ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹಬ್ಬುತ್ತಿದೆ. ವೇಗವಾಗಿ ಕೊರೊನಾ ನಿಯಂತ್ರಿಸುವ ಸಲುವಾಗಿ ಱಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗುತ್ತಿದೆ.
ಜಿಲ್ಲೆಗಳಲ್ಲಿ ಱಪಿಡ್ ಆ್ಯಂಟಿಜನ್ ಪರೀಕ್ಷೆಗಳನ್ನ ಮಾಡಲು ಆರೋಗ್ಯ ಇಲಾಖೆ ನಿಗದಿಪಡಿಸಿದೆ. ಕೆಲ ಜಿಲ್ಲೆಗಳಲ್ಲಿ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಱಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗ್ತಿದೆ.

ಱಪಿಡ್ ಟೆಸ್ಟ್ಗಿಂತ ಆರ್ಟಿಪಿಸಿಆರ್ ಅತ್ಯಂತ ವಿಶ್ವಾಸಾರ್ಹ ಪರೀಕ್ಷಾ ಪದ್ಧತಿ ಆಗಿದೆ. ಶೀಘ್ರವಾಗಿ ಮತ್ತು ಹೆಚ್ಚಿನ ಜನರಿಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಆದರೆ ಅದನ್ನೇ ಕೆಲ ಜಿಲ್ಲೆಗಳು ಹೆಚ್ಚು ಮಾಡಿವೆ. ಹಾಗಾಗಿ ದಿನಕ್ಕೆ ಇಂತಿಷ್ಟೇ ಱಪಿಡ್ ಟೆಸ್ಟ್ ಮಾಡುವಂತೆ ಜಿಲ್ಲೆಗಳಿಗೆ ನಿಗದಿತ ಗುರಿ ನೀಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.