಕ್ಯಾನಿಂಗ್ ಸೆಂಟರ್ ಪರಿವರ್ತಿಸಿದ್ದ ನಾಲ್ವರ ಸೆರೆ
author img

By ETV Bharat Karnataka Team

Published : Oct 25, 2023, 12:31 PM IST

Updated : Oct 25, 2023, 4:59 PM IST

ಬೆಂಗಳೂರು : ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡಿಸುತ್ತಿದ್ದ ದಂಧೆಯನ್ನು ಪತ್ತೆ ಹಚ್ಚಿರುವ ಬೈಯಪ್ಪನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಿವಲಿಂಗೇಗೌಡ, ನಯನ್ ಕುಮಾರ್, ನವೀನ್ ಕುಮಾರ್, ವೀರೇಶ್ ಎಂದು ಗುರುತಿಸಲಾಗಿದೆ.

ಕಳೆದ ಅಕ್ಟೋಬರ್​ 15ರಂದು ಪಿಎಸ್ಐ ಮಂಜುನಾಥ್ ನೇತೃತ್ವದ ತಂಡ ರಾತ್ರಿ ಹೊತ್ತು ಗಸ್ತು ತಿರುಗುತ್ತಿತ್ತು. ಈ ವೇಳೆ ಅನುಮಾನಾಸ್ಪದವಾಗಿ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಗೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದರಿಂದ ಅನುಮಾನಗೊಂಡ ಪೊಲೀಸರು ಬೈಕ್‌ನಲ್ಲಿ ಕಾರನ್ನು ಬೆನ್ನಟ್ಟಿ ತಡೆದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಶಿವಲಿಂಗೇಗೌಡ, ನಯನ್ ಕುಮಾರ್ ಹಾಗೂ ಗರ್ಭಿಣಿಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಸಮರ್ಪಕವಾಗಿ ಉತ್ತರಿಸದ ಕಾರಣ ಇವರನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ : ವಿಚಾರಣೆ ವೇಳೆ ಆರೋಪಿಗಳು ಪಾಂಡವಪುರ ಬಳಿಯ ವೀರೇಶ್ ಹಾಗೂ ಇನ್ನಿತರರು ಭ್ರೂಣ ಪತ್ತೆ ಮಾಡಲು ಸ್ಕ್ಯಾನಿಂಗ್ ಮಿಷನ್​ ಇಟ್ಟುಕೊಂಡಿದ್ದಾರೆ. ಸ್ಕ್ಯಾನ್​ ವೇಳೆ ಹೆಣ್ಣು ಮಗು ಎಂದು ತಿಳಿದುಬಂದರೆ ಗರ್ಭಪಾತ ಮಾಡಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ದಂಧೆ ಬಗ್ಗೆ ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆ ಕೈಗೊಂಡ ಇನ್‌ಸ್ಪೆಕ್ಟರ್ ಪ್ರಶಾಂತ್ ನೇತೃತ್ವದ ತಂಡ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ದಾಳಿ ವೇಳೆ ಹಲವರು ಪರಾರಿಯಾಗಿದ್ದು ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಣ್ಣು ಭ್ರೂಣ ಪತ್ತೆ ದಂಧೆ ಬೆಳಕಿಗೆ ಬಂದ ಹಿನ್ನೆಲೆ ಪ್ರಕರಣದ ಉನ್ನತ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಅಲೆಮನೆಯನ್ನು ಸ್ಕ್ಯಾನಿಂಗ್​ ಸೆಂಟರ್​ ಆಗಿ ಪರಿವರ್ತಿಸಿದ್ದ ಆರೋಪಿಗಳು : ಭ್ರೂಣ ಪತ್ತೆ ಹಚ್ಚಲು ಪಾಂಡವಪುರ ಬಳಿಯ ಅಲೆಮನೆಯೇ ಸ್ಕ್ಯಾನಿಂಗ್ ಸೆಂಟರ್ ಆಗಿ ಆರೋಪಿಗಳು ಪರಿವರ್ತಿಸಿಕೊಂಡಿದ್ದರು. ಮಂಡ್ಯ ,ಮೈಸೂರು ಹಾಗೂ ಬೆಂಗಳೂರಿನಲ್ಲಿ ಈ ದಂಧೆ ಸಕ್ರಿಯವಾಗಿದ್ದು ಭ್ರೂಣ ಪತ್ತೆಗೆ 15 ರಿಂದ 20 ಸಾವಿರ ಹಣ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿ ಶಿವಲಿಂಗೇಗೌಡಗೆ ಈ ಹಿಂದೆ ಲ್ಯಾಬ್​ನಲ್ಲಿ ಕೆಲಸ ಮಾಡಿದ ಅನುಭವವಿದೆ.

ಇದನ್ನೂ ಓದಿ : ಮಚ್ಚಿನಿಂದ ಪತ್ನಿಯ ಒಂದು ಕೈ, ಎರಡು ಕಾಲು ಕತ್ತರಿಸಿ ಪತಿಯ ಕ್ರೌರ್ಯ

Last Updated : Oct 25, 2023, 4:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.