ETV Bharat / state

ರಕ್ಷಣಾ ಸಚಿವೆ ಜೊತೆ ಯುವ ಮತದಾರರ ಸಂವಾದ... ಪುಷ್ಪ ನಮನಕ್ಕೆ ಸೀಮಿತವಾದ ಅಂಬೇಡ್ಕರ್​ - ಸುದ್ದಿ

ಚುನಾವಣೆ ಮುಂಚಿನ ದಿನ, ಮರು ದಿನ ಸರ್ಕಾರಿ ರಜೆಗಳಿವೆ. ಆದ್ರೆ ಚುನಾವಣೆ ವೇಳೆ ಮೋಜು ಮಸ್ತಿ ಅನ್ನದೆ ಮತದಾನ ಮಾಡಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ರು. ಈ ವೇಳೆ ಅವರ ಒಂದೊಂದು ಸಂದೇಶಕ್ಕೂ ಯುವ ಸಮುದಾಯ ಮತ್ತೊಮ್ಮೆ ಮೋದಿ ಮೋದಿ ಎಂದು ಜೈಕಾರ ಕೂಗಿದ್ರು.

ನಿರ್ಮಲ ಸೀತಾರಾಮನ್
author img

By

Published : Apr 14, 2019, 7:37 PM IST

ಬೆಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜಕೀಯ ನಾಯಕರು ಭರ್ಜರಿ ಮತಬೇಟೆಗೆ ಮುಂದಾಗಿದ್ದಾರೆ. ಆದ್ರೆ ಈ ಬಾರಿ ಯುವ ಸಮುದಾಯ ಕೂಡಾ ಮತದಾನದ ದಿನ ಟ್ರಿಪ್,​ ಮೋಜು ಮಸ್ತಿ ಅನ್ನದೇ ಕಾತುರರಾಗಿದ್ದಾರೆ. ಮೊದಲ ಬಾರಿ ವೋಟು ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ.

ದೇಶದ 17 ನೇ ಲೋಕಸಭಾ ಚುನಾವಣೆ ಎಲ್ಲೆಡೆ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿಯೂ ರಾಜಕೀಯ ಪಕ್ಷಗಳು ಚುನಾವಣಾ ಸಿದ್ಧತೆ ಶುರು ಮಾಡಿಕೊಂಡಿವೆ. ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ 1.5 ಕೋಟಿಯಷ್ಟು ಯುವ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಈ ಹಿನ್ನಲೆ ಯುವ ಮತದಾರರು ಲೋಕಸಭಾ ಚುನಾವಣೆಯ ಟ್ರಂಪ್ ಕಾರ್ಡ್. ಈ ಕಾರಣಕ್ಕಾಗೇ ಇಂದು ನಗರದ ಆನಂದ್ ರಾವ್ ಸರ್ಕಲ್ ನಲ್ಲಿರುವ ಎಸ್​ಜೆಆರ್​ಸಿ ಕಾಲೇಜ್​ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಮತದಾರರ ಜೊತೆ ಸಂವಾದ ನಡೆಸಿದ್ರು.

ಯುವ ಮತದಾರರೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್​ ಸಂವಾದ

ಥಿಂಕರ್ಸ್ ಪೌರಂ ವತಿಯಿಂದ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ರು. ಸಂವಾದದಲ್ಲಿ ಚುನಾವಣೆಯ ಮಹತ್ವ ದೇಶದ ರಕ್ಷಣಾ ವಿಚಾರ ಹಾಗೆ ಯುವ ಸಮುದಾಯದ ಪ್ರಶ್ನೆಗೆ ಉತ್ತರ ನೀಡಿದ್ರು. ಹಾಗೆ ಚುನಾವಣೆ ಮುಂಚಿನ ದಿನ, ಮರು ದಿವಸ ಸರ್ಕಾರಿ ರಜೆ ಇದೆ. ಆದರೆ ಚುನಾವಣೆ ವೇಳೆ ಮೋಜು ಮಸ್ತಿ ಅನ್ನದೆ ಮತದಾನ ಮಾಡಿ ಎಂದು ಕಿವಿ‌ಮಾತು ಹೇಳಿದ್ರು. ಇನ್ನು ನಿರ್ಮಲಾ ಸೀತಾರಾಮನ್​ರ ಒಂದೊಂದು ಸಂದೇಶಕ್ಕೂ ಯುವ ಸಮುದಾಯ ಮತ್ತೊಮ್ಮೆ ಮೋದಿ ಮೋದಿ ಎಂದು ಜೈಕಾರ ಕೂಗಿದ್ರು.

