ETV Bharat / state

ಅಪ್ರಾಪ್ತೆಗೆ ಮುತ್ತು ಕೊಟ್ಟು ಪರಾರಿಯಾದ ಪ್ರಕರಣ: FIR ದಾಖಲಿಸುವಂತೆ ಡಿಸಿಪಿ ಸೂಚನೆ - ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಕಿರುಕುಳ ಪ್ರಕರಣ

ಅಪ್ರಾಪ್ತೆಗೆ ಮುತ್ತು ಕೊಟ್ಟು ಪರಾರಿಯಾಗಿದ್ದ ಪ್ರಕರಣದ ಆರೋಪಿ ಯುವಕನ ವಿರುದ್ಧ ಎಫ್​ಐಆರ್​ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಪೀಣ್ಯ ಪೊಲೀಸರಿಗೆ ಡಿಸಿಪಿ ಸೂಚಿಸಿದ್ದಾರೆ.

dcp orders to arrest accuse who kissed minor
FIR ದಾಖಲಿಸುವಂತೆ ಡಿಸಿಪಿ ಸೂಚನೆFIR ದಾಖಲಿಸುವಂತೆ ಡಿಸಿಪಿ ಸೂಚನೆ
author img

By

Published : Aug 29, 2021, 5:12 PM IST

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಲ್ವರು ಪುಂಡರ ಜೊತೆ ಬಂದಿದ್ದ ಓರ್ವ ಯುವಕ 16 ವರ್ಷದ ಅಪ್ರಾಪ್ತೆಯ ಮೇಲೆರಗಿ ಮುತ್ತಿಟ್ಟ ಪ್ರಕರಣ ಇತ್ತೀಚೆಗೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಪೀಣ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಅಪ್ರಾಪ್ತೆಗೆ ಕಿರುಕುಳ ಆರೋಪ: ಮಾಹಿತಿ ಕಲೆಹಾಕಿದ ಬೆಂಗಳೂರು ಪೊಲೀಸರು

ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅಪ್ರಾಪ್ತೆ ಕಿರುಚಾಡ್ತಿದ್ದಂತೆ ಯುವಕ ಮುತ್ತು ಕೊಟ್ಟು ಪರಾರಿಯಾಗಿದ್ದ. ಮುತ್ತು ನೀಡಿದ್ದು ಅಲ್ಲದೇ ಸೋಮವಾರ ಒಬ್ಬಳೇ ಸಿಗು ಎಂದು ಹೇಳಿದ್ದಾನೆ.

ಇದನ್ನೂ ಓದಿ:ಲೈಂಗಿಕ ಉದ್ದೇಶವಿಲ್ಲದೆ ಮಗುವಿನ ಕೆನ್ನೆಗಳನ್ನು ಮುಟ್ಟುವುದು ಅಪರಾಧವಲ್ಲ: ಬಾಂಬೆ ಹೈಕೋರ್ಟ್

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಎಫ್​​ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿ, ದೂರು ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿರೋದು ಗೊತ್ತಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರನ್ನು ಡಿಸಿಪಿ ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.