ಆನೇಕಲ್ (ಬೆಂ.ನ): ಬೆಂಗಳೂರು - ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ನಾರಾಯಣ ಹೆಲ್ತ್ ಸಿಟಿ ಕ್ಯಾಂಪಸ್ನಲ್ಲಿರುವ ಕಿರಣ್ ಮಜುಮ್ದಾರ್-ಷಾ ಶಾ ಮೆಡಿಕಲ್ ಸೆಂಟರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಹೊಗೆ ಕಾಣಿಸಿಕೊಂಡಿದೆ.
8ನೇ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ತುಂಬಿಕೊಂಡಿತ್ತು. ಗಾಬರಿಗೊಂಡ ಸಿಬ್ಬಂದಿ ಕೂಡಲೇ ಕೋವಿಡ್ ಸೋಂಕಿತರನ್ನು ಕೆಳಗಿನ ಮಹಡಿಗೆ ಸ್ಥಳಾಂತರಿಸಿದ್ದಾರೆ . ಕಟ್ಟಡದಲ್ಲಿ ಸ್ವಯಂಚಾಲಿತ ಅಗ್ನಿ ನಂದಿಸುವ ಸಾಧನ ಇದ್ದ ಕಾರಣ ಹೆಚ್ಚಿನ ಅವಘಡ ಸಂಭವಿಸಲಿಲ್ಲ ಎಂದು ತಿಳಿದುಬಂದಿದೆ.