ETV Bharat / state

ಇಎಸ್​ಐ ಆಸ್ಪತ್ರೆಯಲ್ಲಿ ಕೊಳೆತ 2 ಶವ ಪತ್ತೆ ಪ್ರಕರಣ : ಕ್ರಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹ - bangalore ESI hospital

ಬೇಜವಾಬ್ದಾರಿತನ ಮತ್ತು ಆಮಾನವೀಯ ವರ್ತನೆಯ ಪರಾಕಾಷ್ಠೆ. ಈ ಕುರಿತು ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ..

ಇಎಸ್​ಐ ಆಸ್ಪತ್ರೆಯಲ್ಲಿ ಕೊಳೆತ 2 ಶವ ಪತ್ತೆ ಪ್ರಕರಣ

author img

By

Published : Nov 29, 2021, 4:25 PM IST

Updated : Nov 29, 2021, 4:42 PM IST

ಬೆಂಗಳೂರು : ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಇಎಸ್​ಐ ಆಸ್ಪತ್ರೆಯಲ್ಲಿ 15 ತಿಂಗಳ ನಂತರ ಮೃತದೇಹಗಳಿರುವುದು ಬೆಳಕಿಗೆ ಬಂದಿದೆ. ಈ ನಿರ್ಲಕ್ಷ್ಯದಲ್ಲಿ ಬಿಬಿಎಂಪಿ ಮತ್ತು ಇಎಸ್​​ಐ ಆಸ್ಪತ್ರೆ ಎರಡರ ಪಾತ್ರವೂ ಬಹಳ ಗಂಭೀರವಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಿ ಅಂತಾ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಕೋವಿಡ್-19ರ ಮೊದಲನೇ ಅಲೆಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಮೃತ ದೇಹಗಳು ಅಂತ್ಯಸಂಸ್ಕಾರವನ್ನು ಕಾಣದೆ ಶವಾಗಾರದಲ್ಲೇ ಕೊಳೆತ ಸ್ಥಿತಿಯಲ್ಲಿದ್ದ ಘಟನೆ 15 ತಿಂಗಳ ನಂತರ ಬೆಳಕಿಗೆ ಬಂದಿದೆ.

ಕ್ರಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹ
ಕ್ರಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹ

ಈ ನಿರ್ಲಕ್ಷ್ಯದಲ್ಲಿ ಬಿಬಿಎಂಪಿ ಮತ್ತು ಇಎಸ್ಐ ಆಸ್ಪತ್ರೆ ಎರಡರ ಪಾತ್ರವೂ ಬಹಳ ಗಂಭೀರವಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಿ ನಿರ್ದಿಷ್ಟವಾದ ವರದಿಯನ್ನು ತರಿಸಿಕೊಂಡು, ಈ ಅಮಾನವೀಯ ಕೃತ್ಯ ಜರುಗುವಲ್ಲಿ ಯಾರು ಕಾರಣರು ಎಂಬುದರ ಮೇಲೆ ಅತ್ಯಂತ ಕಠಿಣ ಕ್ರಮಕೈಗೊಳ್ಳಬೇಕೆಂದು ಕಾರ್ಮಿಕ ಸಚಿವರಿಗೆ ಕೋರಿದ್ದಾರೆ.

ಈ ರೀತಿಯ ಪ್ರಸಂಗ ಎಲ್ಲಿಯೂ ಜರುಗಬಾರದು. ಕೋವಿಡ್-19 ಪರಿಸ್ಥಿತಿಯಲ್ಲಿ ಬೇರೆ ಬೇರೆ ರೀತಿಯ ಕರುಳು ಹಿಂಡುವ ಘಟನೆಗಳನ್ನು ನಾವು ಕೇಳಿದ್ದೆವು.

ಆದರೆ, ಐಎಸ್​​ಐ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಅತ್ಯಂತ ದುರ್ದೈವ. ಬೇಜವಾಬ್ದಾರಿತನ ಮತ್ತು ಆಮಾನವೀಯ ವರ್ತನೆಯ ಪರಾಕಾಷ್ಠೆ. ಈ ಕುರಿತು ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.

Last Updated : Nov 29, 2021, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.