ETV Bharat / state

ನಾನ್ ಕೋವಿಡ್ ರೋಗಿಗಳಿಗೂ ಚಿಕಿತ್ಸೆ ನೀಡಿ: ಡಿಸಿಪಿ‌‌ ಇಶಾಪಂತ್ ಸೂಚನೆ

author img

By

Published : May 3, 2021, 12:36 PM IST

ಆರೋಗ್ಯ ಇಲಾಖೆ ಈಗಾಗಲೇ ಕೆಲ ನಿಯಮ ತಂದಿದೆ. ಕೋವಿಡ್ ರೋಗಿಗಳಿಗೆ ಶ್ವಾಸಕೋಶ ಸಮಸ್ಯೆಯಾಗುವ ಹಾಗೆ ನಾನ್ ಕೋವಿಡ್ ರೋಗಿಗಳಿಗೂ ಶ್ವಾಸಕೋಶದಲ್ಲಿ ಸಮಸ್ಯೆ ಉಲ್ಬಣಿಸುತ್ತಿದೆ..

DCP isha pant
ಡಿಸಿಪಿ‌‌ ಇಶಾಪಂತ್

ಬೆಂಗಳೂರು : ನಗರದಲ್ಲಿ ದಿನೇ‌ದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಡ್, ಆಕ್ಸಿಜನ್ ಸಿಗದೆ ಸೋಂಕಿತರು ಸಾಯುತ್ತಿದ್ದಾರೆ‌. ಮತ್ತೊಂದೆಡೆ ನಾನ್‌ ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

ಜೀವ ಉಳಿಸಿಕೊಳ್ಳಲು ರೋಗಿಗಳು ಆಸ್ಪತ್ರೆಯಿಂದ‌ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಮಹತ್ವ ನೀಡುತ್ತಿರುವುದರಿಂದ ನಾನ್ ಕೋವಿಡ್ ರೋಗಿಗಳ ಪಾಡು ಹೇಳ ತೀರದಾಗಿದೆ‌.

  • A lot of critical patients having severe lung infection have COVID Negative report. Hence, they are not able to get admission in hospitals because of procedural issues. This order does away with that&instructs hospitals to admit people having lung damage despite Covid -ve report pic.twitter.com/gu0AyGe70w

    — Isha Pant (@isha_pant) April 30, 2021 " class="align-text-top noRightClick twitterSection" data=" ">

ಹೊಸದಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೂ ನೆಗೆಟಿವ್ ವರದಿ ನೀಡಿ ಖಾಸಗಿ‌ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ ಎಂದು ನೋಡಲ್ ಅಧಿಕಾರಿ ಹಾಗೂ ಕಮಾಂಡ್ ಸೆಂಟರ್ ಡಿಸಿಪಿ ಇಶಾಪಂತ್ ಟ್ವಿಟರ್​ನಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

ಆರೋಗ್ಯ ಇಲಾಖೆ ಈಗಾಗಲೇ ಕೆಲ ನಿಯಮ ತಂದಿದೆ. ಕೋವಿಡ್ ರೋಗಿಗಳಿಗೆ ಶ್ವಾಸಕೋಶ ಸಮಸ್ಯೆಯಾಗುವ ಹಾಗೆ ನಾನ್ ಕೋವಿಡ್ ರೋಗಿಗಳಿಗೂ ಶ್ವಾಸಕೋಶದಲ್ಲಿ ಸಮಸ್ಯೆ ಉಲ್ಬಣಿಸುತ್ತಿದೆ.

ಆದರೆ, ನೆಗೆಟಿವ್ ರಿಪೋರ್ಟ್ ಎಂದು ಅವರಿಗೆ ಚಿಕಿತ್ಸೆ ನೀಡದೆ ಕಳಿಸಲಾಗುತ್ತಿದೆ. ನಾನ್ ಕೋವಿಡ್ ರೋಗಿಗಳೂ ಕೂಡ ಇದರಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ಕೊಡಬೇಕು ಎಂದು ಇಶಾಪಂತ್ ಸೂಚನೆ ನೀಡಿದ್ದಾರೆ.

ಓದಿ: ಚಾಮರಾಜನಗರಕ್ಕೆ ತೆರಳಿ ಪರಿಸ್ಥಿತಿ ನಿಭಾಯಿಸಿ : ಸುಧಾಕರ್‌, ಸುರೇಶ್‌ಕುಮಾರ್​ಗೆ ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.