ETV Bharat / state

ಸಿಎಂ ಭೇಟಿ ಮಾಡಿದ ರೈತರ ನಿಯೋಗ: ವಿವಿಧ ಬೇಡಿಕೆ ಈಡೇರಿಕೆಗೆ ಮನವಿ - ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜು ಹಾಗೂ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಾಹಂ ನೇತೃತ್ವದ ನಿಯೋಗವು ಮುಖ್ಯಮಂತ್ರಿಯವರನ್ನು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ‌ ಮಾಡಿತು.

ಮುಖ್ಯಮಂತ್ರಿ ಯಡಿಯೂರಪ್ಪ
author img

By

Published : Sep 9, 2019, 5:05 PM IST

ಬೆಂಗಳೂರು: ಪದೇ ಪದೆ ನೆರೆ ಹಾವಳಿಗೆ ಸಿಲುಕುವ ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧಾರ ಕೈಗೊಂಡಿದ್ದು, ನೆರೆಪೀಡಿತ ಪ್ರದೇಶ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಆರಂಭಗೊಂಡಿದೆ ಎಂದು ರೈತರ ನಿಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜು ಹಾಗೂ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಾಹಂ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ‌ ಮಾಡಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಪ್ರವಾಹದಿಂದ ಹಾನಿಗೀಡಾದ ರೈತರಿಗೆ ಹೆಚ್ಚಿನ ಪರಿಹಾರ ನೀಡುವುದರ ಜೊತೆಗೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ನಿಯೋಗದಿಂದ ಸಿಎಂ ಭೇಟಿ

ಮುಖ್ಯಮಂತ್ರಿಗಳಿಗೆ ರೈತ ಮುಖಂಡರ ಬೇಡಿಕೆಗಳು ಇಂತಿವೆ:

  • ರಾಜ್ಯದಲ್ಲಿ 14.81.473 ಎಕರೆ ಪ್ರದೇಶದಲ್ಲಿ ಬೆಳೆಗಳು ನಷ್ಟವಾಗಿದೆ. ಈ ಪ್ರದೇಶದಲ್ಲಿ ಬೆಳೆದಿರುವ ಕಬ್ಬು, ಮೆಕ್ಕೆಜೋಳ ಸೋಯಾ ಬೀನ್, ಹೆಸರು, ಜೋಳ, ರಾಗಿ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದೆ. ಗುಣಮಟ್ಟದ ಜೀವನ ನಡೆಸುವುದಕ್ಕೆ ಅನುಕೂಲವಾಗುವಂತೆ 400 ಹಳ್ಳಿಗಳನ್ನು ಸ್ಥಳಾಂತರ ಮಾಡಿ ಹೊಸದಾಗಿ ಹಳ್ಳಿಗಳನ್ನು‌ ನಿರ್ಮಾಣ ಮಾಡಬೇಕು. ಮನೆ ಕಳೆದುಕೊಂಡ ‌ಕುಟುಂಬಗಳಿಗೆ 1೦ ಲಕ್ಷಕ್ಕೂ ಕಡಿಮೆಯಾಗದಂತೆ ಉತ್ತಮ‌ ಪರಿಹಾರ ಹಾಗೂ ಗುಣಮಟ್ಟದ ಮನೆ ನಿರ್ಮಾಣ ಮಾಡಿ‌ ಕೊಡಬೇಕು.
  • ಕೃಷಿ ಭೂಮಿಯಲ್ಲಿ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿದ್ದು, ಇವುಗಳನ್ನು ಸರಿಪಡಿಸಲು ಲಕ್ಷಾಂತರ ರೂಪಾಯಿಗಳು ಖರ್ಚಾಗಲಿದೆ. ಇದನ್ನು ಸರ್ಕಾರದ ವತಿಯಿಂದಲೇ ಸರಿಪಡಿಸುವ ಕೆಲಸ ಆಗಬೇಕು.
  • ನೆರೆಪೀಡಿತ ಕುಟುಂಬಕ್ಕೆ ಅವರ ಜೀವನ ನಿರ್ವಹಣೆಗಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತೆ ಸಾಮಗ್ರಿ ಹಾಗೂ ಬಟ್ಟೆಗಳನ್ನು ಕೊಳ್ಳಲು ಕನಿಷ್ಠ 25 ಸಾವಿರ ರೂಪಾಯಿಗಳನ್ನು ತಕ್ಷಣಕ್ಕೆ ನೀಡಬೇಕು.
  • ಪ್ರವಾಹದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ.ಗಳನ್ನು ನೀಡಬೇಕು.
  • ನದಿ‌ ಪ್ರದೇಶ ಬಿಟ್ಟು ಪಕ್ಕದಲ್ಲೇ ಬರಗಾಲ ಮುಂದುವರೆದಿದ್ದು, ಬರ ಪರಿಹಾರ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು.
  • ಮಹಿಳಾ ಸ್ವಸಹಾಯ ಸಂಘದ ಸಾಲ‌ಮನ್ನಾ ಮಾಡಬೇಕು.
  • ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇರುವ ಮೈಕ್ರೋ ಫೈನಾನ್ಸ್ ಕಂಪನಿಗಳು ಗಂಜಿ ಕೇಂದ್ರಗಳಿಗೆ ಹೋಗಿ ಹಣ ವಸೂಲಿಗೆ ಮುಂದಾಗಿದ್ದು, ಅವುಗಳ ವಿರುದ್ಧ ಕ್ರಮ‌ ಕೈಗೊಳ್ಳಬೇಕು.
  • ಕಾವೇರಿ ನದಿ‌ ನಿರ್ವಹಣಾ ಮಂಡಳಿ ರೀತಿ‌ ಕೃಷ್ಣಾ ನದಿ ನಿರ್ವಹಣ ಪ್ರಾಧಿಕಾರ ರಚನೆ ಮಾಡಿದರೆ ನೀರನ್ನು ಯಾವಾಗ‌ ಬಿಡಬೇಕು, ಯಾವಾಗ ಬಿಡಬಾರದು ಎಂಬ ತೀರ್ಮಾನ ಮಾಡಿದರೆ ಪ್ರವಾಹ ಸ್ಥಿತಿ ತಡೆಗಟ್ಟಬಹುದು.
  • ರೈತರ ಸಾಲಮನ್ನಾ ಕಾರ್ಯಕ್ರಮ ಘೋಷಣೆ ಮಾಡಬೇಕು.
  • ನೀರು ಮಂಡಳಿ ಸ್ಥಾಪನೆ‌ ಮಾಡಬೇಕು.
  • ನೈಸ್ ಕಂಪನಿಯಲ್ಲಿ ರೈತರಿಗೆ ಆದ ಅನ್ಯಾಯ ಸರಿ ಮಾಡಬೇಕು.
  • ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು.
  • ರೈತರ ಮೇಲಿನ‌ ಕೇಸ್​​​ಗಳನ್ನು ವಾಪಸ್ ಪಡೆಯಬೇಕು.

