ಬೆಂಗಳೂರು: ನಾಡಿನ ಖ್ಯಾತ ಉದ್ಯಮಿ ಆರ್.ಎನ್. ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿ, ಕೃಷಿಕ ಮನೆತನದಲ್ಲಿ ಜನಿಸಿ, ಉದ್ಯಮದತ್ತ ಮುಖ ಮಾಡಿದ ಆರ್.ಎನ್.ಶೆಟ್ಟಿ ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೋಟೆಲ್ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು ಎಂದು ತಿಳಿಸಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಸಂತಾಪ ಸೂಚಿಸಿ, ಭಗವಂತ ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಓದಿ: ಶಿಕ್ಷಣ ಪ್ರೇಮಿ, ಮುರುಡೇಶ್ವರದ ನಿರ್ಮಾತೃ ಆರ್.ಎನ್. ಶೆಟ್ಟಿ ನಿಧನ
-
ಹಲವು ವಿದ್ಯಾಸಂಸ್ಥೆಗಳ ಮೂಲಕ ವಿದ್ಯಾದಾನ ಮಾಡುತ್ತ ಸಮಾಜಮುಖಿ, ಧಾರ್ಮಿಕ ಸಂಸ್ಥೆಗಳ ನಿರ್ಮಾತೃವಾಗಿದ್ದ ಮಹಾದಾನಿ ಉದ್ಯಮಿ ಡಾ|| ಆರ್.ಎನ್. ಶೆಟ್ಟಿ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ಕರುಣಿಸಲಿ.
— H D Devegowda (@H_D_Devegowda) December 17, 2020 " class="align-text-top noRightClick twitterSection" data="
">ಹಲವು ವಿದ್ಯಾಸಂಸ್ಥೆಗಳ ಮೂಲಕ ವಿದ್ಯಾದಾನ ಮಾಡುತ್ತ ಸಮಾಜಮುಖಿ, ಧಾರ್ಮಿಕ ಸಂಸ್ಥೆಗಳ ನಿರ್ಮಾತೃವಾಗಿದ್ದ ಮಹಾದಾನಿ ಉದ್ಯಮಿ ಡಾ|| ಆರ್.ಎನ್. ಶೆಟ್ಟಿ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ಕರುಣಿಸಲಿ.
— H D Devegowda (@H_D_Devegowda) December 17, 2020ಹಲವು ವಿದ್ಯಾಸಂಸ್ಥೆಗಳ ಮೂಲಕ ವಿದ್ಯಾದಾನ ಮಾಡುತ್ತ ಸಮಾಜಮುಖಿ, ಧಾರ್ಮಿಕ ಸಂಸ್ಥೆಗಳ ನಿರ್ಮಾತೃವಾಗಿದ್ದ ಮಹಾದಾನಿ ಉದ್ಯಮಿ ಡಾ|| ಆರ್.ಎನ್. ಶೆಟ್ಟಿ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ಕರುಣಿಸಲಿ.
— H D Devegowda (@H_D_Devegowda) December 17, 2020
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಟ್ವೀಟ್ ಮಾಡಿದ್ದು, ಉದ್ಯಮಿ ಡಾ. ಆರ್.ಎನ್. ಶೆಟ್ಟಿ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು ಎಂದು ತಿಳಿಸಿದ್ದಾರೆ.