ETV Bharat / state

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತನ್ನಿ: ಎನ್​​ಪಿಎಸ್​ಗೆ ಪರಿಷತ್​ನಲ್ಲಿ ಪಕ್ಷಾತೀತ ವಿರೋಧ!

author img

By

Published : Mar 5, 2021, 6:41 PM IST

ನನಗೆ ಎನ್​ಪಿಎಸ್ ಮತ್ತು ಒಪಿಎಸ್ ಎರಡೂ ಪೆನ್ಷನ್ ಬರುತ್ತಿದೆ. ಈಗ ನನ್ನನ್ನ ಯಾವ ಸ್ಕೀಂಗೆ ಸೇರಿಸುತ್ತೀರಿ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ.

demand-for-nps-pension-scheme-in-council
ಪರಿಷತ್​

ಬೆಂಗಳೂರು: 2006 ರ ನಂತರ ನೇಮಕಗೊಂಡಿರುವ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಬದಲು ಹಳೆಯ ಪಿಂಚಣಿ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ವಿಧಾನ ಪರಿಷತ್​ನಲ್ಲಿ ಪಕ್ಷಾತೀತವಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.

ಕಲಾಪದಲ್ಲಿ ಜೆಡಿಎಸ್ ಸದಸ್ಯ ಕೆ‌.ಟಿ ಶ್ರೀಕಂಠೇಗೌಡ ಮಾತನಾಡಿ, 2006 ರ ನಂತರ ನೇಮಕಗೊಂಡಿರುವ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಬಗ್ಗೆ ಸರ್ಕಾರದ ಗಮನ ಸೆಳೆದರು.

ಎನ್​ಪಿಎಸ್ ಜಾರಿಗೆ ಸಮಿತಿ‌ ರಚಿಸಿದ್ದೀರಿ, ವರದಿ ತರಿಸಿಕೊಳ್ಳಿ. ಆದರೆ, ಈಗ ಅನುದಾನಿತ ಶಿಕ್ಷಕರಿಗೆ ಎನ್​ಪಿಎಸ್​ ಇಲ್ಲ, ಓಪಿಎಸ್ ಕೂಡ ಇಲ್ಲ. ನಿಮ್ಮ ಷೇರು ಕೊಡದಿದ್ದಲ್ಲಿ ಹೇಗೆ? ಉದ್ಯೋಗಿಗಳು ಅವರ ಷೇರು ಕೊಡಲು ಸಿದ್ದರಿದ್ದಾರೆ. ಸರ್ಕಾರ ತನ್ನ ಷೇರು ಕೊಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿ ಅವರ ಷೇರು ಕೊಡುತ್ತಾರೆ, ಇನ್ನರ್ಧ ಸಂಸ್ಥೆ ಕೊಡಲು ಸಾಧ್ಯವೇ ಇಲ್ಲ, ಸರ್ಕಾರವೇ ಕೊಡಬೇಕು ಎಂದರು.

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವಂತೆ ಪಕ್ಷಾತೀತವಾಗಿ ಒತ್ತಾಯ ಮಾಡಲಾಯಿತು

ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ನನಗೆ ಎನ್​ಪಿಎಸ್ ಮತ್ತು ಒಪಿಎಸ್ ಎರಡೂ ಪೆನ್ಷನ್ ಬರುತ್ತಿದೆ. ಈಗ ನನ್ನನ್ನ ಯಾವ ಸ್ಕೀಂಗೆ ಸೇರಿಸುತ್ತೀರಿ, ನಾನು 2006 ಕ್ಕೆ ಮೊದಲು ಸಂಸದನಾಗಿದ್ದೆ, ಈಗ ಶಾಸಕನಾಗಿದ್ದೇನೆ. ಸಂಸದರ ಪಿಂಚಣಿ ಇನ್ನೂ ಬರುತ್ತಿದೆ. ಈಗ ಶಾಸಕರ ಪಿಂಚಣಿಯೂ ಬರುತ್ತಿದೆ. ನಮಗೆ ಎರಡೆರಡು ಪೆನ್ಷನ್ ಬರುತ್ತಿದೆ ಎಂದರು.

ಆಗ ಕೆಲ ಸದಸ್ಯರು ಅದು ಹೇಗೆ? ಎಂದು ಹೇಳಿ, ನಾವೂ ತೆಗೆದುಕೊಳ್ಳುತ್ತೇವೆ ಎಂದಾಗ, ಅದೆಲ್ಲಾ ಕಾನೂನು ತಿಳಿದುಕೊಂಡಿದ್ದವರಿಗೆ ಗೊತ್ತಾಗುತ್ತೆ ಬಿಡಿ ಎಂದ ಆಯನೂರು, ತೇಜಸ್ವಿನಿ, ಹರಿಪ್ರಸಾದ್ ಅವರಿಗೆಲ್ಲಾ ಎರಡು ಪಿಂಚಣಿ ಬರುತ್ತಿದೆ. ಸಂಸದರಾಗಿದ್ದಕ್ಕೆ ಪ್ರತ್ಯೇಕ, ಶಾಸಕರಾಗಿದ್ದಕ್ಕೆ ಪ್ರತ್ಯೇಕ ಪಿಂಚಣಿ ಬರುತ್ತಿದೆ ಎಂದು ತಿಳಿಸಿದರು.