ಹೀಗೆ ರೈತ ಮುಖಂಡರ ಬೇಡಿಕೆ ಆಲಿಸಿದ ಸಿಎಂ, ಈಗಾಗಲೇ ರಾಜ್ಯ ಸರ್ಕಾರ ಸಾಕಷ್ಟು ಪರಿಹಾರ ಯೋಜನೆಗಳನ್ನು ಘೋಷಣೆ ಮಾಡಿದೆ. ಇನ್ನಷ್ಟು ಯೋಜನೆಗಳನ್ನು ಕೆಲವೇ ದಿನಗಳಲ್ಲಿ ಘೋಷಣೆ ಮಾಡುತ್ತೇನೆ, ಮಹದಾಯಿ ಸಮಸ್ಯೆ ಬಗೆಹರಿಸಲು ಗೋವಾ ಮುಖ್ಯಮಂತ್ರಿ ಜೊತೆ‌ ಮಾತನಾಡುತ್ತೇನೆ. ಹಳ್ಳಿಗಳ ಸ್ಥಳಾಂತರ ಮಾಡಿ ಹೊಸ ಹಳ್ಳಿಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಶತಸಿದ್ಧವಾಗಿದ್ದು ಈಗಾಗಲೇ ಅದರ ಬಗ್ಗೆ ಕಾರ್ಯ ಶುರುವಾಗಿದೆ ಎಂದರು.

ರಾಯಚೂರಿನಲ್ಲಿ ಸಾಲದ‌ ಕಿರುಕುಳ ಇರುವ ಕುರಿತ ರೈತರ ಮನವಿಗೆ ಸ್ಪಂದಿಸಿದ ಸಿಎಂ, ಮೈಕ್ರೋ ಸಾಲ ಕಂಪನಿಗಳ ಹಾವಳಿಗೆ ಕೂಡಲೇ ಕ್ರಮ ಕೈಗೊಳ್ಳುತ್ತೇನೆ ಅಂತ ಹೇಳಿ ಕೂಡಲೇ ರಾಯಚೂರು ಜಿಲ್ಲಾಧಿಕಾರಿಗೆ ಕರೆ ಮಾಡಿ ಸಾಲ‌ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಸೂಚನೆ ನೀಡಿದರು.