ಅಂಬೇಡ್ಕರ್​ ನೆನೆಯದ ಸೀತಾರಾಮನ್​:
ನಿರ್ಮಲಾ ಸೀತಾರಾಮನ್​ ಕಾರ್ಯಕ್ರಮದಲ್ಲಿ ಸುದೀರ್ಘ 25 ನಿಮಿಷಗಳವರೆಗೆ ಭಾಷಣ ಮಾಡಿದ್ರು, ಆದರೆ ಇಂದು ಸಂವಿಧಾನ ಶಿಲ್ಫಿ ಅಂಬೇಡ್ಕರ್​ ಜಯಂತ್ಯುತ್ಸವ ಇದ್ದರೂ ಕೂಡ ಅವರ ಬಗ್ಗೆ ಒಂದೂ ಮಾತನಾಡಲಿಲ್ಲ. ಕೇವಲ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ತಮ್ಮ ರಾಜಕೀಯ ಭಾಷಣ ಮುಂದುವರೆಸಿದರು ಎಂದು ತಿಳಿದುಬಂದಿದೆ.

Intro:ಅಂಬೇಡ್ಕರ್ ಜಯಂತಿ ದಿನದಂದು ತಮ್ಮ 25 ನಿಮಿಷಗಳ ಭಾಷಣದಲ್ಲಿ ಅಂಬೇಡ್ಕರ್ ನೆನೆಯಾದ ರಕ್ಷಣಾ ಸಚಿವೆ ನಿರ್ಮಲಸೀತಾರಾಮನ್.

ನೆಲಮಂಗಲದಲ್ಲಿ ಥಿಂಕ್ ಪೋರಮ್ ಅಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿರ್ಮಲಸೀತಾರಾಮನ್.

Body:ನೆಲಮಂಗಲ: ಪಟ್ಟಣದ ಬಸವಣ್ಣ ದೇವರ ಮಠದ ಆವರಣ ಥಿಂಕ್ ಫೋರಮ್ ಆಯೋಜಿಸಿದ್ದ ಸಾರ್ವಜನಿಕರೊಂದಿಗೆ ಅಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ರಕ್ಷಣ ಸಚಿವೆ ನಿರ್ಮಲ ಸೀತಾ ರಾಮನ್ ಕಾಲೇಜು ವಿಧ್ಯಾರ್ಥಿನಿಯರು, ವಿಚಾರವಂತರು. ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಇದಕ್ಕೂ ಸಾರ್ವಜನಿಕರನ್ನು ಉದ್ದೇಶಿಸಿ ಸುಮಾರು 25 ನಿಮಿಷಗಳ ಧೀರ್ಘ ಭಾಷಣ ಮಾಡಿದರು. ಇಂದು ಅಂಬೇಡ್ಕರ್ ಜಯಂತಿ ಹಿನ್ನಲೆ ಸಂವಿಧಾನ ಶಿಲ್ಪಿ ಅಂಭೇಡ್ಕರ ಬಗ್ಗೆ ಎರಡು ಮಾತನಾಡುತ್ತಾರೆಂದು ಕೋಡಿದ್ದರು. ಅದರೆ ಭಾಷಣದಲ್ಲಿ ಅಂಬೇಡ್ಕರ್ ಬಗ್ಗೆ ಎರಡು ಪದಗಳನ್ನು ಮಾತನಾಡಲಿಲ್ಲ. ಕೇವಲ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದಾಕಷ್ಟೇ ಸೀಮಿತವಾಗಿತ್ತು.

ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಥಿಂಕರ್ಸ್ ಫೋರಂ ಟೀಂನಿಂದ ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಜೊತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿನ ಬಸವೇಶ್ವರ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಹಾಗೂ ಮಹಾಘಟಬಂಧನ್ ವಿರುದ್ಧ ಕಿಡಿಕಾರಿದರು. ಭಾಷಣದ ಆರಂಭದಲ್ಲಿ ಸಿದ್ದಗಂಗಾ ಶ್ರೀಗಳನ್ನ ನೆನೆದ ನಿರ್ಮಲಾ ಸೀತಾರಾಮನ್,
ಕರ್ನಾಟಕದಲ್ಲಿ ಮಠ, ಮಾನ್ಯಗಳ ಕೊಡುಗೆ ಅತ್ಯಂತ ಮಹತ್ವವಾಗಿದೆ. ಶಿಕ್ಷಣ, ಸಮಾಜ ಸೇವೆ ಸೇರಿ ಸರ್ವತೋಮುಖ ಅಭಿವೃದ್ಧಿಯಲ್ಲಿ ಸೇವೆ ಗಣನೀಯವಾಗಿದ್ದು,ಸ್ವಾಮೀಜಿಗಳಿಂದ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಅತ್ಯುತ್ತಮವಾಗಿದೆ. ಪ್ರಮುಖವಾಗಿ ಜಾತಿ ಲಿಂಗ ಭಾಷೆ ಮರೆತು ಶಿಕ್ಷಣ ದಾಸೋಹವನ್ನು ಮಠ ಮಾನ್ಯಗಳು ನೀಡುತ್ತಿವೆ ಎಂದರು.

