ETV Bharat / state

ಐದು ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದ್ರೆ ಕ್ಲಸ್ಟರ್ ಎಂದು ಘೋಷಣೆ - ಕಂಟೇನ್​​ಮೆಂಟ್​​ ವಲಯಗಳ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ಕಂಟೈನ್​​ಮೆಂಟ್​​ ವಲಯಗಳ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಇದರ ಅಡಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ಕ್ಲಸ್ಟರ್ ಎಂದು ಘೋಷಿಸಬಹುದಾಗಿದೆ. ವಸತಿ ಸಮುಚ್ಚಯಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದ ಅನ್ವಯ ಇಂತಹ ಪ್ರದೇಶಗಳನ್ನು ಮೈಕ್ರೋ ಕಂಟೈನ್​​ಮೆಂಟ್ ವಲಯವೆಂದು ಘೋಷಿಸಬೇಕು.

ಕೋವಿಡ್ ಪ್ರಕರಣಗಳು
ಕೋವಿಡ್ ಪ್ರಕರಣಗಳು
author img

By

Published : Jan 19, 2022, 8:22 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19ನ ರೂಪಾಂತರಿ ಓಮಿಕ್ರಾನ್ 3ನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ, ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಕಂಟೈನ್​​ಮೆಂಟ್​​ ವಲಯಗಳ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ಕ್ಲಸ್ಟರ್ ಘೋಷಿಸಬಹುದಾಗಿದೆ.

ಪ್ರಮುಖವಾಗಿ ನಗರ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ, ಆ ಸಾಲಿನಲ್ಲಿರುವ ಎಲ್ಲಾ ಮನೆಗಳು ಅಥವಾ 50 ಮೀಟರ್ ರೇಡಿಯಸ್​​ನಲ್ಲಿರುವ ಮನೆಗಳು, ಕಾರ್ಯಾಚರಣೆ ಸಾಧ್ಯವಾಗುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದ ಅನ್ವಯ ಘೋಷಿಸಬೇಕು.

ವಸತಿ ಸಮುಚ್ಚಯಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ ಆಯಾ ಮಹಡಿಗಳು (Floors) ಅಥವಾ ಕಾರ್ಯಾಚರಣೆ ಸಾಧ್ಯವಾಗುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದ ಅನ್ವಯ ಇಂತಹ ಪ್ರದೇಶಗಳನ್ನು ಮೈಕ್ರೋ ಕಂಟೈನ್​​ಮೆಂಟ್ ವಲಯವೆಂದು ಘೋಷಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ, ಆ ಸಾಲಿನಲ್ಲಿರುವ ಎಲ್ಲಾ ಮನೆಗಳ ವ್ಯಾಪ್ತಿಯನ್ನು ಮೈಕ್ರೋ ಕಂಟೈನ್​ಮೆಂಟ್ ವಲಯವೆಂದು ಘೋಷಿಸಬೇಕು.

15 ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದ್ರೆ ದೊಡ್ಡ ಕ್ಲಸ್ಟರ್:

15 ಅಥವಾ ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ಅದನ್ನು"ದೊಡ್ಡ ಕ್ಲಸ್ಟರ್" ಎಂದು ಪರಿಗಣಿಸಬೇಕು. ನಗರ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ - ಸದರಿ ಸಾಲಿನಲ್ಲಿರುವ ಎಲ್ಲಾ ಮನೆಗಳು ಅಥವಾ 100 ಮೀಟರ್ ರೇಡಿಯಸ್‌ನಲ್ಲಿರುವ ಮನೆಗಳು ಕಂಟೈನ್​​ಮೆಂಟ್ ವಲಯವೆಂದು ಘೋಷಿಸಬೇಕು. ವಸತಿ ಸಮುಚ್ಚಯಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ ಆಯಾ ಮಹಡಿಗಳು (Floors) ಅಥವಾ ಕಾರ್ಯಾಚರಣೆ ಸಾಧ್ಯವಾಗುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದ ಅನ್ವಯ ಇಂತಹ ಪ್ರದೇಶಗಳನ್ನು ಕಂಟೈನ್​​ಮೆಂಟ್ ವಲಯವೆಂದು ಘೋಷಿಸಬೇಕು.

ಇದನ್ನೂ ಓದಿ: ರಾಜ್ಯದಲ್ಲಿಂದು 40,499 ಜನರಿಗೆ ಕೊರೊನಾ ಪಾಸಿಟಿವ್.. 23,209 ಮಂದಿ ಚೇತರಿಕೆ

ಮೈಕ್ರೋ ಕಂಟೈನ್​​ಮೆಂಟ್ ಅಥವಾ ಕಂಟೈನ್​​ಮೆಂಟ್ ವಲಯಗಳನ್ನು ಜಾರಿ ಮಾಡುವಾಗ ಅಡಚಣೆಗಳಿದ್ದ ಸಂದರ್ಭದಲ್ಲಿ, ಜಿಲ್ಲಾಡಳಿತ/ ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಸಮಾಲೋಚಿಸಿ, ಸ್ಥಳೀಯ ಆರೋಗ್ಯ ಪ್ರಾಧಿಕಾರವು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

ಕಂಟೈನ್​ಮೆಂಟ್​ ವಲಯಗಳನ್ನು ಮುಕ್ತಗೊಳಿಸುವುದು (De-notification) :

ಮೈಕ್ರೋ ಕಂಟೈನ್​ಮೆಂಟ್ / ಕಂಟೈನ್​ಮೆಂಟ್ ವಲಯಗಳಲ್ಲಿ ಖಚಿತ ಕೋವಿಡ್-19 ಪ್ರಕರಣವು ವರದಿಯಾದ 7 ದಿನಗಳ ನಂತರ, ಯಾವುದೇ ಖಚಿತ ಪ್ರಕರಣಗಳು ವರದಿಯಾಗದಿದ್ದಲ್ಲಿ ಆಯಾ ಮೈಕ್ರೋ ಕಂಟೈನ್​​ಮೆಂಟ್ ವಲಯವನ್ನು ಮುಕ್ತಗೊಳಿಸಬಹುದಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.