ರೈತರ ಮೇಲಿನ ದೂರುಗಳ ಬಗ್ಗೆ ವರದಿ ತರಿಸಲಾಗುತ್ತಿದ್ದು, ವರದಿ ಬಂದ ಕೂಡಲೇ ಕೇಸ್​​ಗಳನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ನೀವು ಯಾವಾಗ ಬೇಕಾದರೂ ರೈತರಿಗೆ ಅನ್ಯಾಯ ಆದರೆ ನನಗೆ ಕರೆ ಮಾಡಿ ಕೂಡಲೇ ಕ್ರಮ‌ಕೈಗೊಳ್ಳುತ್ತೇನೆ. ರೈತರಿಗೆ ಅನ್ಯಾಯ ಆಗುವುದಕ್ಕೆ ನಾನು ಯಾವತ್ತಿಗೂ ಬಿಡುವುದಿಲ್ಲ ಎಂದು ರೈತ ಮುಖಂಡರಿಗೆ ಸಿಎಂ ಭರವಸೆ ನೀಡಿದರು

ಸಭೆ ಬಳಿಕ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಪ್ರಧಾನಿಯವರು ಬೆಂಗಳೂರಿಗೆ ಬಂದರೂ ನೆರೆಪೀಡಿತ ಸಂತ್ರಸ್ತರಿಗೆ ಸಾಂತ್ವನ ಹೇಳದೇ ಹೋಗಿದ್ದರ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಸಂತ್ರಸ್ತರಿಗೆ ನೀಡುವ ಪರಿಹಾರದ ಹಣ ಹೆಚ್ಚು ಮಾಡಬೇಕು. ನಷ್ಟದ ಅಂದಾಜು ಅಂಕಿ, ಅಂಶ ವೈಜ್ಞಾನಿಕವಾಗಿ ಸರಿಯಾಗಿರಬೇಕು. ಹಿಂದೆ ಆದ ತಪ್ಪುಗಳು, ಭೂಸ್ವಾಧೀನ ಕಾಯ್ದೆ ತಿದ್ದುಪಡಿ, ನೈಸ್ ಕಂಪನಿಯಿಂದ ಆದ ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿ ಮಾಡುವ ಕುರಿತು ಅವರ ಗಮನಕ್ಕೆ‌ ತಂದಿದ್ದೇವೆ. ಸಿಎಂ ಸ್ಪಂದಿಸಿದ್ದು ಸರಿಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Intro:

ಬೆಂಗಳೂರು: ಪದೇ ಪದೇ ನೆರೆ ಹಾವಳಿಗೆ ಸಿಲುಕುವ ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧಾರ ಕೈಗೊಂಡಿದ್ದು,ನೆರೆಪೀಡಿತ ಪ್ರದೇಶ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಆರಂಭಗೊಂಡಿದೆ ಎಂದು ರೈತರ ನಿಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಯ ವತಿಯಿಂದ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ . ಬಸವರಾಜು ಹಾಗು ಸಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ನೇತೃತ್ವದ ನಿಯೋಗ ಮುಖ್ಯಮಂತ್ರಿ ಗಳನ್ನು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ‌ ಮಾಡಿದರು

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರವಾಹದಿಂದ ಹಾನಿಗೀಡಿದ ರೈತರಿಗೆ ಹೆಚ್ಚಿನ ಪರಿಹಾರ ನೀಡುವುದರ ಜೊತೆಗೆ ಹಲವು ಬೇಡಿಕಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

• ರಾಜ್ಯದಲ್ಲಿ 14.81.473 ಎಕರೆ ಪ್ರದೇಶದಲ್ಲಿ ಬೆಳೆಗಳು ನಷ್ಟವಾಗಿದೆ. ಈ ಪ್ರದೇಶದಲ್ಲಿ ಬೆಳೆದಿರೋ ಕಬ್ಬು ಮೆಕ್ಕೆಜೋಳ ಸೋಯಾ ಬೀನ್ ಹೆಸರಯ ಜೋಳ ರಾಗಿ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದ್ದು ರೈತರ ಜೀವನ ಹಾಳಾಗಿದೆ ಹಾಗಾಗಿ ಇವರಿಗೆ ಗುಣಮಟ್ಟದ ಜೀವನ ನಡೆಸೋದಕ್ಕೆ ಅನುಕೂಲವಾಗುವಂತೆ 400 ಹಳ್ಳಿಗಳನ್ನು ಸ್ಥಳಾಂತರ ಮಾಡಿ ಹೊಸದಾಗಿ ಹಳ್ಳಿಗಳನ್ನು‌ನಿರ್ಮಾಣ ಮಾಡಿ ಮನೆ ಕಳೆದುಕೊಂಡ ‌ಕುಟುಂಬಗಳಿಗೆ 1೦ ಲಕ್ಷಕ್ಕೂ ಕಡಿಮೆಯಾಗದಂತೆ ಉತ್ತಮ‌ ಪರಿಹಾರ ನೀಡಬೇಕು ಹಾಗು ಗಣಮಟ್ಟದ ಮನೆ ನಿರ್ಮಾಣ ಮಾಡಿ‌ ಕೊಡಬೇಕು