ಬಳಿಕ ಕಾಂಗ್ರೆಸ್ ಹಾಗೂ ವಿಪಕ್ಷಗಳ ವಿರುದ್ಧ ಕಿಡಿಕಾರಿದ ನಿರ್ಮಲಾ ಸೀತಾರಾಮನ್ 2014ರಲ್ಲಿ ಭ್ರಷ್ಟಾಚಾರ, ಅಕ್ರಮ, ಅವ್ಯವಹಾರ ಇದೇ ತುಂಬಿತ್ತು.
ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನಾ ಮೋದಿ ಗುಜರಾತ್ ಗೆ ಮಾತ್ರ ಸೀಮಿತವಾಗಿದ್ದಾರೆ. ದೆಹಲಿ ರಾಜಕೀಯಕ್ಕೆ ಮೋದಿ ನಾಲಾಯಕ್, ಕನಿಷ್ಟ ಸಂಸದನಾಗುವುದಕ್ಕೂ ಮೋದಿ ಅರ್ಹನಲ್ಲ ಎಂದು ಲೇವಡಿ ಮಾಡಿದ್ದರು. ಆದರೆ ಇಂದು ಇಡೀ ವಿಶ್ವವೇ ಮೋದಿಯನ್ನ ಮೆಚ್ಚಿಕೊಂಡಿದೆ ಎಂದರು. ಇನ್ನೂ ನರೇಂದ್ರ ಮೋದಿಗೆ ಯಾರೂ ಕೂಡ ಇಡೀ ವಿಪಕ್ಷಗಳಲ್ಲಿ ಯಾರೊಬ್ಬರೂ ಸಮಾನರಿಲ್ಲ,ಮಹಾಘಟಬಂಧನ್ ನ ನಾಯಕ ಯಾರು..? ಎಂದು ಪ್ರಶ್ನಿಸಿದರು.

ಸದ್ಯ ಕಾಂಗ್ರೆಸ್ ನಾಯಕರು ಕೇವಲ ಆಧಾರ ರಹಿತ ಆರೋಪ ಮಾಡುವುದರಲ್ಲಿ ನಿರತರಾಗಿದ್ದು, ಕಾಂಗ್ರೆಸ್ ನ ಸ್ಥಿತಿ ನೀರಿನಿಂದ ಹೊರಬಂದ ಮೀನಿನಂತಾಗಿದೆ. ಅಧಿಕಾರ ವಿಲ್ಲದೆ ಬದುಕಲು ಕಾಂಗ್ರೆಸ್ ಗೆ ಆಗ್ತಿಲ್ಲ ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಹೆಸರಿಗೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಬೆಂಗಳೂರಿನ ಕಾರ್ಯಕ್ಷಮತೆ, ಟೆಕ್ನಾಲಜಿ ಇಡೀ ವಿಶ್ವದಲ್ಲೇ ಉತ್ತಮವಾಗಿದೆ. ಇಡೀ ವಿಶ್ವಕ್ಕೆ ಬೆಂಗಳೂರಿನ ಕೊಡುಗಿದೆ ದಿನೇ ದಿನೇ ಹೆಚ್ಚಾಗ್ತಿದೆ. ಹಾಗೆಯೇ ಇಲ್ಲಿನ ಯುವಕರು ಉತ್ತಮ ಕೌಶಲ್ಯ ಹೊಂದಿದ್ದಾರೆಂದು ಹೇಳಿದರು.
ಬೆಂಗಳೂರಿನ ಏಳಿಗೆಗೆ ಯುವಕರು ತಮ್ಮ ಶ್ರಮ ವಹಿಸುತ್ತಿದ್ದಾರೆ. ಕೈಗಾರೀಕರಣ, ತಾಂತ್ರೀಕರಣದಲಿ ಯುವಕರ ಪಾತ್ರ ಹೆಚ್ಚಿದೆ
ನೂತನ ಅನ್ವೇಷಣೆಗಾಗಿ ಯುವಕರು ಕೆಲಸ ಮಾಡುತ್ತಿದ್ದಾರೆಂದು ಬೆಂಗಳೂರಿನ ಯುವಕರ ಗುಣಗಾನ ಮಾಡಿದರು.

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.