ETV Bharat / state

ಬಾಂಬ್ ಪತ್ತೆ: ಪೊಲೀಸರ ಸಾಮರ್ಥ್ಯ ಪ್ರಶಂಸಿಸಿದ ಡಿಸಿಎಂ ಸವದಿ - Bomb detected at Mangalore airport news

ನಿನ್ನೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸಿರುವ ಕೀರ್ತಿ ನಮ್ಮ ರಾಜ್ಯದ ಪೊಲೀಸ್ ಇಲಾಖೆಗೆ ಸಲ್ಲುತ್ತದೆ. ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

DCM Savadi congratulate the Police department
ಡಿಸಿಎಂ ಲಕ್ಷ್ಮಣ ಸವದಿ
author img

By

Published : Jan 21, 2020, 4:45 PM IST

ಬೆಂಗಳೂರು: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸುವ ಮೂಲಕ ಹಲವಾರು ಅಮಾಯಕರ ಸಾವು ನೋವುಗಳನ್ನು ತಡೆದಂತಹ ಕೀರ್ತಿ ನಮ್ಮ ರಾಜ್ಯದ ಪೊಲೀಸ್ ಇಲಾಖೆಗೆ ಸಲ್ಲುತ್ತದೆ. ಈ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆ ಅನಿಸುತ್ತಿದೆ. ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

DCM Savadi congratulate the Police department
ಬಾಂಬ್ ಪತ್ತೆ: ಪೊಲೀಸರ ಸಾಮರ್ಥ್ಯ ಪ್ರಶಂಸಿಸಿದ ಡಿಸಿಎಂ ಸವದಿ

ಕರ್ನಾಟಕವು ಶಾಂತಿಪ್ರಿಯ ನಾಡಾಗಿದೆ. ಇಲ್ಲಿ ಭಯೋತ್ಪಾದನೆ ಅಥವಾ ದುಷ್ಕೃತ್ಯಗಳನ್ನು ನಡೆಸುವ ಕೆಲವು ವಿಚ್ಛಿದ್ರಕಾರಿ ಶಕ್ತಿಗಳ ಆಟ ನಮ್ಮ ಸರ್ಕಾರ ಮತ್ತು ಸಮರ್ಥ ಪೊಲೀಸರ ಎದುರು ನಡೆಯುವುದಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಪ್ರತಿಭಟನೆಯ ನೆಪದಲ್ಲಿ ಶಾಂತಿ ಕದಡುವ ಮತ್ತು ದಂಗೆ ಹಿಂಸಾಕೃತ್ಯಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಾಗಲೂ ಇದೇ ಪೊಲೀಸರು ತಮ್ಮ ಮೇಲಿನ ದಾಳಿಯನ್ನು ಲೆಕ್ಕಿಸದ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ರೀತಿಯ ಸಮಾಜದ್ರೋಹಿಗಳ ಒತ್ತಡಕ್ಕೆ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವತ್ತೂ ಮಣಿಯುವುದಿಲ್ಲ ಅಪರಾಧಿಗಳು ಎಷ್ಟೇ ಕುತಂತ್ರ ನಡೆಸಿದರೂ ಅವರನ್ನು ಬಲೆ ಹಾಕುವ ತನಕ ನಾವು ವಿಶ್ರಮಿಸುವುದಿಲ್ಲ. ಮಂಗಳೂರಿನ ಘಟನೆಯ ಹಿಂದಿರುವ ಶಂಕಿತ ಆರೋಪಿಯ ಕುರಿತು ಈಗಾಗಲೇ ಸಾಕಷ್ಟು ಮಾಹಿತಿಗಳನ್ನೂ ಪೊಲೀಸರು ಸಂಗ್ರಹಿಸಿದ್ದು, ಸದ್ಯದಲ್ಲಿಯೇ ಆತನನ್ನು ಸದೆಬಡೆಯುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸವೂ ನನಗಿದೆ ಎಂದಿದ್ದಾರೆ.

ಯಾವುದೇ ಸಂಶಯಾಸ್ಪದ ಸಂಗತಿಗಳು ಅಥವಾ ನಡವಳಿಕೆಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ನೆರವಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Intro:

ಬೆಂಗಳೂರು: ಮಂಗಳೂರಿನ ವಿಮಾನನಿಲ್ದಾಣದಲ್ಲಿ ಬಾಂಬ್ ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸುವ ಮೂಲಕ ಹಲವಾರು ಅಮಾಯಕರ ಸಾವು ನೋವುಗಳನ್ನು ತಡೆದಂತಹ ಕೀರ್ತಿ ನಮ್ಮ ರಾಜ್ಯದ ಪೊಲೀಸ್ ಇಲಾಖೆಗೆ ಸಲ್ಲುತ್ತದೆ. ಈ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆ ಅನಿಸುತ್ತಿದೆ. ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕರ್ನಾಟಕವು ಶಾಂತಿಪ್ರಿಯ ನಾಡಾಗಿದೆ. ಇಲ್ಲಿ ಭಯೋತ್ಪಾದನೆ ಅಥವಾ ದುಷ್ಕೃತ್ಯಗಳನ್ನು ನಡೆಸುವ ಕೆಲವು ವಿಚ್ಛಿದ್ರಕಾರಿ ಶಕ್ತಿಗಳ ಆಟ ನಮ್ಮ ಸರ್ಕಾರ ಮತ್ತು ಸಮರ್ಥ ಪೊಲೀಸರ ಎದುರು ನಡೆಯುವುದಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಪ್ರತಿಭಟನೆಯ ನೆಪದಲ್ಲಿ ಶಾಂತಿ ಕದಡುವ ಮತ್ತು ದಂಗೆ ಹಿಂಸಾಕೃತ್ಯಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಾಗಲೂ ಇದೇ ಪೊಲೀಸರು ತಮ್ಮ ಮೇಲಿನ ದಾಳಿಯನ್ನು ಲೆಕ್ಕಿಸದೆ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ರೀತಿಯ ಸಮಾಜದ್ರೋಹಿಗಳ ಒತ್ತಡಕ್ಕೆ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವತ್ತೂ ಮಣಿಯುವುದಿಲ್ಲ ಅಪರಾಧಿಗಳು ಎಷ್ಟೇ ಕುತಂತ್ರ ನಡೆಸಿದರೂ ಅವರನ್ನು ಬಲೆ ಹಾಕುವತನಕ ನಾವು ವಿಶ್ರಮಿಸುವುದಿಲ್ಲ. ಮಂಗಳೂರಿನ ಘಟನೆಯ ಹಿಂದಿರುವ ಶಂಕಿತ ಆರೋಪಿಯ ಕುರಿತು ಈಗಾಗಲೇ ಸಾಕಷ್ಟು ಮಾಹಿತಿಗಳನ್ನೂ ಪೊಲೀಸರು ಸಂಗ್ರಹಿಸಿದ್ದು, ಸದ್ಯದಲ್ಲಿಯೇ ಆತನನ್ನು ಸದೆಬಡೆಯುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸವೂ ನನಗಿದೆ ಎಂದಿದ್ದಾರೆ.

ಯಾವುದೇ ಸಂಶಯಾಸ್ಪದ ಸಂಗತಿಗಳು ಅಥವಾ ನಡವಳಿಕೆಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ನೆರವಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Body:.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.