• ಕೃಷಿ ಭೂಮಿಯಲ್ಲಿ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿದ್ದು ಇವುಗಳನ್ನು ಸರಿಪಡಿಸಲು ಲಕ್ಷಾಂತರ ರೂಪಾಯಿಗಳು ಖರ್ಚಾಗಲಿದ್ದು ಇದನ್ನು ಸರ್ಕಾರದ ವತಿಯಿಂದ ಸರಿಪಡಿಸೋ ಕೆಲಸ ಆಗಬೇಕು

• ನೆರೆ ಪೀಡಿತ ಕುಟುಂಬಕ್ಕೆ ಅವರ ಜೀವನ ನಿರ್ವಹಣೆ ಗಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತೆ ಸಾಮಾಗ್ರಿಗಳನ್ನು ಹಾಗು ಬಟ್ಟೆಗಳನ್ನು ಕೊಳ್ಳಲ್ಲು ಕನಿಷ್ಠ 25 ಸಾವಿರ ರೂಪಾಯಿಗಳ ನ್ನು ತಕ್ಷಣಕ್ಕೆ ನೀಡಬೇಕು.

• ಪ್ರವಾಹದಲ್ಲಿ ಮರತಪಟ್ಟ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳನ್ನು ನೀಡಬೇಕು

• ನದಿ‌ ಪ್ರದೇಶ ಬಿಟ್ಟು ಪಕ್ಕದಲ್ಲೇ ಬರಗಾಲ ಮುಂದುವರೆದಿದ್ದು ಬರ ಪರಿಹಾರ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು

• ಮಹಿಳಾ ಸ್ವಸಹಾಯ ಸಂಘದ ಸಾಲ‌ಮನ್ನಾ ಮಾಡಬೇಕು

• ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇರೋ ಮೈಕ್ರೋ ಪೈನಾನ್ಸ್ ಕಂಪನಿಗಳು ಗಂಜಿ ಕೇಂದ್ರಗಳಿಗೆ ಹೋಗಿ ಹಣ ವಸೂಲಿಗೆ ಮುಂದಾಗಿದ್ದು ಅವುಗಳ ವಿರುದ್ದ ಕ್ರಮ‌ಕೈಗೊಳ್ಳಬೇಕು

ಕಾವೇರಿ ನದಿ‌ ನಿರ್ವಹಣಾ ಮಂಡಳಿ ರೀತಿ‌ ಕೃಷ್ಣಾ ನದಿ ನಿರ್ವಹಣ ಪ್ರಾದಿಕಾರ ರಚನೆ ಮಾಡಿದರೆ ನೀರನ್ನು ಯಾವಾಗ‌ ಬಿಡಬೇಕು ಯಾವಾಗ ಬಿಡಬಾರದು ಅನ್ನೋ ತೀರ್ಮಾನ ಮಾಡಿದರೆ ಪ್ರವಾಹ ಸ್ಥಿತಿ ತಡೆಗಟ್ಟಬಹುದು

• ರೈತರ ಸಾಲ ಮನ್ನಾ ಕಾರ್ಯಕ್ರಮ ಘೋಷಣೆ ಮಾಡಬೇಕು

• ನೀರಾ ಮಂಡಳಿ ಸ್ಥಾಪನೆ‌ ಮಾಡಬೇಕು

• ನೈಸ್ ಕಂಪನಿಯಲ್ಲಿ ರೈತರಿಗೆ ಆದ ಅನ್ಯಾಯ ಸರಿ ಮಾಡಬೇಕು

• ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ ತರಬೇಕು
• ರೈತರ ಮೇಲಿನ‌ ಕೇಸ್ ಗಳನ್ನು ವಾಪಸ್ ಪಡೆಯಬೇಕು ಎಂದು ರೈತ ಮುಖಂಡರು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದರು

