ಬೆಂಗಳೂರು: ಪ್ರಸಕ್ತ ಸಾಲಿನ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆರಂಭಗೊಂಡಿದ್ದು, ದೇಶ ವಿದೇಶದಿಂದ ಆಗಮಿಸಿದ್ದ ಗಣ್ಯರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಔತಣಕೂಟದ ವ್ಯವಸ್ಥೆ ಮಾಡಿದರು.
ನಗರದ ತಾಜ್ ವೆಸ್ಟ್ ಅಂಡ್ ಹೋಟೆಲ್ನಲ್ಲಿ ಆಯೋಜನೆ ಮಾಡಲಾಗಿದ್ದ ಔತಣ ಕೂಟದಲ್ಲಿ ರಕ್ಷಣಾ ಕ್ಷೇತ್ರದ ಉದ್ಯಮ ವಲಯದ ಗಣ್ಯರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಭಾಗವಿಸಿದ್ದರು.
ರಾಜ್ನಾಥ್ ಸಿಂಗ್ ಅವರ ಪಕ್ಕದಲ್ಲೇ ಆಸೀನರಾಗಿ ಆತಿಥ್ಯ ಸ್ವೀಕಾರ ಮಾಡಿದ ಸಿಎಂ ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದರು. ನಿನ್ನೆಯಷ್ಟೇ ಪಕ್ಷದ ಶಾಸಕರಿಗೆ ಔತಣಕೂಟ ಕೊಟ್ಟಿದ್ದ ಸಿಎಂ ಯಡಿಯೂರಪ್ಪ ಇಂದು ರಕ್ಷಣಾ ಸಚಿವರು ಆಯೋಜನೆ ಮಾಡಿದ್ದ ಔತಣ ಕೂಟದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಇದನ್ನು ಓದಿ:83 ತೇಜಸ್ ವಿಮಾನಗಳ ಖರೀದಿಗೆ ಹೆಚ್ಎಲ್ ಜೊತೆ ಕೇಂದ್ರ ಸರ್ಕಾರ ₹48 ಸಾವಿರ ಕೋಟಿ ಒಪ್ಪಂದ