ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅನಂತರಾಜು ಸಾವಿಗೂ ಮುನ್ನ ಬರೆದಿದ್ದರೆನ್ನಲಾದ ಡೆತ್ನೋಟ್ ಸದ್ಯ ರಿವಿಲ್ ಆಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪತ್ನಿ ಸುಮಾಗೆ ಎರಡು ಪುಟದ ಪತ್ರ ಬರೆದು ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
'ಕೆ.ಆರ್. ಪುರಂ ನ ಹೆಣ್ಣಿನ ಜಾಲಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಅವಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದು, ಅವಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ' ಎಂದು ಇನ್ಸ್ಪೆಕ್ಟರ್ ಹೆಸರಿಗೆ ಅನಂತರಾಜು ಬರೆದಿದ್ದರು ಎನ್ನಲಾದ ಪತ್ರ ಬಹಿರಂಗವಾಗಿದೆ.
'ಪತ್ನಿ ಸುಮಾ ನನ್ನ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ, ಕ್ಷಮೆ ಕೇಳಲು ಅರ್ಹನಲ್ಲ. ಆಕೆಯ ಸಹವಾಸ ಮಾಡಿ ಅವಳಿಂದ ಫೋಟೋ, ವಿಡಿಯೋ ಟ್ರ್ಯಾಪ್ಗೆ ಸಿಲುಕಿ ಬ್ಲಾಕ್ ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನ ಚೆನ್ನಾಗಿ ನೋಡಿಕೊ' ಎಂದು ಅನಂತರಾಜು ಸಾವಿಗೂ ಮುನ್ನ ತಮ್ಮ ಕೊನೆ ಪತ್ರದಲ್ಲಿ ಪತ್ನಿಗೆ ಡೆತ್ ನೋಟ್ ಬರೆದು ಕ್ಷಮೆ ಕೇಳಿದ್ದಾರೆ ಎನ್ನಲಾಗ್ತಿದೆ. ಈ ಪತ್ರದ ಅಸಲಿಯತ್ತು ತನಿಖೆಯಿಂದ ತಿಳಿದುಬರಬೇಕಿದೆ.
ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಸಾವು ಪ್ರಕರಣ: ವಿಚಾರಣೆಗೆ ಹಾಜರಾದ ಪತ್ನಿ ಸುಮಾ