ಬೆಂಗಳೂರು: ಸಿವಿ ರಾಮನ್ ನಗರ ಶಾಸಕ ರಘು ಆಪ್ತ, ಬಿಜೆಪಿ ಯುವ ಮುಖಂಡ ಲೋಕೇಶ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಮೂವರು ಆರೋಪಿಗಳು ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ನಿನ್ನೆ ರಾತ್ರಿ 10:30 ರ ಸುಮಾರಿಗೆ ಲೋಕೇಶ್ ರ ಲಕ್ಷ್ಮೀಪುರ ನಿವಾಸದ ಬಳಿ ಕಾರಿನಿಂದ ಕೆಳಗಿಳಿಯೋ ವೇಳೆ ಹಿಂಬದಿಯಿಂದ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ.
ಈ ವೇಳೆ ಲೋಕೇಶ್ ಜೊತೆಯಲ್ಲಿದ್ದ ಅವರ ಸಹೋದರ ಹರೀಶ್ ರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸದ್ಯ ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹಲ್ಲೆ ನಡೆಸಲು ಬಂದಿದ್ದವರ ಪೈಕಿ ಒರ್ವನಿಗೆ ಮಚ್ಚಿನೇಟು ಬಿದ್ದಿದ್ದು, ಆತನೂ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾನೆ. ಘಟನೆ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.