ರೈತ ಮುಖಂಡರ ಬೇಡಿಕೆ ಆಲಿಸಿದ ಸಿಎಂ, ಈಗಾಗಲೇ ರಾಜ್ಯ ಸರ್ಕಾರ ಸಾಕಷ್ಟು ಪರಿಹಾರ ಯೋಜನೆಗಳನ್ನು ಘೋಷಣೆ ಮಾಡಿದೆ.ಇನ್ನಷ್ಟು ಯೋಜನೆಗಳನ್ನು ಕೆಲವೇ ದಿನಗಳಲ್ಲಿ ಘೋಷಣೆ ಮಾಡುತ್ತೇನೆ, ಮಹದಾಯಿ ಸಮಸ್ಯೆ ಬಗೆಹರಿಸಲು ಗೋವಾ ಮುಖ್ಯಮಂತ್ರಿ ಜೊತೆ‌ ಮಾತನಾಡುತ್ತೇನೆ, ಹಳ್ಳಿಗಳ ಸ್ಥಳಾಂತರ ಮಾಡಿ ಹೊಸ ಹಳ್ಳಿಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಶತಃಸಿದ್ದವಾಗಿದ್ದು ಈಗಾಗಲೇ ಅದರ ಬಗ್ಗೆ ಕಾರ್ಯ ಶುರುವಾಗಿದೆ ಎಂದರು.

ರಾಯಚೂರಿನಲ್ಲಿ ಸಾಲದ‌ ಕಿರುಕುಳ ಇರುವ ಕುರಿತ ರೈತರ ಮನವಿಗೆ ಸ್ಪಂಧಿಸಿದ ಸಿಎಂ ಮೈಕ್ರೋ ಸಾಲ ಕಂಪನಿಗಳ ಹಾವಳಿಗೆ ಕೂಡಲೇ ಕ್ರಮ ಕೈಗೊಳ್ಳುತ್ತೇನೆ ಅಂತ ಹೇಳಿ ಕೂಡಲೇ ರಾಯಚೂರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಸಾಲ‌ ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಸೂಚನೆ ನೀಡಿದರು.

ರೈತರ ಮೇಲಿನ ದೂರುಗಳ ಬಗ್ಗೆ ವರದಿ ತರಿಸಲಾಗುತ್ತಿದ್ದು ವರದಿ ಬಂದ ಕೂಡಲೇ ಕೇಸ್ ಗಳನ್ನು ವಾಪಸ್ ತೆಗೆದುಕೊಳ್ಳುತ್ತೇನೆ, ರೈತರಿಗೆ ಆಗುವ ಅನ್ಯಾಯವನ್ನು ನಾನು ಸಹಿಸುವುದಿಲ್ಲ, ನೀವು ಯಾವಾಗ ಬೇಕಾದರು ರೈತರಿಗೆ ಅನ್ಯಾಯ ಆದರೆ ನನಗೆ ಕರೆ ಮಾಡಿ ಕೂಡಲೇ ಕ್ರಮ‌ಕೈಗೊಳ್ಳುತ್ತೇನೆ ರೈತರಿಗೆ ಅನ್ಯಾಯ ಆಗುವುದಕ್ಕೆ ನಾನು ಯಾವತ್ತಿಗು ಬಿಡುವುದಿಲ್ಲ ಎಂದು ರೈತರ ಮುಖಂಡರಿಗೆ ಸಿಎಂ ಭರವಸೆ ನೀಡಿದರು

ಸಭೆ ಬಳಿಕ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್,ಪ್ರಧಾನಿಗಳು ಬೆಂಗಳೂರಿಗೆ ಬಂದರೂ ನೆರೆಪೀಡಿತ ಸಂತ್ರಸ್ತರಿಗೆ ಸಾಂತ್ವಾನ ಹೇಳದೇ ಹೋಗಿದ್ದರ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಸಂತ್ರಸ್ತರಿಗೆ ನೀಡುವ ಪರಿಹಾರದ ಹಣ ಹೆಚ್ಚು ಮಾಡಬೇಕು, ನಷ್ಟದ ಅಂದಾಜು ಅಂಕಿ ಅಂಶ ವೈಜ್ಞಾನಿಕವಾಗಿ ಸರಿಯಾಗಿರಬೇಕು, ಹಿಂದೆ ಆದ ತಪ್ಪುಗಳು, ಭೂಸ್ವಾಧೀನಕಾಯ್ದೆ ತಿದ್ದುಪಡಿ, ನೈಸ್ ಕಂಪನಿಯಿಂದ ಆದ ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿ ಮಾಡವ ಕುರಿತು ಗಮನಕ್ಕೆ‌ ತಂದಿದ್ದೇವೆ ಸಿಎಂ ಸ್ಪಂಧಿಸಿದ್ದು ಸರಿಮಾಡುವ ಭರವಸೆ ನೀಡಿದ್ದಾರೆ ಎಂದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.