ನಂತರ ಸಮಸ್ಯೆಯ ಗಂಭೀರತೆಯನ್ನು ಸದನದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟ ಅವರು, ಶಾಸಕಾಂಗ ವ್ಯವಸ್ಥೆಯಲ್ಲಿ ನಮಗೆ ಹಳೆ ಪಿಂಚಣಿ ವ್ಯವಸ್ಥೆ ಇದೆ. ಅದೇ ಕಾರ್ಯಾಂಗದ ಸಿಬ್ಬಂದಿಗೆ ಹೊಸ ಪಿಂಚಣಿ ವ್ಯವಸ್ಥೆ ಅನ್ವಯವಾಗಲಿದೆ ಅಂದರೆ ಹೇಗೆ? ನಮ್ಮಂತೆಯೇ ಅವರೂ ಅಲ್ಲವಾ? ಈ ರೀತಿಯ ತಾರತಮ್ಯ ನೀತಿ ಸರಿಯಾಗಲ್ಲ. ಅಲ್ಲದೆ, ಹೊಸ ಪಿಂಚಣಿ ನೀತಿ ಸರ್ಕಾರಿ ನೌಕರರಿಗೆ ಮಾರಕವಾಗಲಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಗಂಭೀರವಾಗಿ ಆಲೋಚಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಎನ್.ಪಿ.ಎಸ್ ಅಂದರೆ ನೋ ಪೆಕ್ಷನ್ ಸ್ಕೀಂ ಆಗಿ ಪರಿವರ್ತನೆ ಆಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವಾಗಲೂ ಸರ್ಕಾರಿ ನೌಕರರ, ಶಿಕ್ಷಕರ ಪರ ಇರುವವರು. ಅವರ ಕಷ್ಟಗಳಿಗೆ ಸ್ಪಂದಿಸುವವರು. ಹಾಗಾಗಿ, ಈ ಕೂಡಲೇ ಎನ್​ಪಿಎಸ್​ ತೆಗೆದುಹಾಕಿ ಒಪಿಎಸ್ ಜಾರಿಗೆ ತರಬೇಕು ಎಂದರು.

ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಕೂಡ ಎನ್‌ಪಿಎಸ್ ಗೆ ವಿರೋಧ ವ್ಯಕ್ತಪಡಿಸಿದರು. ಯಾವತ್ತಿದ್ದರೂ ದೇಶದಲ್ಲಿ ಒಪಿಎಸ್ ಪಿಂಚಣಿ ವ್ಯವಸ್ಥೆ ಮತ್ತೆ ಜಾರಿಗೆ ತರಲೇಬೇಕು. ನಮ್ಮ ರಾಜ್ಯದಲ್ಲೇ ಮೊದಲು ತಂದು ಇಡೀ ದೇಶಕ್ಕೆ ನೀವೇ ಮಾದರಿಯಾಗಿ ಎಂದು ಪಕ್ಷಾತೀತವಾಗಿ ಸದಸ್ಯರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಓದಿ: ಸುಲಲಿತ ಜೀವನ ನಿರ್ವಹಣೆಗೆ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ

ಮುಖ್ಯಮಂತ್ರಿಗಳ ಪರವಾಗಿ ಸದನಕ್ಕೆ ಉತ್ತರ ನೀಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಹೊಸ ಪಿಂಚಣಿ ಬೇಡ, ಹಳೆ ಪಿಂಚಣಿ ವ್ಯವಸ್ಥೆ ಕೊಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಹಳೆ ಪಿಂಚಣಿ ಕೊಡಬೇಕು ಹೊಸ ಪಿಂಚಣಿ ಸ್ಕೀಂ ಬೇಡ ಎಂದು ಎಲ್ಲಾ ಸರ್ಕಾರಿ ನೌಕರರು ಹೋರಾಟ ಮಾಡಿದ್ದಾರೆ. ನಾನು ಕೂಡ ಒಂದು ಕಡೆ ಹೋಗಿದ್ದೆ, ಸಿಬ್ಬಂದಿ ರಕ್ತ ಕೊಡುತ್ತೇವೆ ಪಿಂಚಣಿ ಬಿಡಲ್ಲ ಎಂದಿದ್ದಾರೆ ಎಂದು ತಿಳಿಸಿದರು.

ರಿಸರ್ವ್ ಬ್ಯಾಂಕ್ ಸೂಚನೆ ಮೇರೆಗೆ ಹಳೆ ಪಿಂಚಣಿ ಯೋಜನೆ ಬದಲು 2004 ರಿಂದ ನೂತನ ಪಿಂಚಣಿ ಯೋಜನೆ ಜಾರಿ ಮಾಡಲಾಯಿತು. 2006 ರಲ್ಲಿ ಕರ್ನಾಟಕ ಸರ್ಕಾರ ಹೊಸ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ತಂದು ಆದೇಶ ಹೊರಡಿಸಿದೆ. ಆದರೆ, ಅದರಲ್ಲಿ ಸಮಸ್ಯೆಗಳಿಂದ ಬದಲಾವಣೆ ತರಬೇಕಿದೆ ಎನ್ನುವ ಕೂಗು ಕೇಳಿಬಂದ ಕಾರಣ 2018 ರಲ್ಲಿ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಏಳು ಜನ ಹಿರಿಯ ಅಧಿಕಾರಿಗಳ ಸಮಿತಿ‌ ರಚಿಸಲಾಗಿದೆ. ಸಮಿತಿಯಿಂದ ಆದಷ್ಟು ಬೇಗ ವರದಿ ತರಿಸಿಕೊಳ್ಳಲಾಗುತ್ತದೆ. ಸಿಎಂ ಜೊತೆಯಲ್ಲಿಯೂ ಚರ್ಚೆ ನಡೆಸಲಾಗುತ್ತದೆ. ಆದಷ್ಟು ಬೇಗ ಈ ಸಂಬಂಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.